* ವಿದೇಶದಿಂದ ಡ್ರಗ್ಸ್ ಸಾಗಾಣಿಕೆ ಬಗ್ಗೆ ಮಾಹಿತಿ ಮೇರೆಗೆ ಕಾರ್ಯಾಚರಣೆ
* ಡ್ರಗ್ಸ್ ಸಾಗಾಣಿಕೆ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಪಾತ್ರ
* ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು(ಫೆ.20): ವಿದೇಶದಿಂದ(Foreign) ಕಳ್ಳ ಹಾದಿಯಲ್ಲಿ ರಾಜಧಾನಿಗೆ ಬರುವ ಡ್ರಗ್ಸ್(Drugs) ಸಾಗಾಣಿಕೆ ವಿರುದ್ಧ ಕಸ್ಟಮ್ಸ್ ಅಧಿಕಾರಿಗಳ ದಾಳಿ(Raid) ಮುಂದುವರೆದಿದ್ದು, ಮತ್ತೆ ನಗರದಲ್ಲಿ ಇಬ್ಬರನ್ನು ಬಂಧಿಸಿ 11.2 ಕೋಟಿ ಮೌಲ್ಯದ ಡ್ರಗ್ಸನ್ನು ಜಪ್ತಿ ಮಾಡಿದ್ದಾರೆ.
ಬೆಲ್ಜಿಯಂ ಹಾಗೂ ಜಾಂಬೀಯಾ ದೇಶಗಳಿಂದ ದುಬೈ ಮೂಲಕ ಕೊರಿಯರ್‌ನಲ್ಲಿ(Courier) ನಗರಕ್ಕೆ ಬಂದಿದ್ದ .7 ಕೋಟಿ ಮೌಲ್ಯದ ಹೆರಾಯಿನ್ ಹಾಗೂ 4.2 ಕೋಟಿ ಬೆಲೆ ಬಾಳುವ 2 ಕೆ.ಜಿ ಎಂಡಿಎಂಎ ಡ್ರಗ್ಸ್ ಜಪ್ತಿಯಾಗಿದೆ. ವಿದೇಶದಿಂದ ಡ್ರಗ್ಸ್ ಸಾಗಾಣಿಕೆ ಬಗ್ಗೆ ಮಾಹಿತಿ ಮೇರೆಗೆ ಎಚ್ಚೆತ್ತಿರುವ ಕಸ್ಟಮ್ಸ್ ಅಧಿಕಾರಿಗಳು(Customs Officers), ನಗರಕ್ಕೆ ವಿದೇಶದಿಂದ ಬರುವ ಪಾರ್ಸಲ್ ಹಾಗೂ ಕೊರಿಯರ್ ಮೇಲೆ ನಿಗಾವಹಿಸಿದ್ದಾರೆ. ಇತ್ತೀಚೆಗೆ ಇದೇ ರೀತಿ ಕೊರಿಯರ್‌ನಲ್ಲಿ ಬಂದಿದ್ದ .4 ಕೋಟಿ ಮೌಲ್ಯದ ಡ್ರಗ್ಸನ್ನು ಕಸ್ಟಮ್ಸ್ ಜಪ್ತಿ ಮಾಡಿದ್ದರು. ಈಗ ಮತ್ತೆ ಕಾರ್ಯಾಚರಣೆ ಮುಂದುವರೆಸಿದಾಗ .11 ಕೋಟಿ ಮೌಲ್ಯದ ಡ್ರಗ್ಸ್ ಸಿಕ್ಕಿದೆ. ಈ ಡ್ರಗ್ಸ್ ಸಾಗಾಣಿಕೆ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದ(International Drugs Mafia) ಪಾತ್ರವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Bengaluru Crime: ಒಡಿಶಾದಿಂದ ಗಾಂಜಾ ತಂದು ಮಾರುತ್ತಿದ್ದ ಪೆಡ್ಲರ್‌ಗಳ ಸೆರೆ
ಬ್ರೆಜಿಲ್‌ನಿಂದ ತಂದು ಬೆಂಗ್ಳೂರಲ್ಲಿ ಡ್ರಗ್ಸ್ ಮಾರಾಟ: ಪೆಡ್ಲರ್‌ಗಳಿಬ್ಬರ ಬಂಧನ
ಬೆಂಗಳೂರು(ಫೆ.16): ರಾಜಧಾನಿಯಲ್ಲಿ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ ಗೋವಿಂದಪುರ ಠಾಣೆ ಪೊಲೀಸರು(Police), ನಗರಕ್ಕೆ ಡ್ರಗ್ಸ್ ಪೂರೈಸುತ್ತಿದ್ದ ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಪ್ರತ್ಯೇಕವಾಗಿ ಬಂಧಿಸಿ .2.5 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ನೈಜೀರಿಯಾ(Nigeria) ಪ್ರಜೆ ಚಿಬ್ಯುಜೆ ಚಿನೊನ್ಸೊ ಹಾಗೂ ಮಹಾರಾಷ್ಟ್ರದ(Maharashtra) ಶ್ರೀಕಾಂತ್ ಬಂಧಿತರಾಗಿದ್ದು, ಆರೋಪಿಗಳಿಂದ(Accused) 1.21 ಕೋಟಿ ಮೌಲ್ಯದ 2.428 ಕೆ.ಜಿ. ಬ್ರೌನ್ ಶುಗರ್(Brown Sugar) ಹಾಗೂ .1.30 ಕೋಟಿ ಮೌಲ್ಯದ ಕೊಕೇನ್(Cocaine) ವಶಪಡಿಸಿಕೊಳ್ಳಲಾಗಿದೆ.
ಇತ್ತೀಚೆಗೆ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಈ ಇಬ್ಬರು ಪೆಡ್ಲರ್‌ಗಳ ಸಹಚರರು ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ಅವರು ನೀಡಿದ ಮೇರೆಗೆ ಪೆಡ್ಲರ್‌ಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Drugs Case: ಬೆಂಗ್ಳೂರಲ್ಲಿ ಗಾಂಜಾ ಮಾರಾಟ: ಮೂವರು ಅಂತಾರಾಜ್ಯ ಪೆಡ್ಲರ್‌ಗಳ ಬಂಧನ
ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ:
ಮಹಾರಾಷ್ಟ್ರದ ಅಂಕೋಲಾ ಮೂಲದ ಶ್ರೀಕಾಂತ್ ವೃತ್ತಿಪರ ಪೆಡ್ಲರ್(Drug Peddler) ಆಗಿದ್ದು, ಅಸ್ಸಾಂ ಗಡಿ ಪ್ರದೇಶದಿಂದ ಕಡಿಮೆ ಬೆಲೆಗೆ ಸಗಟು ರೂಪದಲ್ಲಿ ಬ್ರೌನ್ಸ್ ಶುಗರ್ ಖರೀದಿಸುತ್ತಿದ್ದ. ಬಳಿಕ ಬೆಂಗಳೂರು(Bengaluru) ಸೇರಿದಂತೆ ಇತರೆಡೆ ಬೇರೆ ಪೆಡ್ಲರ್‌ಗಳಿಗೆ ಪೂರೈಸುತ್ತಿದ್ದ. ಬೆಂಗಳೂರಿನಲ್ಲಿ ತನ್ನ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ರೂಪಿಸಿದ್ದ. ಇತ್ತೀಚಿಗೆ ಆತನ ದಂಧೆ ಬಗ್ಗೆ ಬಾತ್ಮೀದಾರರಿಂದ ಗೋವಿಂದಪುರ ಠಾಣೆ ಇನ್ಸ್‌ಪೆಕ್ಟರ್ ಆರ್.ಪ್ರಕಾಶ್ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಅಂತೆಯೇ ಕಾರ್ಯಾಚರಣೆ ನಡೆಸಿ ಫೆ.7ರಂದು ಗೋವಿಂದಪುರದ ಫಾತಿಮಾ ಲೇಔಟ್‌ನ ಕೆ.ನವಾಜ್ ಷರೀಫ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಶ್ರೀಕಾಂತ್ ಬಗ್ಗೆ ಬಾಯ್ಬಿಟ್ಟಿದ್ದ. ಈ ಮಾಹಿತಿ ಮೇರೆಗೆ ಮಹಾರಾಷ್ಟ್ರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ(Arrest) ಕರೆ ತಂದಿದ್ದಾರೆ. ಆತನಿಂದ 1.21 ಕೋಟಿ ಮೌಲ್ಯದ ಬ್ರೌನ್ ಶುಗರ್ ಸಹ ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಬ್ರೆಜಿಲ್‌ನಿಂದ ಕೊಕೇನ್:
ಬ್ರೆಜಿಲ್(Brazil) ದೇಶದಿಂದ ಕಳ್ಳ ದಾರಿಯಲ್ಲಿ ನಗರಕ್ಕೆ ಕೊಕೇನ್ ತಂದು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಚಿನ್ಸೊನೊನನ್ನು ಬಂಧಿಸಲಾಗಿದೆ. ಇತ್ತೀಚಿಗೆ ಎಚ್‌ಬಿಆರ್ ಲೇಔಟ್‌ನಲ್ಲಿ ಡ್ರಗ್ಸ್ ಪೂರೈಕೆಗೆ ಬಂದಾಗ ಆತನ ಇಬ್ಬರು ಸಹಚರರು ಸಿಕ್ಕಿಬಿದ್ದಿದ್ದರು. ಅವರು ನೀಡಿದ ಮಾಹಿತಿ ಮೇರೆಗೆ ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.