ಟೆಕ್ನಾಲಜಿ ಬೆಳೆದಂತೆಲ್ಲ ಆನ್ ಲೈನ್ ವಂಚನೆಗಳು ಜಾಸ್ತಿಯಾಗ್ತಿವೆ. ದಿನಕ್ಕೊಂದು ವೇಶದಲ್ಲಿ ಆನ್ ಲೈನ್ ವಂಚಕರು ಜನರಿಗೆ ಮಕ್ಮಲ್ ಟೋಪಿ ಹಾಕ್ತಿದ್ದಾರೆ. ವಿಜಯಪುರ ಜಿಲ್ಲೆಯ ಹೊಟೇಲ್ ಉದ್ಯಮಿಗೆ ಅಕೌಂಟ್ ಬ್ಲಾಕ್ ಆಗಿದೆ ಸರಿಮಾಡಿ ಕೊಡ್ತೀವಿ ಎಂದು ನಂಬಿಸಿ ಬರೊಬ್ಬರಿ 8 ಅಕೌಂಟಗಳಿಂದ ಹಣ ಲಪಟಾಯಿಸಿದ್ದಾರೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಸೆ.04): ಟೆಕ್ನಾಲಜಿ ಬೆಳೆದಂತೆಲ್ಲ ಆನ್ ಲೈನ್ ವಂಚನೆಗಳು ಜಾಸ್ತಿಯಾಗ್ತಿವೆ. ದಿನಕ್ಕೊಂದು ವೇಶದಲ್ಲಿ ಆನ್ ಲೈನ್ ವಂಚಕರು ಜನರಿಗೆ ಮಕ್ಮಲ್ ಟೋಪಿ ಹಾಕ್ತಿದ್ದಾರೆ. ವಿಜಯಪುರ ಜಿಲ್ಲೆಯ ಹೊಟೇಲ್ ಉದ್ಯಮಿಗೆ ಅಕೌಂಟ್ ಬ್ಲಾಕ್ ಆಗಿದೆ ಸರಿಮಾಡಿ ಕೊಡ್ತೀವಿ ಎಂದು ನಂಬಿಸಿ ಬರೊಬ್ಬರಿ 8 ಅಕೌಂಟಗಳಿಂದ ಹಣ ಲಪಟಾಯಿಸಿದ್ದಾರೆ.
ಗುಮ್ಮಟನಗರಿಯ ಹೊಟೇಲ್ ಉದ್ಯಮಿಗೆ ಬಿತ್ತು ಮಕ್ಮಲ್ ಟೋಪಿ: ಆನ್ ಲೈನ್ ವಂಚನೆಗಳ ಬಗ್ಗೆ ಸೈಬರ್ ಪೊಲೀಸರು ಆಗಾಗ್ಗ ಎಚ್ಚರಿಸುತ್ತಲೆ ಇರ್ತಾರೆ. ಆನ್ ಲೈನ್ ಮೂಲಕ ವ್ಯವಹಾರಗಳನ್ನ ಮಾಡುವಾಗ ಜಾಗೃತೆವಹಿಸಯಂತೆಯು, ಒಟಿಪಿಗಳನ್ನ ಶೇರ್ ಮಾಡದಂತೆಯು ಎಚ್ಚರಿಕೆಯನ್ನ ಕೊಡ್ತಾನೆ ಇರ್ತಾರೆ. ಆದ್ರೆ ಇದೆಲ್ಲದರ ನಡುವೆ ಜನರು ಯಾಮಾರೋದು ಮಾತ್ರ ನಿಲ್ತಿಲ್ಲ. ವಿಜಯಪುರ ನಗರ ಹೊಟೇಲ್ ಉದ್ಯಮಿ ಬಸಯ್ಯ ವಿಭೂತಿಮಠ ಎಂಬುವರಿಗೆ ಸೈಬರ್ ವಂಚಕರು ಬ್ಯಾಂಕ್ ಅಕೌಂಟ್ ಬ್ಲಾಕ್ ಆಗಿದೆ ಓಪನ್ ಮಾಡಿಕೊಡೊದಾಗಿ ಹೇಳಿ ಮಕ್ಮಲ್ ಟೋಪಿ ಹಾಕಿದ್ದಾರೆ.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಇಲ್ಲೇ ಇರಲಿದೆ: ಶಾಸಕ ಇಕ್ಬಾಲ್ ಹುಸೇನ್
ಕೆವೈಸಿ ನೆಪ ಹೇಳಿ ಹಣ ದೋಚಿದರು: ಕೆನರಾ ಬ್ಯಾಂಕ್ ಅಕೌಂಟ್ ಬ್ಲಾಕ್ ಆಗಿದೆ ಕೆವೈಸಿ ಮಾಡಿಸಿ ಎಂದು ವಂಚಕರಿಂದ ಕರೆ ಬಂದಿದೆ. ಇದನ್ನ ನಂಬಿದ ಬಸಯ್ಯ ಬ್ಯಾಂಕ್ ಅಕೌಂಟ್ ನಂಬರ್, ಓಟಿಪಿ ಹಾಗೂ ಎಟಿಎಂ ನಂಬರ್ ಗಳನ್ನು ಸೇರ್ ಮಾಡಿದ್ದಾರೆ. ಬಳಿಕ ವಂಚಕರು ಅಕೌಂಟನಲ್ಲಿದ್ದ ಹಣವನ್ನೆಲ್ಲ ದೋಚಿದ್ದಾರೆ. ಹಣ ಡೆಬಿಟ್ ಆಗಿರೋ ಮೆಸೆಜ್ ಬಂದ ಬಳಿಕವಷ್ಟೆ ವಂಚನೆ ಬಯಲಾಗಿದೆ. ಈಗ ಬಸಯ್ಯ ವಿಜಯಪುರ ಸಿಇಎನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಅಕೌಂಟ್ ಬಂದ್ ಆಗೋ ಬೆದರಿಕೆ ಹಾಕಿದ್ರು: ಹೀಗೆ ಹಣ ಹೊಡೆಯೋದಕ್ಕು ಸೈಬರ್ ಕಳ್ಳರು ಐಡಿಯಾ ಉಪಿಯೋಗಿಸಿದ್ದಾರೆ. ನಿಮ್ಮ ಬ್ಯಾಂಕ್ ಅಕೌಂಟ್ ಈ ವರೆಗೆ ಕೆವೈಸಿ ಆಗಿಲ್ಲ. ಕೆವೈಸಿ ಮಾಡಿಸದಿದ್ದರೆ ನಿಮ್ಮ ಎಲ್ಲ ಬ್ಯಾಂಕ್ ಅಕೌಂಟ್ ಗಳು ಬಂದ್ ಆಗುತ್ವೆ ಎಂದು ಭಯಬೀಳಿಸಿದ್ದಾರೆ. ಮೊದಲೆ ಹೊಟೇಲ್ ಉಧ್ಯಮಿಯಾಗಿರೋ ಬಸಯ್ಯ ಅಕೌಂಟ್ ಗಳೆ ಬಂದಾದ್ರೆ ಮುಂದೇನು ಅಂತಾ ವಂಚಕರು ಹೇಳಿದಂತೆ ಕೇಳಿದ್ದಾರೆ. ಅಲ್ಲದೆ ತಮ್ಮ ಬಳಿಯಿದ್ದ ಎಲ್ಲ ಬ್ಯಾಂಕ್ ಅಕೌಂಟ್ ನಂಬರ್, ಒಟಿಪಿ ಸಹಿತ ವಂಚರೊಂದಿಗೆ ಹಂಚಿಕೊಂಡಿದ್ದಾರೆ.
8 ಅಕೌಂಟ್‌ಗಳನ್ನು ಖಾಲಿ ಮಾಡಿದ ಖದೀಮರು: ಒಟ್ಟು 8 ಅಕೌಂಟ್ ಗಳಿಂದ ಬರೊಬ್ಬರಿ 90 ಸಾವಿರದ ವರೆಗೆ ಹಣ ಲಪಟಾಯಿಸಿ ಅಕೌಂಟ್ ಗಳನ್ನೆ ಖಾಲಿ ಮಾಡಿದ್ದಾರೆ. ಸೈಬರ್ ಕಳ್ಳರು ಕೇಳಿದಂತೆ 8 ಅಕೌಂಟ್ ನಂಬರ್, ಪಾಸ್ ಬುಕ್ ನಂಬರ್ ಹಾಗೂ ಎಟಿಎಂಗಳ ನಂಬರ್ ಸಹಿತ ವಿಭೂತಿಮಠ ಹಂಚಿಕೊಂಡಿದ್ದಾರೆ. ಮೊಬೈಲ್‌ಗೆ ಬಂದ ಒಟಿಪಿಯನ್ನು ಖದೀಮರ ಬಳಿ ಹಂಚಿಕೊಂಡಿದ್ದಾರೆ. ಬಳಿಕ ಇವರ ಎಲ್ಲ ಅಕೌಂಟ್‌ಗಳ ಬರಿದು ಮಾಡಿದ್ದಾರೆ.
ಬೊಂಬೆನಾಡಲ್ಲಿ ಹೆಚ್ಚಿದ ಕಳ್ಳರ ಹಾವಳಿ: ಖದೀಮರ ಹಾಟ್‌ಸ್ಪಾಟ್ ಆದ ಚನ್ನಪಟ್ಟಣ
ಸೈಬರ್ ವಂಚನೆಯಾದ ಕೂಡಲೇ 1930ಗೆ ಸಂಪರ್ಕಿಸಿ: ಇಂಥಹ ಸೈಬರ್ ವಂಚನೆಗಳು ನಡೆದಾಗ ತಕ್ಷಣವೇ 1930 ಸೈಬರ್ ಹೆಲ್ಪಲೈನ್ ನಂಬರ್‌ಗೆ ಸಂಪರ್ಕಿಸಿದರೆ ಕಳೆದು ಹೋದ ಹಣವನ್ನ ಉಳಿಸಿಕೊಳ್ಳಬಹುದಾಗಿದೆ. ಅಲ್ಲದೆ ಸ್ಥಳೀಯ ಸೈಬರ್ ಪೊಲೀಸ್ ಠಾಣೆಯನ್ನ ಸಂಪರ್ಕಿಸಿ ಅಗತ್ಯ ದಾಖಲಾತಿ ಸಮೇತ ದೂರು ನೀಡಿದಲ್ಲಿ ನೀವು ಕಳೆದುಕೊಂಡ ಹಣ ವಾಪಾಸ್ ಬರುವ ಎಲ್ಲ ಸಾಧ್ಯತೆಗಳು ಕೂಡ ಇದೆ. ಒಟ್ಟಿನಲ್ಲಿ ಆನ್‌ಲೈನ್ ಕಾಲದಲ್ಲಿರೋ ನಾವೆಲ್ಲ ಸೈಬರ್ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ.