* ಪ್ರೊ. ಅಶೋಕ ಹುಲಿಬಂಡಿ ಅವರಿಗೆ ಹಣಕ್ಕಾಗಿ ಕಿಡಿಗೇಡಿಗಳಿಂದ ಕಾಟ
* ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಚಿತ್ರ ಅಪ್ಲೋಡ್ ಮಾಡುವ ಬೆದರಿಕೆ
* ಈ ಸಂಬಂಧ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು
ಧಾರವಾಡ(ಸೆ.12): ಕರ್ನಾಟಕ ವಿಶ್ವವಿದ್ಯಾಲಯದ ಪ್ರೊಫೆಸರ್‌ವೊಬ್ಬರ ಮಾಡಿ ಹಣಕ್ಕಾಗಿ ಕಿಡಿಗೇಡಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಕೆಯುಡಿ ಆಂಗ್ಲ ವಿಭಾಗದ ಪ್ರೊ. ಅಶೋಕ ಹುಲಿಬಂಡಿ ಅವರಿಗೆ ಹಣಕ್ಕಾಗಿ ಕಿಡಿಗೇಡಿಗಳು ಕಾಟ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪ್ರೊಫೆಸರ್ ಅಶೋಕ ಹುಲಿಬಂಡಿ ಅವರ ಮೊಬೈಲ್‌ಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಹಣ ಕೊಡುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದ ಹಲವು ಗ್ರೂಪ್‌ಗಳಿಗೆ ಅಶ್ಲೀಲ ಸಂದೇಶಗಳನ್ನ ಕಿಡಿಗೇಡಿಗಳು ರವಾನೆ ಮಾಡಿದ್ದಾರೆ.
undefined
40 ಪತ್ರಕರ್ತರು ಸೇರಿ 300 ಗಣ್ಯರ ಮೊಬೈಲ್ ಹ್ಯಾಕ್: ವರದಿ!
ಪ್ರೊಫೆಸರ್ ಅಶೋಕ ಹುಲಿಬಂಡಿ ಅವರಿಗೆ ಮೊಬೈಲ್‌ಗೆ ಕರೆ ಮಾಡಿ ಹಣಕ್ಕಾಗಿ ಕಿಡಿಗೇಡಿಗಳು ಪೀಡಿಸುತ್ತಿದ್ದಾರೆ. ಕೇಳಿದಷ್ಟು ಹಣ ನೀಡದಿದ್ದರೆ ಫೇಸ್ಬುಕ್, ಟೆಲಿಗ್ರಾಂನಲ್ಲಿ ಅಶ್ಲೀಲ ಚಿತ್ರ ಅಪ್ಲೋಡ್ ಮಾಡುವ ಬೆದರಿಕೆವೊಡಿದ್ದಾರೆ.
ಇದೀಗ ಬ್ಲ್ಯಾಕ್‌ಮೇಲ್ ಕಾಟಕ್ಕೆ ಬೇಸರಗೊಂಡ ಪ್ರೊಫೆಸರ್ ಅಶೋಕ ಹುಲಿಬಂಡಿ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.