* ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಚಿಕ್ಕಪ್ಪ
* ಮನೆಯಲ್ಲಿ ಆಶ್ರಯ ಕೊಡುವುದಾಗಿ ಕರೆದುಕೊಂಡು ಹೋಗಿ ಎರಡು ವರ್ಷ ಕೃತ್ಯ
* ನೊಂದ ಯುವತಿಯರಿಂದ ಸಹಾಯವಾಣಿಗೆ ಮೊರೆ
ಪುಣೆ ( ಫೆ.28) ಅಪ್ರಾಪ್ತ ಮಕ್ಕಳ ಮೇಲೆ ಮೇಲೆ ಅತ್ಯಾಚಾರ (Rape) ಎಸಗಿದ ಆರೋಪದಲ್ಲಿ 38 ವರ್ಷದ ವ್ಯಕ್ತಿಯೊಬ್ಬನಿಗೆ ವಿಶೇಷ ಸೆಷನ್ಸ್ ನ್ಯಾಯಾಲಯ 15 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಆರೋಪಿಯು 2017 ರಿಂದ 2019 ರ ನಡುವೆ ಎರಡು ವರ್ಷಗಳ ಕಾಲ ಬಾಲಕಿಯ ಮೇಲೆ ನಿರಂತರ ದೌರ್ಜನ್ಯ ಎಸಗಿದ್ದ.
ಶಿಕ್ಷೆಗೆ ಗುರಿಯಾದ ಆರೋಪಿಯ ಪತ್ನಿಯ ಪಾತ್ರವೂ ಪ್ರಕರಣದಲ್ಲಿ ಇದೆ ಎಂಬುದನ್ನು ನ್ಯಾಯಾಲಯ (Court) ಹೇಳಿದೆ. 17 ವರ್ಷದ ಸಂತ್ರಸ್ತೆಯ ತಂದೆ ತೀರಿಕೊಂಡಾಗ ಮತ್ತು ಆಕೆಯ ತಾಯಿ ಮಾನಸಿಕ ಅಸ್ವಸ್ಥತೆಯಿಂದ ನಾಪತ್ತೆಯಾದಾಗ ಈ ಅನಾಚಾರ ಗೊತ್ತಾಯಿತು. ತಂದೆ ತೀರಿಕೊಂಡ ಕಾರಣಕ್ಕೆ ಅನಾಥವಾದ ಸಂತ್ರಸ್ತೆ ಮತ್ತು ಆಕೆಯ 15 ವರ್ಷದ ಸಹೋದರಿಯನ್ನು ಹಾಸ್ಟೆಲ್‌ಗೆ ಕಳುಹಿಸಲಾಯಿತು. ನಂತರ, ಅವರ ಚಿಕ್ಕಪ್ಪ ಶಿವಾಜಿ ನಗರ ಪ್ರದೇಶದಲ್ಲಿ ತಾನು ನೋಡಿಕೊಳ್ಳುತ್ತೇನೆ ಎಂದು ಕರೆದುಕೊಂಡು ಹೋದ.
ನಗ್ನ ಫೋಟೋ ಸಾಮಾಜಿಕ ಜಾಲಕ್ಕೆ ಹಾಕೋದಾಗಿ ಪತಿ ಬೆದರಿಕೆ: ಎಫ್‌ಐಆರ್ ದಾಖಲು
ಮೊದಮೊದಲು ಸರಿಯಾಗಿಯೇ ಇದ್ದ ಸಂಬಂಧಿ ನಂತರ ನಿಧಾನಕ್ಕೆ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ(Sexual harassment) ಎಸಗಲು ಆರಂಭಿಸಿದ. ಚಿಕಕ್ಕಪ್ಪನಿಂದ ಆಗುತ್ತಿರುವ ಅನಾಗುತವನ್ನು ಹೆಣ್ಣು ಮಕ್ಕಳು ತಾಯಿಯ ಸ್ಥಾನದಲ್ಲಿದ್ದ ಚಿಕ್ಕಮ್ಮನಿಗೆ ತಿಳಿಸಿದ್ದಾರೆ. ಆಆದರೆ ಚಿಕ್ಕಮ್ಮ ಗಂಡ ಮಾಡಿದ್ದೆ ಸರಿ ಎಂದಿದ್ದಾಳೆ. ನಿಧಾನಕ್ಕೆ ಕಾಮುಕನ ಕಣ್ಣು ತಂಗಿಯ ಮೇಲೂ ಬಿದ್ದಿದ್ದೆ. ಕಿರುಕುಳ ತಾಳಲಾರದೆ ಹುಡುಗಿಯರು ಅಕ್ಕ ಪಕ್ಕದ ಮಹಿಳೆಯರ ಬಳಿ ನೋವು ಹೇಳಿಕೊಂಡಿದ್ದಾರೆ.
ಇದಾದ ಮೇಲೆ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಾರೆ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ 376 (2) (ಎಫ್), 376 (2) (ಜೆ), 354-ಎ ಮತ್ತು 506 ರ ಅಡಿಯಲ್ಲಿ ಪೊಲೀಸ್ ದೂರು ದಾಖಲಿಸಲಾಗಿತ್ತು.. IPC ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯಿದೆ. ಅಡಿಯಲ್ಲಿ ವಿಚಾರಣೆ ನಡೆದು ಈಗ ಶಿಕ್ಷ ಪ್ರಕಟವಾಗಿದೆ.
ಸಂತ್ರಸ್ತೆ ನೀಡಿದ ಮಾಹಿತಿಯ ಆಧಾರದ ಮೇಲೆ, ಸಾಂದರ್ಭಿಕ ಸಾಕ್ಷ್ಯಗಳನ್ನು ವಿಶ್ಲೇಷಿಸಿ, ವೈದ್ಯಕೀಯ ಸಾಕ್ಷ್ಯಗಳನ್ನು ಪರಿಶೀಲಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಸಾಕ್ಷಿಗಳನ್ನು ಪರೀಕ್ಷಿಸಿದ ವಿಶೇಷ ಸೆಷನ್ಸ್ ನ್ಯಾಯಾಲಯವು ತನ್ನ ತೀರ್ಪು ಪ್ರಕಟಿಸಿತು ಮತ್ತು ಲೈಂಗಿಕ ಆರೋಪದ ಮೇಲೆ 15 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.
ಹಸುವಿನ ಮೇಲೆ ಪ್ರತಾಪ: ಹಸುವಿನೊಂದಿಗೆ (Cow) ಲೈಂಗಿಕ ಕ್ರಿಯೆ (Unnatural sex) ನಡೆಸಲು ಈ ವಿಕೃತಕಾಮಿ ಮುಂದಾಗಿದ್ದ ವಿಕೃತಕಾಮಿಯನ್ನು ಅರೆಸ್ಟ್ ಮಾಡಲಾಗಿದೆ. ಹಸುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕಾಮುಕ ಮಾಲೀಕನ ಕಣ್ಣಿಗೆ ಬಿದ್ದಿದ್ದು ವಿದ್ಯಾರಣ್ಯಪುರ ಪೊಲೀಸರು ಆರೋಪಿಯನ್ನು(Bengaluru Police) ಬಂಧಿಸಿದ್ದರು.
ಮುಗ್ಧ ಪ್ರಾಣಿಯ ಎರಗಿದ್ದ ದಾವಣಗೆರೆ (Davanagere) ಮೂಲದ ತಿಂಡ್ಲು ನಿವಾಸಿ 22 ವೆಂಕಟೇಶ್ ಕುಮಾರ್ ನನ್ನು ಬಂಧಿಸಲಾಗಿದೆ. ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಸಿಂಗಾಪುರ ನಿವಾಸಿ ಮುನಿ ಹನುಮಂತಪ್ಪ ಎಂಬುವರು ಐದು ಹಸು ಹಾಗೂ ಆರು ಕರುಗಳನ್ನು ಸಾಕಿಕೊಂಡು ಹೈನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ. ಮ್ಮ ಮನೆ ಮುಂದಿನ ಬಿಡಾರದಲ್ಲಿ ಹಸುಗಳನ್ನು ಕಟ್ಟಿಕೊಂಡಿದ್ದರು. ಯಾರೋ ಅಪರಿಚಿತನೊಬ್ಬ ಫೆ. 19 ರಂದು ಮಧ್ಯರಾತ್ರಿ ಬಂದು ಹಸುಗಳಿಗೆ ತೊಂದರೆ ಕೊಡುತ್ತಾನೆ ಎಂದು ನೆರೆಹೊರೆ ಮನೆಯವರು ದೂರಿದ್ದರು. ಇದರಂತೆ ಎಚ್ಚೆತ್ತುಕೊಂಡ ಮುನಿ ಹನುಮಂತಪ್ಪ. 20ರಂದು ರಾತ್ರಿ ಆಗುಂತಕನ ಪತ್ತೆಗಾಗಿ ಅಡಗಿಕೊಂಡಿದ್ದರು. ಅಂದುಕೊಂಡಂತೆ ಮಧ್ಯರಾತ್ರಿ ಅಪರಿಚಿತ ಹಸುವಿರುವ ಜಾಗಕ್ಕೆ ಬಂದಿದ್ದು ತನ್ನ ವಾಂಛೆ ತೀರಿಸಕೊಳ್ಳಲು ಮುಂದಾಗಿದ್ದ ವೇಳೆ ಸಿಕ್ಕಿ ಬಿದ್ದಿದ್ದ.