Chikkamagaluru: ಕಾಫಿನಾಡಿನ ಪಾಕಿಸ್ತಾನ ಪ್ರೇಮಿಗೆ ನ್ಯಾಯಾಂಗ ಬಂಧನ!

By Govindaraj S  |  First Published May 24, 2024, 6:21 PM IST

ಪಾಕಿಸ್ತಾನ ಜಿಂದಾಬಾದ್ ನರೇಂದ್ರ ಮೋದಿ ಕೂ... ಎಂದು ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಸ್ಕರ್ ಕೊಪ್ಪ ಎಂಬಾತನನ್ನು ಕೊಪ್ಪ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮೇ.24): ಪಾಕಿಸ್ತಾನ ಜಿಂದಾಬಾದ್ ನರೇಂದ್ರ ಮೋದಿ ಕೂ... ಎಂದು ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಸ್ಕರ್ ಕೊಪ್ಪ ಎಂಬಾತನನ್ನು ಕೊಪ್ಪ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಎನ್ ಆರ್ ಪುರ ಕೋರ್ಟ್ ಆರೋಪಿಗೆ ಜೂನ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 

Tap to resize

Latest Videos

undefined

ಫೇಸ್ ಬುಕ್ ನಲ್ಲಿ ಪೋಸ್ಟ್: ಪಾಕಿಸ್ತಾನ ಜಿಂದಾಬಾದ್ , ಮೋದಿ , ಕೊಪ್ಪ ಭಜರಂಗದಳದ ವಿರುದ್ಧ ಸಹಾ ಅವಹೇಳನಕಾರಿ ಆಗಿ ಆಸ್ಗರ್ ಕೊಪ್ಪ ಎಂಬ ಫೇಸ್ಬುಕ್ ಅಕೌಂಟ್ನಲ್ಲಿ ಪೋಸ್ಟ್ ಹಾಕಿದ್ದು ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೋಸ್ಟ್ ಮಾಡಿದ ಬಳಿಕ ಆಕೌಂಟನ್ನೇ ಡಿಲೀಟ್ ಮಾಡಿದ ಭೂಪ ಅಸ್ಗರ್ನನ್ನು ಕೊಪ್ಪ ಪೊಲೀಸರು ಇಂದು ಬೆಳಿಗ್ಗೆ ವಶಕ್ಕೆ ಪಡೆದಿದ್ದರು. ಸುಮೋಟೋ ಕೇಸ್ ಅನ್ನು ದಾಖಲಿಸಿ ವಿಚಾರಣೆ ನಡೆಸಿದ ಪೊಲೀಸರು ಇಂದು  ನ್ಯಾಯಾಲಯಕ್ಕೆ ಹಾಜರುಪಡಿಸಿದರು. 

ಧರ್ಮಸ್ಥಳ ದರ್ಶನ ಮುಗಿಸಿ ಬರುವಾಗ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ಸಾವು!

ವಿಚಾರಣೆ ನಡೆಸಿದ ಎನ್ ಆರ್ ಪುರ ಕೋರ್ಟ್ ಆರೋಪಿಗೆ ಜೂನ್ 6ರವರೆಗೆ ನ್ಯಾಯಾಂಗ ಬಂಧನದ ಆದೇಶವನ್ನು ನೀಡಿತ್ತು.  ಕೊಪ್ಪ ಭಜರಂಗದಳದ ವಿರುದ್ಧ ಕೂಡಾ ಪೋಸ್ಟ್ ಹಾಕಿರುವ ಇವನ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಯನ್ನು ಸಾರ್ವಜನಿಕರಿಗೆ ಒಪ್ಪಿಸುವಂತೆ ಒತ್ತಾಯ ಸಹಾ ಕೇಳಿ ಬಂದಿತ್ತು.

click me!