ಅಪ್ರಾಪ್ತ ಬಾಲಕನ ಮೇಲೆ ಆರೋಪಿ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವಿಷಯವನ್ನು ಬಾಲಕ ತನ್ನ ಮನೆಯವರಿಗೆ ತಿಳಿಸಿದ ನಂತರ, ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಿರುವನಂತಪುರ: ಹತ್ತು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಅಪರಾಧಿಗೆ 130 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಚಾವಕ್ಕಾಡ್ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಒರುಮನಯೂರ್ ಮೂತ್ತಮಾವು ಮಾಂಗಾಡಿ ಮನೆಯ ಸಜೀವ್ (56) ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ. 8,75,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ 35 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
2023ರ ಏಪ್ರಿಲ್‌ನಲ್ಲಿ 10 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಬಾಲಕನನ್ನು ಕ್ರೂರವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದನು. ಈ ವಿಷಯವನ್ನು ಬಾಲಕ ತನ್ನ ಮನೆಯವರಿಗೆ ತಿಳಿಸಿದ ನಂತರ, ಅವರು ಚಾವಕ್ಕಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಚಾವಕ್ಕಾಡ್ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಪ್ರಸೀತಾ ಬಾಲಕನ ಹೇಳಿಕೆ ದಾಖಲಿಸಿಕೊಂಡ ನಂತರ, ಎಸ್.ಐ. ಸೆಸಿಲ್ ಕ್ರಿಶ್ಚಿಯನ್ ರಾಜ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಇನ್ಸ್‌ಪೆಕ್ಟರ್ ವಿವಿನ್ ಕೆ. ವೇಣುಗೋಪಾಲ್ ಮುಂದಿನ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.
ಆರೋಪಿಯ ವಿರುದ್ಧ ಇನ್ನೆರಡು ಪೋಕ್ಸೊ ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿವೆ. ಪ್ರಕರಣದಲ್ಲಿ 13 ಸಾಕ್ಷಿಗಳನ್ನು ವಿಚಾರಣೆ ನಡೆಸಿ, 16 ದಾಖಲೆಗಳನ್ನು ಹಾಜರುಪಡಿಸಲಾಯಿತು. ಸರ್ಕಾರಿ ವಿಶೇಷ ಅಭಿಯೋಜಕ ಸಿಜು ಮುತ್ತತ್, ವಕೀಲೆ ನಿಶಾ ಸಿ. ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಸಿ.ಪಿ.ಒ.ಗಳಾದ ಸಿಂಧು, ಪ್ರಸೀತಾ ಅವರು ಸರ್ಕಾರಿ ಅಭಿಯೋಜಕರಿಗೆ ಸಹಾಯ ಮಾಡಿದ್ದರು.
ಇದನ್ನೂ ಓದಿ: ಮೃತದೇಹದ ಜೊತೆ ಲೈಂಗಿಕ ಕ್ರಿಯೆ ಅಪರಾಧ ಅಲ್ಲ: ರೇಪ್ ಆರೋಪಿಯ ಖುಲಾಸೆ ಮಾಡಿದ ಹೈಕೋರ್ಟ್
ಪೋಷಕರಿಂದಲೇ ಗರ್ಭಿಣಿಯಾದ ಅಪ್ರಾಪ್ತೆ
ಉತ್ತರ ಪ್ರದೇಶದಲ್ಲಿ 14 ವರ್ಷದ ಬಾಲಕಿ ಮೇಲೆ ಆಕೆ ಅಜ್ಜ, ಚಿಕ್ಕಪ್ಪ ಮತ್ತು ತಂದೆಯೇ ಅತ್ಯಾಚಾರ ನಡೆಸಿರುವ ಆರೋಪದಡಿ ಪ್ರಕರಣ ದಾಖಲಾಗಿತ್ತು. ಬಾಲಕಿ ಗರ್ಭಿಣಿಯಾದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆ ಹೇಳಿಕೆಯನ್ನಾಧರಿಸಿ ಮೂವರನ್ನು ಬಂಧಿಸಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ಬಾಲಕ ಎರಡು ತಿಂಗಳ ಗರ್ಭಿಣಿ ಎಂದು ದೃಢವಾಗಿತ್ತು. ಬಾಲಕಿಯ ಸಂಬಂಧಿ ಮಹಿಳೆ ನೀಡಿದ ದೂರಿನಡಿ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: 14ರ ಬಾಲಕಿಯನ್ನ ಗರ್ಭಿಣಿಯನ್ನಾಗಿಸಿದ ನೀಚ ಅಜ್ಜ, ತಂದೆ, ಚಿಕ್ಕಪ್ಪ