Latest Videos

ತಗಡೂರು: ದನ ಕಟ್ಟುವ ವಿಚಾರಕ್ಕೆ ಜಗಳ ಕೊಲೆಯಲ್ಲಿ ಅಂತ್ಯ!

By Ravi JanekalFirst Published May 25, 2024, 8:31 AM IST
Highlights

ದನ ಕಟ್ಟುವ ವಿಚಾರಕ್ಕೆ ನಡೆದ ದಾಯಾದಿ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ. ವಿನೋದ(45) ಮೃತ ಮಹಿಳೆ. ಸ್ವಾಮಿ ಪುತ್ರ ಅಭಿಷೇಕ್, ಹಲ್ಲೆ ಮಾಡಿ ಪರಾರಿಯಾಗಿರುವ ಆರೋಪಿ.

ಮೈಸೂರು (ಮೇ.25): ದನ ಕಟ್ಟುವ ವಿಚಾರಕ್ಕೆ ನಡೆದ ದಾಯಾದಿ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ.

ವಿನೋದ(45) ಮೃತ ಮಹಿಳೆ. ಸ್ವಾಮಿ ಪುತ್ರ ಅಭಿಷೇಕ್, ಹಲ್ಲೆ ಮಾಡಿ ಪರಾರಿಯಾಗಿರುವ ಆರೋಪಿ. ತಗಡೂರು ಗ್ರಾಮದ ನಿಂಗಣ್ಣ ಎಂಬುವವರ ಪತ್ನಿಯಾಗಿರುವ ವಿನೋದ. ಸಂಬಂಧದಲ್ಲಿ ಸಹೋದರರೇ ಆಗಿರುವ ನಿಂಗಣ್ಣ ಹಾಗೂ ಸ್ವಾಮಿ ಕುಟುಂಬದವರ ನಡುವೆ ದನದ ಕೊಟ್ಟಿಗೆ ವಿಚಾರಕ್ಕೆ ಗಲಾಟೆಯಾಗಿತ್ತು. ಗಲಾಟೆಯಲ್ಲಿ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಸ್ವಾಮಿ ಪುತ್ರ ಅಭಿಷೇಕ್ ಎಂಬುವವನು ನಿಂಗಣ್ಣ ಪತ್ನಿ ಜೊತೆ ಜಗಳ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ

 ಹಲ್ಲೆಗೊಳಗಾದ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇತ್ತ ಹಲ್ಲೆ ಬಳಿಕ ಪರಾರಿಯಾಗಿರುವ ಆರೋಪಿ ಅಭಿಷೇಕ್. ಸದ್ಯ ಘಟನೆ ಸಂಬಂಧ ಕವಲಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರು: ಜಗಳದ ವೇಳೆ ತಳ್ಳಾಟ, ವಿದ್ಯುತ್‌ ತಾಗಿ ಪೋಕ್ಸೋ ಆರೋಪಿ ಸಾವು

click me!