
ಅಸ್ಸಾಂನ ಜೋರ್ಹತ್ನಲ್ಲಿ ನಡೆದ ಕಳ್ಳತನ ಪ್ರಕರಣವೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಯುವಕನೊಬ್ಬ ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 50 ಲಕ್ಷ ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದಾನೆ. ಕದ್ದ ಹಣದ ಗಮನಾರ್ಹ ಭಾಗವನ್ನು ತನ್ನ ಗೆಳತಿಗೆ ಖರ್ಚು ಮಾಡಿದ್ದಾನೆ. ಸುಮಾರು 1.5 ಲಕ್ಷ ಮೌಲ್ಯದ ಐಫೋನ್ ಅನ್ನು ಗರ್ಲ್ ಫ್ರೆಂಡ್ ಗೆ ಗಿಫ್ಟ್ ಆಗಿ ನೀಡಿದ್ದಾನೆ.
ಮನೆ ಮಗನೇ ಮನೆಗೆ ಕನ್ನ ಹಾಕಿದ್ದಾನೆ. ಮನೆಯಲ್ಲಿದ್ದ ಹಣವನ್ನು ಕದ್ದ ಆರೋಪಿ ಹೆಸರು ಯಶ್ ಧನುಕ. ಪೋಷಕರು ಇಲ್ಲದಿದ್ದಾಗ ಲಾಕರ್ನಿಂದ ನಗದು ಮತ್ತು ಚಿನ್ನಾಭರಣಗಳನ್ನು ಯಶ್ ಧನುಕ ಕದ್ದಿದ್ದಾನೆ. ಪೋಷಕರು ಮನೆಗೆ ಬಂದಾಗ ಬೆಲೆಬಾಳುವ ವಸ್ತುಗಳು ಕಾಣೆಯಾಗಿರುವುದು ಕಂಡುಬಂದಿದೆ. ಇದರ ನಂತರ, ಯಶ್ ತಂದೆ ಆಗಸ್ಟ್ 24 ರಂದು ಜೋರ್ಹತ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಯಶ್ ಧನುಕ ಜೊತೆ ಎಫ್ಐಆರ್ನಲ್ಲಿ ಜಿತೇಂದ್ರ ಸೋಮಾನಿ, ರೋಹಿತ್ ಪ್ರಸಾದ್ ಮತ್ತು ಪಬಾಲಿ ದತ್ತ ಹೆಸರಿದೆ. ಇವರು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಹೇಗೆ ಕದ್ದಿದ್ದರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಸಮಯದಲ್ಲಿ, ಯಶ್ ತನ್ನ ಸ್ನೇಹಿತರಾದ ಜಿತೇಂದ್ರ ಸೋಮಾನಿ ಮತ್ತು ರೋಹಿತ್ ಪ್ರಸಾದ್ ಅವರೊಂದಿಗೆ ಕಳ್ಳತನಕ್ಕೆ ಪ್ಲಾನ್ ಮಾಡಿದ್ದಾಗಿ ಬಹಿರಂಗಪಡಿಸಿದ್ದಾನೆ. ಸ್ನೇಹಿತರ ಪ್ಲಾನ್ ನಂತೆ ಕಳ್ಳತನ ಮಾಡಿರೋದಾಗಿ ಯಶ್ ಹೇಳಿದ್ದಾನೆ.
ಕದ್ದ ಹಣದಲ್ಲಿ, ಪಬಾಲಿ ದತ್ತಗಾಗಿ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಗಿ ಯಶ್ ಬಹಿರಂಗಪಡಿಸಿದ್ದಾನೆ. ಇದರಲ್ಲಿ ಸುಮಾರು 1.5 ಲಕ್ಷ ರೂಪಾಯಿಯನ್ನು ಐಫೋನ್ ಖರೀದಿಗೆ ಬಳಸಲಾಗಿದೆ. ನನಗೆ ನಿಜವಾಗಿಯೂ ವಿಷಾದವಿದೆ. ಜಿತು ಸೋಮಾನಿ ನನ್ನನ್ನು ದಾರಿ ತಪ್ಪಿಸಿದರು ಎಂದು ಯಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ.
ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಮಾಹಿತಿ ಹೊರಬಿದ್ದಿದೆ. ಯಶ್ ಸ್ವತಃ ಅಹಮದಾಬಾದ್ಗೆ ಹೋಗಲಿಲ್ಲ. ವರದಿಗಳ ಪ್ರಕಾರ, ಜಿತೇಂದ್ರ ಸೋಮಾನಿ ಆಗಸ್ಟ್ 4 ರಂದು ಅಹಮದಾಬಾದ್ಗೆ ಹೋಗಿದ್ದರು, ಆದರೆ ಯಶ್ ಅಸ್ಸಾಂನಲ್ಲಿಯೇ ಇದ್ದರು. ನಂತರ ಅವರನ್ನು ಜೋರ್ಹತ್ ಪೊಲೀಸರು ಬಂಧಿಸಿದ್ದರು. ಯಶ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕದ್ದ ಸಂಪೂರ್ಣ ಹಣ ಮತ್ತು ಚಿನ್ನಾಭರಣಗಳನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ