ವಿದೇಶಿ ಮಾಡೆಲ್ ಎಂದು ಹೇಳಿಕೊಂಡು ಭಾರತದ 700ಕ್ಕೂ ಅಧಿಕ ಮಹಿಳೆಯರು ಮತ್ತು ಯುವತಿಯರನ್ನು ವಂಚಿಸಿದ್ದಾನೆ ದೆಹಲಿಯ ಯುವಕ! ಏನಾಯ್ತು ನೋಡಿ!
ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವ ಮಾತು ಪ್ರತಿನಿತ್ಯವೂ ಸಾಬೀತು ಆಗುತ್ತಲೇ ಇರುತ್ತದೆ. ರೂಪವೊಂದಿದ್ದರೆ, ಪುರುಷರು ಮಹಿಳೆಯರ ಮೋಹಪಾಶಕ್ಕೆ ಒಳಗಾಗಿ ಪಡಬಾರದ ಕಷ್ಟ ಪಡುವ ವಿಷಯ ಹೊಸತೇನಲ್ಲ. ಆದರೆ ಭಾರತದಲ್ಲಿನ 700ಕ್ಕೂ ಅಧಿಕ ಯುವತಿಯರು ಮತ್ತು ಮಹಿಳೆಯರು ಸ್ಫುರದ್ರೂಪಿ ಯುವಕನ ಫೋಟೋ ನೋಡಿ ಮೋಸಕ್ಕೆ ಹೋಗಿ ಎಲ್ಲಾ ಕಳಕೊಂಡು ಈಗ ಪಡಬಾರದ ಪಾಡು ಪಡುತ್ತಿದ್ದಾರೆ ಎಂದರೆ ಅಚ್ಚರಿ ಆಗುತ್ತದೆ ಅಲ್ಲವೆ? ಡೇಟಿಂಗ್ ಆ್ಯಪ್‌ನಲ್ಲಿ ವಿದೇಶಿ ರೂಪದರ್ಶಿಯ ಫೋಟೋ ನೋಡಿ ಮೋಹಗೊಂಡು ಬುದ್ಧಿಹೀನರಾಗಿ ಈಗ ಇವರೆಲ್ಲಾ ಪರದಾಡುವಂತಾಗಿದೆ.
ಅಷ್ಟಕ್ಕೂ ಆಗಿರೋದು ಏನೆಂದ್ರೆ, ದೆಹಲಿಯ ನಿವಾಸಿಯಾಗಿರುವ 23 ವರ್ಷದ ತುಷಾರ್ ಸಿಂಗ್ ಬಿಷ್ತ್ ಎಂಬ ಖದೀಮ, ಯುವತಿಯರು ಮತ್ತು ಮಹಿಳೆಯರನ್ನು ಸುಲಭದಲ್ಲಿ ಬಲೆಗೆ ಬೀಳಿಸುವುದು ಹೇಗೆಂದು ತಿಳಿದುಕೊಂಡಿದ್ದ. ಇದೇ ಕಾರಣಕ್ಕೆ ಅಮೆರಿಕದ ಮಾಡೆಲ್ ಒಬ್ಬನ ಫೋಟೋ ಹಾಕಿ ಪ್ರೊಫೈಲ್ ಮಾಡಿಕೊಂಡಿದ್ದ. ಡೇಟಿಂಗ್ ಆ್ಯಪ್ಗಳು ಮತ್ತು ವರ್ಚುವಲ್ ಮೊಬೈಲ್ ಸಂಖ್ಯೆಗಳ ಸಹಾಯದಿಂದ ವೀಕ್ ಮೈಂಡೆಡ್ ಮಹಿಳೆಯರನ್ನು ತಡಕಾಡುತ್ತಿದ್ದ. ಡೇಟಿಂಗ್ ಆ್ಯಪ್ ಸೇರಿದಂತೆ ಬೇಕಾಬಿಟ್ಟೆಯಾಗಿ ಇಂಥ ವೆಬ್ಸೈಟ್ಗಳನ್ನೆಲ್ಲಾ ಸರ್ಚ್ ಮಾಡುವವರ ಮೇಲೆ ಕಣ್ಣಿಟ್ಟಿದ್ದ ಈತ ಎಲ್ಲರ ಮೊಬೈಲ್ ನಂಬರ್ಗಳನ್ನು ಕಲೆಕ್ಟ್ ಮಾಡಿದ್ದ.
ಜನರು ಸುತ್ತುವರೆದ್ರೂ, ಪೊಲೀಸಪ್ಪ ಎಂಟ್ರಿ ಕೊಟ್ರೂ ನಡು ರಸ್ತೆಯಲಿ ಮೈಮರೆತ ಪ್ರೇಮಿಗಳು! ವಿಡಿಯೋ ವೈರಲ್
ಬಳಿಕ, ತಾನು ಅಮೆರಿಕದ ಮಾಡೆಲ್ ಎಂದು ಹೇಳಿಕೊಂಡು ಇವರನ್ನೆಲ್ಲಾ ಬಲೆಗೆ ಬೀಳಿಸಿದ್ದಾರೆ. ವಿದೇಶಿ ಫ್ರೀಲಾನ್ಸ್ ಮಾಡೆಲ್ ಎಂದು ನಕಲಿ ಐಡಿಯಲ್ಲಿ ಬರೆದುಕೊಂಡಿದ್ದ ಈತ, ಬ್ರೆಜಿಲ್ ಮೂಲದ ಮಾಡೆಲ್ ಒಬ್ಬನ ಫೋಟೋ ಹಾಕಿದ್ದ. ಸ್ಫುರದ್ರೂಪಿ ಯುವಕನನ್ನು ನೋಡಿ ಈ ಮಹಿಳೆಯರು ಬಲೆಗೆ ಬಿದ್ದರು. ಅದೂ ವಿದೇಶಿ ಮಾಡೆಲ್ ಒಬ್ಬ ತಮ್ಮನ್ನು ಸಂಪರ್ಕಿಸುತ್ತಿದ್ದಾನೆ ಎಂದು ಸ್ವರ್ಗಕ್ಕೆ ಮೂರೇ ಗೇಣು ಎಂದುಕೊಂಡರು. ಮೊದಲು ತುಷಾರ್ ಸಿಂಗ್ ಈ ಮಹಿಳೆಯರ ರೂಪವನ್ನು ಗುಣಗಾನ ಮಾಡುತ್ತಿದ್ದ. ನಾನು ಮಾಡೆಲ್, ನೀವು ಸುಂದರವಾಗಿದ್ದೀರಿ. ಮದುವೆಯಾಗುತ್ತೇನೆ ಎಂದೆಲ್ಲಾ ಬೆಣ್ಣೆ ಹಚ್ಚಿ ಅವರೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಿದ್ದ.
ಆತನ ಮಾತು ಹಾಗೂ ಪ್ರೊಫೈಲ್ನಲ್ಲಿ ಫೋಟೋದಿಂದ ಆಸೆಯಿಂದ ಕಾಯ್ದುಕೊಂಡಿದ್ದ ಈ ಮಹಿಳೆಯರು ಆತ ಹೇಳಿದಂತೆ ತಮ್ಮ ಫೋಟೋ ವಿಡಿಯೋ ಕಳಿಸುತ್ತಿದ್ದರು. ಅದನ್ನೇ ಇಟ್ಟುಕೊಂಡು ಕೊನೆಗೆ ಆತ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಈ ಮಹಿಳೆಯರಿಗೆ ಜ್ಞಾನೋದಯ ಆಗುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿರುತ್ತಿತ್ತು. ಕೆಲವರು ತಮ್ಮ ಖಾಸಗಿ ವಿಡಿಯೋ ಲೀಕ್ ಮಾಡದಂತೆ ಆತ ಕೇಳಿದ್ದಷ್ಟು ದುಡ್ಡು ಕೊಟ್ಟಿದ್ದಾರೆ. ಮರ್ಯಾದೆ ಪ್ರಶ್ನೆಯಲ್ಲವೆ? ಅದಕ್ಕಾಗಿ ದೂರನ್ನೂ ಕೊಡಲಿಲ್ಲ. ಕೊನೆಗೆ, ದೆಹಲಿ ವಿಶ್ವವಿದ್ಯಾಲಯದ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಈಕೆ ದೂರು ನೀಡದಿದ್ದರೆ ಆತ ಇನ್ನೆಷ್ಟು ಮಂದಿಯನ್ನು ಬಲೆಗೆ ಹಾಕಿಕೊಳ್ಳುತ್ತಿದ್ದನೋ ಗೊತ್ತಿಲ್ಲ. ದೂರಿನ ಅನ್ವಯ ತನಿಖೆ ಕೈಗೊಂಡಾಗ ಇದಾಗಲೇ ಏಳುನೂರಕ್ಕೂ ಅಧಿಕ ಮಂದಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಇವನ ಹಿನ್ನೆಲೆ ಕೆದಕಿದಾಗ ಈತ ಬಿಬಿಎ ಪದವೀಧರ. ನೊಯ್ಡಾದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ತಾಂತ್ರಿಕ ಉದ್ಯೋಗ ನೇಮಕಾತಿ ಅಧಿಕಾರಿಯಾಗಿ ಉದ್ಯೋಗ ಮಾಡುತ್ತಿದ್ದಾನೆ. ಇಷ್ಟು ಒಳ್ಳೆ ಉದ್ಯೋಗ ಇದ್ದರೂ ಇಂಥ ಕೆಲಸಕ್ಕೆ ಇಳಿದಿರುವುದು ತಿಳಿದಿದೆ. ಆ್ಯಪ್ ಒಂದರ ಮೂಲಕ ವರ್ಚುಯಲ್ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಖರೀದಿಸಿದ್ದ ಈತ ಬಂಬಲ್ ಹಾಗೂ ಸ್ನ್ಯಾಪ್ ಚಾಟ್ ನಂತಹ ಜನಪ್ರಿಯ ಡೇಟಿಂಗ್ ಮತ್ತು ಸಾಮಾಜಿಕ ಮಾಧ್ಯಮ ಆ್ಯಪ್ ಗಳಲ್ಲಿ ನಕಲಿ ಖಾತೆ ಸೃಷ್ಟಿಸಿರುವುದು ತಿಳಿದು ಬಂದಿದೆ.
ಸುಮ್ನೇ ಹೋಗ್ತಿದ್ದ ಬಸವನ ಹೊಡೆದ ಆಸಾಮಿ: ಮುಂದಾದದ್ದು ಮಾತ್ರ ಘೋರ ದುರಂತ- ವಿಡಿಯೋ ವೈರಲ್