
ಮಳವಳ್ಳಿ(ಮಾ.01): ವ್ಯಕ್ತಿಯೊಬ್ಬನನ್ನು ಕೊಲೆ(Murder) ಮಾಡಿ ಶವವನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ(Malavalli) ತಾಲೂಕಿನ ಪಂಡಿತಹಳ್ಳಿ ಬಳಿ ಬಿಸಾಡಿ ಹೋಗಿದ್ದ ಪ್ರಕರಣದಲ್ಲಿ ಕೆ.ಆರ್.ಪೇಟೆಯ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪುತ್ರ ಶ್ರೀಕಾಂತ್ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಪೊಲೀಸರು(Police) ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಮೂಲದ ಸಲೀಂ (40) ಕೊಲೆಯಾಗಿದ ವ್ಯಕ್ತಿ. ಕೆ.ಆರ್.ಪೇಟೆಯ ಶ್ರೀಕಾಂತ್ (42), ಅಭಿಷೇಕ್(26), ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಮಾರ (40), ಮಂಜುನಾಥ್ ಅಲಿಯಾಸ್ ಮಂಜು (23), ಆನಂದ್ (24), ಬೆಂಗಳೂರಿನ(Bengaluru) ವಜ್ರಮಣಿ ಅಲಿಯಾಸ್ ವಿಕ್ಕಿ (24), ಪುನೀತ್ (32), ಹಾಸನ ಮೂಲದ ಶಿವ ಅಲಿಯಾಸ್ ಸೋಮಶೇಖರ್ (37), ಬಂಧಿತ(Arrest) ಆರೋಪಿಗಳು(Accused).
Harsha Murder Case: 6 ಮಂದಿ ಹಂತಕರ ಸೆರೆ, 12 ಜನ ವಶ, ಬಂಧಿತರೆಲ್ಲರೂ ಶಿವಮೊಗ್ಗದವರು: ಎಸ್‌ಪಿ
ಶ್ರೀಕಾಂತ್ ಮತ್ತು ಸಲೀಂ ಬಳಿ ತಾಮ್ರದ ಚೊಂಬು (ರೈಸ್ ಪುಲ್ಲಿಂಗ್) ಪಡೆಯಲು 500 ಕೋಟಿ ವ್ಯವಹಾರ ಕುದುರಿಸಿ .5 ಲಕ್ಷವನ್ನು ಮುಂಗಡವಾಗಿ ನೀಡಿದ್ದರು. ಫೆ.7ರಂದು ಸಲೀಂನನ್ನು ಮೈಸೂರಿನ ಇಲವಾಲ ಬಳಿ ಕರೆಸಿಕೊಂಡ ಶ್ರೀಕಾಂತ್, ಚರ್ಚಿಸುವಾಗ ನಡೆದ ಗಲಾಟೆಯಲ್ಲಿ ಸಲೀಂ ಸಾವನ್ನಪ್ಪಿದ್ದಾನೆ. ಬಳಿಕ ಬಳಿಕ ಶವವನ್ನು ಕಾರಿನಲ್ಲಿ ತಂದು ಪಂಡಿತಹಳ್ಳಿ ಬಳಿ ಬಿಸಾಡಿದ್ದರು. ಅದೇ ದಿನ ಮೂವರು ನಾವೇ ಕೊಲೆ ಆರೋಪಿಗಳು ಎಂದು ಗ್ರಾಮಾಂತರ ಠಾಣೆಗೆ ಶರಣಾಗಿದ್ದರು.
ಪ್ರಕರಣ ಮುಚ್ಚಲು ಪೊಲೀಸ್ ನೆರವು? ಈ ಪ್ರಕರಣ ಮುಚ್ಚಿ ಹಾಕುವಲ್ಲಿ ಪೊಲೀಸರರೊಬ್ಬರ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ
ವೃದ್ಧೆಯ ಕೈ-ಕಾಲು ಕಟ್ಟಿ ಒಡವೆ ದೋಚಿದ್ದವ ಅರೆಸ್ಟ್
ಬೆಂಗಳೂರು: ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಮನೆಗೆ ಹೋಗಿ ವೃದ್ಧೆಯೊಬ್ಬರ ಕೈ-ಕಾಲು ಕಟ್ಟಿಹಾಕಿ ಚಿನ್ನಾಭರಣ(Gold) ದೋಚಿದ್ದ(Robbery) ಕಿಡಿಗೇಡಿಯೊಬ್ಬ ಜ್ಞಾನಭಾರತಿ ಠಾಣೆ ಪೊಲೀಸರಿಗೆ(Police) ಸಿಕ್ಕಿಬಿದ್ದಿದ್ದ ಘಟನೆ ಫೆ.23 ರಂದು ನಡೆದಿತ್ತು.
ಬಾಲಾಜಿ ಲೇಔಟ್ ನಿವಾಸಿ ಕಿರಣ್ ಕುಮಾರ್ ಬಂಧಿತ. ಆರೋಪಿಯಿಂದ(Accused)9 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿಯಾಗಿದೆ. ಕೆಲ ದಿನಗಳ ಹಿಂದೆ ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್‌ನ 6ನೇ ಹಂತದ ರಾಜ್ಯ ಆರೋಗ್ಯ ಇಲಾಖೆಯ ನಿವೃತ್ತ ಉದ್ಯೋಗಿ ಶಾಂತಮ್ಮ(70) ಅವರ ಮನೆಯಲ್ಲಿ ಆರೋಪಿ ಈ ಕೃತ್ಯ ಎಸಗಿದ್ದ. ಪ್ರಕರಣದ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಲಕ್ಷ್ಮಣ್ ನಾಯಕ್ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು.
Bengaluru Crime: ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ನೈಜಿರಿಯನ್ ಪ್ರಜೆ ಬಂಧನ
ತಮಿಳುನಾಡು(Tamil Nadu) ಮೂಲದ ಕಿರಣ್, ಬಾಲಾಜಿ ಲೇಔಟ್‌ನಲ್ಲಿ ತನ್ನ ಗೆಳತಿ ಜತೆ ನೆಲೆಸಿದ್ದಾನೆ. ಕ್ಯಾಬ್ ಚಾಲಕನಾಗಿರುವ ಆತ, ಹಣದಾಸೆಗೆ ಕಳ್ಳತನ(Theft) ಕೃತ್ಯಕ್ಕಿಳಿದಿದ್ದ. ಆತನ ಮೇಲೆ ರಾಜಗೋಪಾಲ ನಗರ ಹಾಗೂ ವಿಜಯಪುರ ಠಾಣೆಗಳಲ್ಲಿ ಪ್ರಕರಣಗಳಿವೆ. ಬಾಡಿಗೆ ನೆಪದಲ್ಲಿ ಮನೆಗಳಿಗೆ ಹೋಗಿ ವೃದ್ಧ ದಂಪತಿಗಳಿದ್ದರೆ ಬೆದರಿಸಿ ಹಣ ಸುಲಿಗೆ ಮಾಡುವುದು ಆತನ ಕೃತ್ಯವಾಗಿತ್ತು. ಅಂತೆಯೇ ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಶಾಂತಮ್ಮ ಅವರನ್ನು ಬೆದರಿಸಿ ಆತ ಚಿನ್ನಾಭರಣ ದೋಚಿದ್ದ ಎಂದು ಪೊಲೀಸರು ತಿಳಿಸಿದ್ದರು.
ಹೊಂಚು ಹಾಕಿ ಕೃತ್ಯ:
ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಾಂತಮ್ಮ ಅವರು, ತಮ್ಮ ಪತಿ ಜತೆ ವಿಶ್ವೇಶ್ವರಯ್ಯ ಲೇಔಟ್‌ನ 6ನೇ ಹಂತದಲ್ಲಿ ನೆಲೆಸಿದ್ದಾರೆ. ಮೂರು ಅಂತಸ್ತಿನ ಕಟ್ಟಡದಲ್ಲಿ ನೆಲಮಹಡಿಯಲ್ಲಿ ವೃದ್ಧ ದಂಪತಿ ನೆಲೆಸಿದ್ದು, ಇನ್ನೆರಡು ಅಂತಸ್ತಿನ ಮನೆಗಳನ್ನು ಬಾಡಿಗೆ ಕೊಟ್ಟಿದ್ದಾರೆ. ಕೆಲ ದಿನಗಳಿಂದ ಅವರ ಎರಡನೇ ಮಹಡಿಯ ಮನೆ ಖಾಲಿ ಇತ್ತು. ಆಗ ಬಾಡಿಗೆ ಕೇಳುವ ನೆಪದಲ್ಲಿ ಶಾಂತಮ್ಮ ಅವರ ಮನೆಗೆ ಹೋದ ಕಿರಣ್, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಬಂದಿದ್ದ. ಹತ್ತು ದಿನಗಳ ಬಳಿಕ ಮತ್ತೆ ಅವರ ಮನೆಗೆ ಹೋದ ಆತ, ಬಾಡಿಗೆ ಮನೆ ತೋರಿಸುವಂತೆ ಎರಡನೇ ಮಹಡಿಗೆ ಶಾಂತಮ್ಮ ಅವರನ್ನು ಕರೆದೊಯ್ದಿದ್ದಾನೆ. ಆಗ ಅವರ ಕೈ-ಕಾಲು ಕಟ್ಟಿಹಾಕಿ ಆರೋಪಿ ಚಿನ್ನಾಭರಣ ದೋಚಿದ್ದ. ಎಷ್ಟು ಹೊತ್ತಾದರೂ ಪತ್ನಿ ಮನೆಗೆ ಬಾರದೆ ಹೋದಾಗ ಶಾಂತಮ್ಮ ಅವರ ಪತಿ, ಸ್ಥಳೀಯರ ನೆರವು ಪಡೆದು ಎರಡನೇ ಮಹಡಿಗೆ ತೆರಳಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ