ಮದುವೆ ಬೆನ್ನಲ್ಲೇ ಪತ್ನಿಗೆ ನಿದ್ದೆ ಮಾತ್ರೆ ನೀಡಿ ಕೂದಲು ಕತ್ತರಿಸಿದ ಪತಿ, ಸಾವಿನ ದವಡೆಯಿಂದ ಪಾರು!

By Chethan Kumar  |  First Published May 21, 2024, 4:57 PM IST

ಮದುವೆಯಾಗಿ ಕೇವಲ 25 ದಿನ ಉರುಳಿದೆ. ಊಟದಲ್ಲಿ ನಿದ್ದೆ ಮಾತ್ರೆ ಪತ್ನಿ ನೀಡಿದ ಪತಿ, ಆಕೆಯ ಕೂದಲು ಕತ್ತರಿಸಿದ್ದಾನೆ. ಬಳಿಕ ಸೀರೆಯನ್ನು ಸುಟ್ಟಿದ್ದಾನೆ. ಪತ್ನಿ ಬದುಕಿ ಉಳಿದಿದ್ದೇ ಪವಾಡ.
 


ಇಂದೋರ್(ಮೇ.21) ಪತಿ-ಪತ್ನಿ ನಡುವೆ ಕಿತ್ತಾಟ, ಹೊಡೆದಾಟ, ಹಲ್ಲೆ,ಹತ್ಯೆ ಘಟನೆಗಳು ಪದೇ ಪದೇ ವರದಿಯಾಗುತ್ತಲೇ ಇದೀಗ. ಮದುವೆಯಾಗಿ ಕೇವಲ 25 ದಿನಕ್ಕೆ ಪತ್ನಿಗೆ ನಿದ್ದೆ ಮಾತ್ರೆ ನೀಡಿ ಆಕೆಯ ಕೂದಲು ಕತ್ತರಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ನಿದ್ದೆಯಲ್ಲಿದ್ದ ಪತ್ನಿಯ ಕೂದಲು ಸಂಪೂರ್ಣ ಕಟ್ ಮಾಡಿದ್ದಾನೆ. ಬಳಿಕ ನಿದ್ದೆಯಲ್ಲಿಯೇ ಆಕೆಯ ಸೀರೆಗೆ ಬೆಂಕಿ ಹಚ್ಚಿದ್ದಾನೆ. ಅದೃಷ್ಠವಶಾತ್ ಪತ್ನಿ ಬದುಕಿ ಉಳಿದಿದ್ದಾಳೆ.

ದ್ವಾರಕಾಪುರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾಜಿತ್ ಲೋಧಿ ಒಂದು ತಿಂಗಳ ಹಿಂದೆ ಅಂಜಲಿ ಲೋಧಿಯನ್ನು ವರಿಸಿದ್ದು. ಅಂಜಲಿಗೆ ತಾಯಿ ಇಲ್ಲದ ಕಾರಣ ಕುಟುಂಬಸ್ಥರು ಸೇರಿ ಮದುವೆ ಮಾಡಿದ್ದರು. ಅರೇಂಜ್ ಮ್ಯಾರೇಜ್ ಆಗಿ ಕೇವಲ 25 ದಿನಕ್ಕೆ ಪತಿಗೆ ಅನುಮಾನದ ಹುತ್ತ ಬೆಳೆದಿದೆ. ಪತ್ನಿ ಅಂಜಲಿ ಲೋಧಿ ಸುಂದರವಾಗಿರುವುದೇ ಈತನ ಚಿಂತೆಯಾಗಿತ್ತು. 

Tap to resize

Latest Videos

ಹೆಂಡತಿ ಕೆನ್ನೆಗೆ ಮುತ್ತಿಡೋದು ಬಿಟ್ಟು, ಬ್ಲೇಡ್‌ನಿಂದ ಕೊಯ್ದ ಕಿರಾತಕ ಗಂಡ

ಮದುವೆಯಾದ ಹತ್ತೆ ದಿನಕ್ಕೆ ಸಾಜಿತ್ ಲೋಧಿ ಜಗಳ, ಅಸಮಾಧಾನ, ಸಿಡುಕು ಶುರುಮಾಡಿದ್ದಾನೆ. ಅಂಜಲಿಗೆ ಮತ್ತೊಂದು ಸಂಬಂಧವಿದೆ ಎಂದು ತಗಾದೆ ತೆಗೆ ಸಾಜಿತ್ ವಾಗ್ವಾದ ಮಾಡಿದ್ದಾನೆ. ರಾತ್ರಿ ವೇಳೆ ಅಂಜಲಿ ಊಟದಲ್ಲಿ ನಿದ್ದೆ ಮಾತ್ರೆ ಕಲಸಿದ್ದಾನೆ. ಈ ಕಪಟ ಅರಿಯದ ಅಂಜಲಿ ಆಹಾರ ಸೇವೆಸಿದ್ದಾಳೆ. ಕೆಲ ಹೊತ್ತಲ್ಲೇ ನಿದ್ದೆಗೆ ಜಾರಿದ್ದಾಳೆ. 

ಇತ್ತ ಸಾಜಿತ್ ಲೋಧಿ, ತಾನು ಅಂದುಕೊಂಡಂತೆ ಪತ್ನಿಯ ಕೂದಲು ಕತ್ತರಿಸಿದ್ದಾನೆ. ಬಳಿಕ ಸೀರೆಗೆ ಬೆಂಕಿ ಹಚ್ಚಿದ್ದಾನೆ. ಸೀರೆಯ ಬೆಂಕಿ ಹೊತ್ತಿಕೊಂಡಿದೆ. ಒಂದೆಡೆ ನಿದ್ದೆ ಮಾತ್ರೆಯ ಪರಿಣಾಮ, ಮತ್ತೊಂದೆಡೆ ದೇಹ ಸುಡುತ್ತಿರುವ ನೋವು ಎದುರಾಗಿದೆ. ಅತ್ತ ಎಳಲು ಆಗದೆ, ಇತ್ತ ರಕ್ಷಿಸಲು ಆಗದೆ ಪರದಾಡಿದ್ದಾಳೆ.

ಜೊತೆಯಾಗಿ ಅಶ್ಲೀಲ ವಿಡಿಯೋ ನೋಡಿ ಸೆಕ್ಸ್; ಅಕ್ಕ ಗರ್ಭಿಣಿ, 13 ವರ್ಷದ ತಮ್ಮ ಪೊಲೀಸ್ ವಶಕ್ಕೆ!

ಹೊರಳಾಡಿ ಬೆಂಕಿ ನಂದಿಸಿದ ಅಂಜಲಿ, ಸಂಬಂಧಿಕರಿಗೆ ಕರೆ ಮಾಡಿದ್ದಾಳೆ. ಇತ್ತ ಅಂಜಲಿ ಸಂಬಂಧಿಕರು ಓಡೋಡಿ ಬಂದಿದ್ದಾರೆ. ಬಳಿಕ ಅಂಜಲಿಯನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಅಂಜಲಿಯನ್ನು ನೆರವಿಗೆ ಧಾವಿಸಿ ಕುಟುಂಬಸ್ಥರ ವಿರುದ್ಧವೂ ಸಾಜಿತ್ ಲೋಧಿ ಕೆಂಡ ಕಾರಿ ಹಲ್ಲೆಗೆ ಮುಂದಾಗಿದ್ದಾನೆ.  ಪೊಲೀಸರಿಗೆ ಮಾಹಿತಿ ನೀಡಿದ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ 

click me!