ಮಂಗಳಮುಖಿಯರಿಂದ 30ರ ಯುವಕನ ಕಿಡ್ನಾಪ್, ಮರ್ಮಾಂಗ ಕತ್ತರಿಸಿ ರಸ್ತೆಗೆ ಎಸೆದು ವಿಕೃತಿ!

By Suvarna NewsFirst Published Sep 4, 2023, 7:23 PM IST
Highlights

6 ಮಂಗಳಮುಖಿಯರ ಗುಂಪು 30ರ ಹರೆಯದ ಯುವಕನ ಕಿಡ್ನಾಪ್ ಮಾಡಿ ವಿಕೃತಿ ಮೆರೆದಿದ್ದಾರೆ. ಯುವಕನ ಮರ್ಮಾಂಗ ಕತ್ತರಿಸಿ, ಆತನನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋದ ಘಟನೆ ನಡೆದಿದೆ.

ಅಲಿಘಡ(ಸೆ.04) ದಾರಿಯಲ್ಲಿ ನಡೆದುಕೊಂಡು ಸಾಗುತ್ತಿದ್ದ ಯುವಕನ ಕಿಡ್ನಾಪ್ ಮಾಡಿದ ಮಂಗಳಮುಖಿಯರ ಗುಂಪು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮರ್ಮಾಂಗ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಅಲಿಘಡದಲ್ಲಿ ನಡೆದಿದೆ.  ಯುವಕ ಸಾಗುತ್ತಿದ್ದ ವೇಳೆ ಮಹೀಂದ್ರ ಬೊಲೆರೋ ವಾಹನದಲ್ಲಿ 6 ಮಂದಿ ಮಂಗಳಮುಖಿಯರು ಅಡ್ಡಗಟ್ಟಿದ್ದಾರೆ. ಬಳಿಕ ಯುವಕನ ಹಿಡಿದು ಹಲ್ಲೆ ಮಾಡಿ ಕಾರಿನಲ್ಲಿ ಕೂಡಿಹಾಕಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಮಲು ಪದಾರ್ಥ ನೀಡಿ ಮರ್ಮಾಂಗವನ್ನೇ ಕತ್ತರಿಸಿದ್ದಾರೆ. 

ಈ ಕುರಿತು ಅಲಿಘಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ಟಾರ್ಗೆಟ್ ಮಾಡಿದ್ದ ಮಂಗಳಮುಖಿಯರು ಬೊಲೆರೋ ವಾಹನದಲ್ಲಿ ಆಗಮಿಸಿದ್ದಾರೆ. ಬಳಿಕ ಯುವಕ ಸಾಗುತ್ತಿದ್ದ ದಾರಿಯಲ್ಲಿ ಅಡ್ಡಲಾಗಿ ನಿಂತಿದ್ದಾರೆ. 6 ಮಂಗಳಮುಖಿಯರು ಯವಕನ ಬಳಿ ಬಂದು ತಮ್ಮ ಜೊತೆಗೆ ಬರುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪದ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಕೈ ಕಾಲು ಹಿಡಿದುಕೊಂಡು ಬಂದು ಕಾರಿನಲ್ಲಿ ಹಾಕಿದ್ದಾರೆ.

ಲಿಂಗ ಬದಲಾಯಿಸಿಕೊಂಡ ಮಗನ ವಿಷ್ಯಕ್ಕೆ ಸುದ್ದಿಯಲ್ಲಿದ್ದಾರೀಗ ಎಲೋನ್ ಮಸ್ಕ್!

ವೇಗಾಗಿ ಕಾರು ನಿರ್ಜನ ಪ್ರದೇಶದತ್ತ ಸಾಗಿದೆ. ಇದೇ ವೇಳೆ ಯುವಕನಿಗೆ ಬಲವಂತವಾಗಿ ಅಮಲು ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸಿದ್ದಾರೆ.   ಬಳಿಕ ಏನಾಗುತ್ತಿದೆ ಅನ್ನೋ ಅರಿವು ಯುವಕನಿಗೆ ಇರಲಿಲ್ಲ. ಇತ್ತ ಮಂಗಳಮುಖಿಯರು ಯುವಕನ ಪ್ರಜ್ಞೆ ತಪ್ಪಿಸಿ ಕಿರುಕುಳ ನೀಡಿದ್ದಾರೆ. ಬಳಿಕ ಮರ್ಮಾಂಗ ಕತ್ತರಿಸಿದ್ದಾರೆ. ಯುವಕನ ರಸ್ತೆ ಬದಿಗೆ ಎಸೆದು ಮಂಗಳ ಮುಖಿಯರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜ್ಞೆ ಮರುಕಳಿಸುತ್ತಿದಂತೆ ತೀವ್ರ ನೋವು ರಕ್ತಸ್ರಾವದಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ ಯುವಕನನ್ನ ಗಮನಿಸಿದ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ. ಯುವಕನ ಪ್ರಾಣ ಉಳಿದಿದೆ. ಆದರೆ ತೀವ್ರ ನೋವು ಹಾಗೂ ರಕ್ತಸ್ರಾವದಿಂದ ಅಸ್ವಸ್ಥನಾಗಿದ್ದಾನೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಬೊಲೆರೋ ವಾಹನ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ವೃದ್ಧನ ಸುಲಿದ ಮೂವರು ಮಂಗಳಮುಖಿಯರ ಸೆರೆ; ₹6000 ಕಸಿದು ಪರಾರಿಯಾಗಿದ್ದ ಗ್ಯಾಂಗ್!

ಇತ್ತೀಚೆಗೆ ಮಂಗಳೂರಿನಲ್ಲಿ ಚಾಕು ತೋರಿಸಿ ಸುಲಿಗೆ ಮಾಡುತ್ತಿರುವ ಮಂಗಳಮುಖಿಯರ ಕುರಿತು ಘಟನೆ ಬಹಿರಂಗವಾಗಿತ್ತು.  ಕಾರು ನಿಲ್ಲಿಸಿ ಚಾಕು ತೋರಿಸಿ ಹಣ ಸುಲಿಗೆ ಮಾಡಿರುವ ಬಗ್ಗೆ ಮಂಗಳಮುಖಿಯರ ವಿರುದ್ಧ ನಗರದ ಉರ್ವ ಠಾಣೆಯಲ್ಲಿ ದೂರು ದಾಖಲಾಗಿತ್ತು.  ವ್ಯಕ್ತಿಯೋರ್ವರು ಕಾರಿನಲ್ಲಿ ಹೋಗುತ್ತಿದ್ದಾಗ ರಾತ್ರಿ 11.30ರ ವೇಳೆಗೆ ನಗರದ ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಜಂಕ್ಷನ್‌ ಬಳಿ ಮಂಗಳಮುಖಿ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅವಿತು ಕುಳಿತಿದ್ದ ಇತರ ಮೂವರು ಮಂಗಳಮುಖಿಯರು ಚಾಕು ತೋರಿಸಿ ಬೆದರಿಸಿ ಕಿಸೆಯಲ್ಲಿದ್ದ ಸುಮಾರು 4,500 ರು. ನಗದು ಹಾಗೂ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿದ್ದ ವ್ಯವಹಾರದ ಸುಮಾರು 1.75 ಲಕ್ಷ ರು. ನಗದನ್ನು ಸುಲಿಗೆ ಮಾಡಿದ್ದರು.

click me!