
ಬಂಗಾರಪೇಟೆ(ಫೆ.20): ಮನೆ ಬಿಟ್ಟು ಬಂದಿದ್ದ ಬಾಲಕಿಯನ್ನು(Minor Girl) ಪುಸಲಾಯಿಸಿದ ನಾಲ್ವರು ದುಷ್ಕರ್ಮಿಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ(Gang Rape) ಎಸಗಿರುವ ಘಟನೆ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಹುದುಕುಳ ಗ್ರಾಮದ 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ತನ್ನ ಜನ್ಮದಿನವಾದ ಶುಕ್ರವಾರ ಹೊಸ ಬಟ್ಟೆ ಹಾಗೂ ಚಾಕ್‌ಲೇಟ್ಸ್ ಕೊಡಿಸಿಲ್ಲವೆಂದು ಪೋಷಕರ ವಿರುದ್ಧ ಮುನಿಸಿಕೊಂಡು ಶಾಲೆಗೂ ಹೋಗದೆ, ಮನೆಯವರಿಗೂ ತಿಳಿಸದೆ ಬಸ್ ಹತ್ತಿ ಬಂಗಾರಪೇಟೆಗೆ ಬಂದಿದ್ದಳು.
Hijab Row: 'ರೇಪ್ ಹೆಚ್ಚಾಗಲು ಹಿಜಾಬ್ ಹಾಕದ್ದೇ ಕಾರಣ. ಸೌಂದರ್ಯ ಮುಚ್ಚಿಡಲು ಬುರ್ಖಾ ಬೇಕು'
ಬಸ್ ನಿಲ್ದಾಣದಲ್ಲಿ ಒಬ್ಬಳೇ ಕುತಿಳಿದ್ದ ವಿದ್ಯಾರ್ಥಿನಿಯನ್ನು ಗಮನಿಸಿದ ನಾಲ್ವರು ದುಷ್ಕರ್ಮಿಗಳು(Miscreants) ಆಕೆಯನ್ನು ಪುಸಲಾಯಿಸಿ ಪಾರ್ಕ್‌ಗೆ ಕರೆದುಕೊಂಡು ಹೋಗಿ ಸಂಜೆವರೆಗೂ ಕಾಲ ಕಳೆದಿದ್ದಾರೆ. ಬಳಿಕ ಪಟ್ಟಣದಿಂದ ಆಂಧ್ರಗಡಿಗೆ ಅಂಟಿಕೊಂಡಿರುವ ತನಿಮಡಗು ಗ್ರಾಮಕ್ಕೆ ಖಾಸಗಿ ಬಸ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಗಡಿಯಲ್ಲಿರುವ ಬಾರ್‌ನಲ್ಲಿ ನಾಲ್ವರು ಆರೋಪಗಳು ಕುಡಿದು ಬಳಿಕ ಸುತ್ತಮುತ್ತಲಿರುವ ನಿರ್ಜನ ಪ್ರದೇಶದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ(Rape) ಎಸಗಿದ್ದಾರೆ.
ಈ ವೇಳೆ ಬಾಲಕಿಯ ಕಿರುಚಾಟ ಕೇಳಿದ ದಾರಿಹೋಕರು ಕೂಡಲೇ ಪೊಲೀಸರಿಗೆ(Police) ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಬಾಲಕಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಂಧಿತ ನಾಲ್ವರ ಪೈಕಿ ಮೂವರು ಗಾರೆ ಕೆಲಸದವರು ಹಾಗೂ ಮತ್ತೊಬ್ಬ ಬಸ್ ಚಾಲಕ ಎಂದು ತಿಳಿದುಬಂದಿದೆ. ಆರೋಪಿಗಳನ್ನು(Accused) ಆನಂದ್ ಕುಮಾರ್, ಕಾಂತರಾಜು,ಪ್ರವೀಣ್ ಮತ್ತು ವೇಣು ಎಂದು ಗುರುತಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕುರಿಗಾಯಿ ಮಹಿಳೆಯ ಮೇಲೆ ಕಾಮುಕರ ಅಟ್ಟಹಾಸ
ಧಾರವಾಡ: ಕುರಿಗಾಯಿ ಮಹಿಳೆಯ(Woman) ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಕುಂದಗೋಳ(Kundgol) ತಾಲೂಕಿನ ಯರಗುಪ್ಪಿ ಗ್ರಾಮದ ಹೊರವಲಯದಲ್ಲಿ ಶನಿವಾರ ನಡೆದಿದೆ.
ಕಟ್ಟಿಗೆ ತರಲು ಬಂದ ಮಹಿಳೆಯ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. 35 ವಯಸ್ಸಿನ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ(Murder) ಮಾಡಲಾಗಿದೆ. ಬೆಳಗಾವಿ(Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೂಲದ ಕುರಿಗಾಯಿ ಮಹಿಳೆ ಅಂತ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕುಂದಗೋಳ ಪೊಲೀಸರು ಭೇಟಿ ಪರಿಶೀಲನೆ ನೀಡಿದ್ದಾರೆ.
4 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಗಂಗಾವತಿ(Gangavati): ಇಲ್ಲಿಯ ನೀಲಕಂಠೇಶ್ವರ ಕ್ಯಾಂಪ್‌ನಲ್ಲಿ ಯುವಕನೊಬ್ಬ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಫೆ.15 ರಂದು ನಡೆದಿದೆ. ಇತ್ತೀಚೆಗೆ ಫೋಟೊಗ್ರಾಫರ್ ಗುರುರಾಜ ವೆಂಕಟೇಶ ಗಣಪ ಎನ್ನುವ ಯುವಕ ಈ ಕೃತ್ಯ ಎಸಗಿದ್ದು, ತನ್ನ ಮನೆಗೆ ಆಗಮಿಸಿದ್ದ ಕುಡಿತಿನಿಯ ಸಂಬಂಧಿಕರ ಪುತ್ರಿಯ ಮೇಲೆ ಈ ಕೃತ್ಯ ನಡೆಸಿದ್ದನು.
Rape Case: ಕೆಲಸ ನೀಡುವ ನೆಪದಲ್ಲಿ ಯುವತಿ ಮೇಲೆ ನಾಲ್ವರ ಅತ್ಯಾಚಾರ
ಗುರುರಾಜ ತನ್ನ ಮನೆಯ ಮೇಲೆ ಜೋಳ ಒಣಗಿಸಲು ಹೋಗಿದ್ದ ಸಂದರ್ಭದಲ್ಲಿ ಬಾಲಕಿಯನ್ನು ರೂಮಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದನು. ಈ ಕುರಿತು ಬಾಲಕಿ ತಾಯಿ ನಗರ ಪೊಲೀಸ್(Police) ಠಾಣೆಯಲ್ಲಿ ದೂರು ನೀಡಿದ್ದರು. ಗುರುರಾಜ ವಿರುದ್ಧ ಫೋಕ್ಸೊ ಕಾಯ್ದೆ ಅಡಿ ದೂರು ದಾಖಲಾಗಿದ್ದು, ಅರೋಪಿ(Accused) ಪತ್ತೆ ಕಾರ್ಯವನ್ನು ಪೊಲೀಸರು ಕೈಗೊಂಡಿದ್ದರು.
87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ
ನವದೆಹಲಿ: ಇಲ್ಲಿನ ತಿಲಕ್‌ನಗರದಲ್ಲಿರುವ ಮನೆಯೊಂದಕ್ಕೆ ಗ್ಯಾಸ್ ಏಜೆನ್ಸಿಯವ ಎಂದು ಹೇಳಿಕೊಂಡು ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ 87 ವರ್ಷದ ಹಾಸಿಗೆ ಹಿಡಿದಿರುವ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಫೆ.13 ರಂದು ನಡೆದಿತ್ತು.
ಈ ಕುರಿತು ದೆಹಲಿ ಪೊಲೀಸ್ ಅನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ವ್ಯಕ್ತಿಯೊಬ್ಬರು ‘ನನ್ನ ಸ್ನೇಹಿತರ 87 ವರ್ಷದ ಅಜ್ಜಿಯ ಮೇಲೆ ಅತ್ಯಚಾರ ನಡೆಸಲಾಗಿದೆ. ಅವರು ಗಾಯಗೊಂಡಿದ್ದಾರೆ. ಆದರೆ ತಿಲಕ್‌ನಗರದ ಪೊಲೀಸರು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ’ಎಂದು ಟ್ವೀಟ್ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ