ಜ್ಯೂಸ್ ಎಂದುಕೊಂಡು ಕೀಟನಾಶಕ ಕುಡಿದು ಮಗು: ಚಿಕತ್ಸೆ ಫಲಿಸದೇ ಸಾವು

Published : Sep 04, 2023, 03:30 PM IST
ಜ್ಯೂಸ್ ಎಂದುಕೊಂಡು ಕೀಟನಾಶಕ ಕುಡಿದು ಮಗು: ಚಿಕತ್ಸೆ ಫಲಿಸದೇ ಸಾವು

ಸಾರಾಂಶ

ರಾಮನಗರ ಜಿಲ್ಲೆಯ ಕೃಷ್ಣಾಪುರದಲ್ಲಿ ಜಮೀನಿಗೆ ಸಿಂಪಡಣೆ ಮಾಡಲು ಇಟ್ಟಿದ್ದ ಕೀಟನಾಶಕವನ್ನು ಜ್ಯೂಸ್‌ ಎಂದುಕೊಂಡು ಕುಡಿದ 2 ವರ್ಷದ ಮಗು ಸಾವನ್ನಪ್ಪಿದೆ.

ರಾಮನಗರ (ಸೆ.04): ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಮನೆಯಲ್ಲಿ ಇಟ್ಟಿದ್ದ ಕೀಟನಾಶಕವನ್ನು ಜ್ಯೂಸ್‌ ಎಂದು ಕುಡಿದು 2 ವರ್ಷದ ಮಗು ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಇನ್ನು ಈ ಘಟನೆ ನಿನ್ನೆ ನಡೆದಿದ್ದು, ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಸಾವನ್ನಪ್ಪಿದೆ.

ಗ್ರಾಮದ ಹನುಮಂತು ಹಾಗೂ ಪುಷ್ಪ ದಂಪತಿಯ ಪುತ್ರ ಯಶ್ವಿಕ್(2) ಮೃತ ದುರ್ದೈವಿ ಆಗಿದ್ದಾನೆ. ಜಮೀನಿಗೆ ಸಿಂಪಡಿಸಲು ತಂದಿದ್ದ ಕೀಟನಾಶಕವನ್ನು, ಜ್ಯೂಸ್‌ ಬಾಟಿ ಎಂದು ತಿಳಿದುಕೊಂಡು ಓಪೆನ್‌ ಮಾಡಿದೆ. ನಂತರ, ಅದರಲ್ಲಿದ್ದ ವಿಷವನ್ನು ಜ್ಯೂಸ್‌ ಎಂದುಕೊಂಡು ಸೇವನೆ ಮಾಡಿದೆ. ಕ್ರಿಮಿನಾಶಕ ಸೇವನೆ ಬಳಿಕ ಹೊಟ್ಟೆ ನೋವಿನಿಂದ ಮಗು ಅಸ್ವಸ್ಥಗೊಂಡು ಬಿದ್ದಿದೆ. ಪೋಷಕರು ಬಾಯಿಯ ವಾಸನೆ ನೋಡಿದಾಗ ವಿಷ ಸೇವನೆ ಆಗಿರುವುದು ತಿಳಿದಿದೆ. ಕೂಡಲೇ ಮಗುವನ್ನ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪೊಲೀಸರಿಂದ ಕಿರುಕುಳ ಆರೋಪ: ಸೆಲ್ಫಿ ವಿಡಿಯೋ ಮಾಡಿ ಗೃಹಿಣಿ ಸಾವು

ಮಂಡ್ಯದ ಆಸ್ಪತ್ರೆಯಲ್ಲಿ ಒಂದು ದಿನಗಳ ಕಾಲ ನಿರಂತರವಾಗಿ ಚಿಕಿತ್ಸೆಯನ್ನು ನೀಡಲಾಗಿದೆ. ಆದರೆ, ಮಗುವಿನ ಸ್ಥಿತಿ ಮಾತ್ರ ಚೇತರಿಕೆ ಕಂಡುಬಂದಿಲ್ಲ. ಇಂದು ಮಧ್ಯಾಹ್ನದ ವೇಳೆಗೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯಲ್ಲಿ ನಿರ್ಲಕ್ಷ್ಯವಹಿಸಿ ಮಕ್ಕಳ ಕೈಗೆ ವಿಷದ ಬಾಟಲಿ ಸಿಗುವಂತೆ ಇಡುವ ಮೂಲಕ ಮಗುವಿನ ಸಾವಿಗೆ ಕಾರಣವಾದ ಬಗ್ಗೆ ಮಮ್ಮಲ ಮರುಗುತ್ತಿದ್ದಾರೆ. ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಭೇಟಿ ಮಾಡಲಿದ್ದಾರೆ.

ರಾಮನಗರ (ಸೆ.03): ರಾಮನಗರ ಜಿಲ್ಲೆಯಲ್ಲಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿಟ್ಟು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಚನ್ನಪಟ್ಟಣ ನಗರದ ಕೋಟೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಮಾಧುರಿ (31) ಸಾವನ್ನಪ್ಪಿರುವ ಮಹಿಳೆ ಆಗಿದ್ದಾಳೆ. ಈಕೆ ನಿನ್ನೆ ರಾತ್ರಿ ವೇಳೆ ನಿದ್ದೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದಳು. ಈ ವೇಳೆ ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಮದು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

ಕುಡುಕ ಪತಿಯ ಜಗಳದಿಂದ ಬೇಸತ್ತ ಪತ್ನಿ: ಮಲಗಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದು ಕೊಲೆನೇ ಮಾಡಿದ್ಳು!

ಇನ್ನು ಸಾಯುವ ಮುನ್ನ ತನ್ನ ಸಾವಿಗೆ ಪೊಲೀಸರು ಈಡಿದ ಕಿರುಕುಳ ಹಾಗೂ ಅವರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಕೂಡ ಹೇಳಿದ್ದಾರೆ. ಈಗ ಚನ್ನಪ್ಪಟ್ಟಣ ಪೊಲೀಸರಿಗೆ ಮಹಿಳೆ ಸಾವಿನಿಂದ ಸಂಕಟ ಶುರುವಾಗಿದೆ. ಇನ್ನು ಮಹಿಳೆ ಸೆಲ್ಫಿ ವೀಡಿಯೋ ಮಾಡಿ ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಸ್ವಸ್ಥಗೊಂಡಿದ್ದ ಮಹಿಳೆಯನ್ನ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ತಾನು ದೂರು ನೀಡಲು ಹೋದಾಗ ಪೊಲೀಸರು ದೂರನ್ನು ಸ್ವೀಕರಿಸಿದೇ ಪೊಲೀಸರು ಅವಮಾನ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾಳೆ. ಹಣದ ವಿಚಾರಕ್ಕೆ ಗಲಾಟೆ ಮಾಡಿಕೊಂಡು, ದೂರು ನೀಡಲು ಹೋದಾಗ ನನಗೇ ಅವಮಾನ ಮಾಡಿದ್ದಾರೆ. ಜೊತೆಗೆ, ಈ ವೇಳೆ ನಿನ್ನ ಮೇಲೆ ಹಳೇ ಕೇಸುಗಳಿವೆ ಎಂದು ಆಕೆಯನ್ನು ಪೊಲೀಸ್‌ ಠಾಣೆಯಿಂದ ಪೊಲೀಸರು ವಾಪಸ್‌ ಕಳಿಸಿದ್ದಾರೆ ಎಂದು ಆರೋಪಿಸಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು