ಧಾರವಾಡ ಜಿಲ್ಲೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜನಿಗೆ ಮೂವರ ಯುವಕರ ಗ‌್ಯಾಂಗವೊಂದು ಬ್ಲೆಡ್ ನಿಂದ ಹಲ್ಲೆ ಮಾಡಿದ ಘಟನೆ ನಿನ್ನೆ ರಾತ್ರಿ ಧಾರವಾಡದ ಐಸ್ ಗೇಟ್ ಬಳಿ ನಡೆದಿದೆ.
ವರದಿ : ಪರಮೇಶ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ: ಧಾರವಾಡ ಜಿಲ್ಲೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜನಿಗೆ ಮೂವರ ಯುವಕರ ಗ‌್ಯಾಂಗವೊಂದು ಬ್ಲೆಡ್ ನಿಂದ ಹಲ್ಲೆ ಮಾಡಿದ ಘಟನೆ ನಿನ್ನೆ ರಾತ್ರಿ ಧಾರವಾಡದ ಐಸ್ ಗೇಟ್ ಬಳಿ ನಡೆದಿದೆ.
undefined
ರಸ್ತೆಯ ಮೇಲೆ ಬೇಕಾಬಿಟ್ಟಿ ಕಾರ ಚಾಲನೆ ಮಾಡುತ್ತಿದ್ದ ಯುವಕರ ಗುಂಪನ್ನ ಪ್ರಶ್ನೆ ಮಾಡಿದ ಕಾರಣಕ್ಕೆ ಆತನ ಮೇಲೆ ಕಾಂಗ್ರೆಸ್ ಮುಖಂಡನ ಸಹೋದರರು ಜಗಳಕ್ಕೆ ಇಳಿದಿದ್ದಾರೆ. ಬಳಿಕ ಆ ಕಾನ್ಸ್ಟೆಬಲ್ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ ಹಲ್ಲೆ ಮಾಡಿ ಜೈಲು ಪಾಲಾದ ಆ ಮೂವರು ಯುವ ಕಾಂಗ್ರೆಸ್ ಮುಖಂಡನ ಸಹೋದರರು ಅನ್ನೋದು ಬಯಲಾಗಿದೆ.
ಕಾರು ಪಾರ್ಕಿಂಗ್ ಮಾಡುವ ವಿಚಾರಕ್ಕೆ ಪೊಲೀಸ್ ಪೇದೆ ಬಸವರಾಜ ಕಮತರ ಮೇಲೆ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಸಹೋದರರು ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಐಸ್ ಗೇಟ್ ಬಳಿ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೆಬಲ್ ಬಸವರಾಜ ಕಮತರ ಎಂಬುವವರೇ ಹಲ್ಲೆ ಮಾಡಿದ್ಧಾರೆ. ಕಾರ ಪಾರ್ಕಿಂಗ್ ಕಾರಣಕ್ಕೆ ಇವರ ಜೊತೆ ಕಿರಿಕ್ ಮಾಡಿದ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಸಹೋದರರಾದ ಇಕ್ಬಾಲ್ ತಮಟಗಾರ, ಅಮೀರ ತಮಟಗಾರ ಹಾಗೂ ಆತನ ಸಹಚರ ಅಜಮತ್ ಮುಲ್ಲಾ ಪೊಲೀಸ್ ಪೇದೆಯೊಂದಿಗೆ ಕೈ ಕೈ ಮಿಲಾಯಿಸಿದ್ದಾರೆ. ಅಷ್ಟೇ ಅಲ್ಲದೇ ಬ್ಲೇಡ್‌ನಿಂದ ಮುಖದ ನಾಲ್ಕು ಕಡೆಗಳಲ್ಲಿ ಬ್ಲೆಡ್ ನಿಂದ ಹರಿದಿದ್ದಾರೆ.
ಬೆಂಗಳೂರಿನ ಮತ್ತೊಂದು ಹೋಟೆಲ್ ಗೆ ಬಾಂಬ್ ಬೆದರಿಕೆ ಇಮೇಲ್!
ಕಾನ್ಸ್ಟೆಬಲ್ ಬಸವರಾಜ್ ಕಮತರ ಬೈಕ್ ಮೇಲಿದ್ದ ಈ ವೇಳೆ ಕಾರಿನಲ್ಲಿ ಬಂದ ಈ ಮೂವರು ಆರೋಪಿಗಳು ಪಾರ್ಕಿಂಗ್ ಜಾಗದ ವಿಚಾರವಾಗಿ ಜಗಳ ತೆಗೆದಿದ್ದಾರೆ ಇನ್ನು ಬಸವರಾಜ್ ಅಲ್ಲಿಂದ ಬೈಕ್ ಮೇಲೆ ಹೊರಟಾಗ ಕಾರು ಅಡ್ಡಗಟ್ಟಿದ ಇವರು ಮೊದಲು ಕೈಯಿಂದ ಹಲ್ಲೆ ಮಾಡಿದ್ದಲ್ಲದೇ ಬ್ಲೆಡ್ ತಂದು ಮುಖಕ್ಕೆ ಹರಿದಿದ್ದಾರೆ ಇನ್ನು ಹಲ್ಲೆಗೆ ಒಳಗಾದ ಕಾನ್ಸ್ಟೆಬಲ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ ದೂರಿನ ಆಧಾರದ ಮೇಲೆ ಮೂವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಕೂಡಾ ಹಾಜರು ಪಡಿಸಲಾಗಿದೆ
ಡಿಎಆರ್ ಪೊಲೀಸ್ ಪೇದೆ ಆಗಿರುವ ಬಸವರಾಜ ಕಮತರ ಅವರ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿರುವ ಮೂರು ಆರೋಪಿಗಳ ಮೇಲೆ ಇದೀಗ ಧಾರವಾಡ ಉಪನಗರ ಠಾಣೆಯಲ್ಲಿ 307 ಅಡಿ ದೂರು ದಾಖಲಾಗಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಈ ಜಗಳ ಈಗ ಇವರನ್ನ ಜೈಲು ಪಾಲಾಗುವಂತೆ ಮಾಡಿದೆ..ಬಳಿಕ ಈ ಮೂವರು ಆರೋಪಿಗಳನ್ನ ನ್ಯಾಯಾಲಯಕ್ಕೆ ಉಪನಗರ ಪೋಲಿಸರು ಹಾಜರು ಪಡಿಸಿದ್ದಾರೆ.ಬಳಿಕ ನ್ಯಾಯಾದಿಶರು ಮೂವರು ಆರೋಪಿಗಳಿಗೆ ಸದ್ಯ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ..
ಪೊಲೀಸ್ ನಿವೃತ್ತಿ ಹೊಂದಿದ ಶ್ವಾನ ಪೃಥ್ವಿಗೆ ಗೌರವಯುತ ಬೀಳ್ಕೊಡುಗೆ
ಅದೆನೂ ಇರಲಿ ಇತ್ತೀಚೆಗೆ ಅವಳಿ ನಗರದಲ್ಲಿ ಒಂದೆ ವಾರದಲ್ಲಿ ನಡು ರಸ್ತೆಯಲ್ಲೆ ಗುಂಡು ಹಾರಿಸಿದರೆ ಇತ್ತ ನಿನ್ನೆ ರಾತ್ರಿ ಮೂವರು ಯುವಕರು ಸೇರಿ ಪೋಲಿಸ್ ಪೇದೆಯ ಮೇಲೆ ಬ್ಲೆಡ್ ನಿಂದ ಹಲ್ಲೆ ಮಾಡಿದ್ದಾರೆ. ಅದರ ಪರಿಣಾಮವಾಗಿ ಪೋಲಿಸ್ ಪೇದೆ ಬಸವರಾಜ ಕಮತರ ಮುಖದ ಮೇಲೆ 7 ಹೊಲಿಗೆ ಬಿದ್ದಿವೆ. ಪೋಲಿಸ್ ಕಮಿಷನರ್ ಎನ್ ಶಶಿಕುಮಾರ ಅವರು ಬಂದ ಮೇಲೆ ನಗರದಲ್ಲಿ ಕ್ರೈಂ ಸ್ವಲ್ಪ ಮಟ್ಟಿಗ ಕ್ರೈಂ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅವೇ ಘಟನೆಗಳು ಮರಕಳಿಸುತ್ತಿವೆ. ಇಲ್ಲಿ ಸದ್ಯ ಪೋಲಿಸರಿಗೇ ರಕ್ಷಣೆ ಇಲ್ಲದಂತಾಗಿದೆ. ಪೋಲಿಸರಿಗೆ ಇಂತಹ ಸ್ಥಿತಿ ಬಂದೊದಗಿದರೆ ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಅನ್ನೋದು ಜನಸಾಮಾನ್ಯರು ಪ್ರಶ್ನೆಯಾಗಿದೆ.