
ಯಾದಗಿರಿ (ಮೇ.21): ಕುಡಿದ ಮತ್ತಿನಲ್ಲಿ ವ್ಯಕ್ತಿಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ಯಾದಗಿರಿ ತಾಲೂಕಿನ ಅಬ್ಬೇತುಮಕೂರು ಗ್ರಾಮದ ಹೊರಹೊಲಯದಲ್ಲಿ ನಡೆದಿದೆ.
ಅಬ್ಬೆತುಮಕೂರು ಗ್ರಾಮದ ಸಿದ್ದಪ್ಪ, ಕೊಲೆಯಾದ ವ್ಯಕ್ತಿ. ಯಾದಗಿರಿಯ ಕನಕನಗರ ನಿವಾಸಿ ಶಿವಪ್ಪ ಹತ್ಯೆ ಮಾಡಿದ ಆರೋಪಿ. ಕಲ್ಲು ಎತ್ತಿಹಾಕಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿ ಶಿವಪ್ಪನನ್ನ ಪತ್ತೆಹಚ್ಚಿ ಬಂಧಿಸಿದ ಯಾದಗಿರಿ ಗ್ರಾಮೀಣ ಠಾಣೆ ಪೊಲೀಸರು. ಇನ್ನು ತೀವ್ರವಾಗಿ ಗಾಯಗೊಂಡು ಸಿದ್ದಪ್ಪನನ್ನು ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು ಆದರೆ ಮಾರ್ಗಮಧ್ಯ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.
ಬಾಡಿಗೆ ಮನೆಯಲ್ಲಿ ಮಹಿಳೆ ಜೊತೆ ವಿವಾಹಿತ ಪೊಲೀಸ್ ಪೇದೆ ನೇಣುಬಿಗಿದು ಆತ್ಮಹತ್ಯೆ!
ಘಟನೆ ಬಳಿಕ ಸ್ಥಳದಲ್ಲಿ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮೃತ ಸಿದ್ದಪ್ಪನನ್ನ ಆಸ್ಪತ್ರೆಗೆ ಕರೆತಂದಿದ್ದ ಕುಟುಂಬಸ್ಥರು. ಆದರೆ ಆಸ್ಪತ್ರೆಗೆ ಬಂದು ಅರ್ಧಗಂಟೆಯಾದ್ರೂ ಚಿಕಿತ್ಸೆ ನೀಡದೆ ವೈದ್ಯರು ಕಾಲಹರಣ ಮಾಡಿದ್ದಾರೆ. ಈ ನಡುವೆ ತೀವ್ರ ರಕ್ತಸ್ರಾವದಿಂದ ಸಿದ್ದಪ್ಪ ನರಳಾಡಿದ್ದರಿಂದ ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶಗೊಂಡಿದ್ದರು. ಬಳಿಕ ಸ್ಟಾಪ್‌ನರ್ಸ್‌ಗಳಿಂದ ಕೇವಲ ಪ್ರಾಥಮಿಕ ಚಿಕಿತ್ಸೆ ನೀಡಿ ಗಾಯಾಳುವನ್ನು ಕಲಬುರಗಿಗೆ ರೆಫರ್ ಮಾಡಿದ್ದರು ಎನ್ನಲಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಯಾದಿಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರಿಗೆ ಗುಳೆ ಹೋದ 8 ನೇ ತರಗತಿ ಬಾಲಕಿ ಕಿಡ್ನಾಪ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ