ರಾಜಸ್ಥಾನದಲ್ಲಿ ಟ್ರಕ್‌ - ಕಾರು ಮುಖಾಮುಖಿ ಡಿಕ್ಕಿ: ಐವರು ಬಲಿ; ಟ್ರಕ್‌ ಚಾಲಕ ನಾಪತ್ತೆ..!

By BK AshwinFirst Published Jan 1, 2023, 5:03 PM IST
Highlights

ಈ ಅಪಘಾತ ನಡೆದ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಇನ್ನು, ಮತ್ತೊಬ್ಬರು ಗಾಯಾಳುವನ್ನು ಬಿಕನೇರ್‌ಗೆ ಶಿಫ್ಟ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಇಂದು ಜನವರಿ 1, ಅಂದರೆ 2023, ಹೊಸ ವರ್ಷದ (New Year) ಮೊದಲ ದಿನ. ದೇಶಾದ್ಯಂತ ಜನರು ಸಂಭ್ರಮ (Celebration) ಆಚರಿಸುತ್ತಿದ್ದಾರೆ. ಆದರೆ, ಈ ನಡುವೆ ಹಲವು ಅಪಘಾತಗಳು (Accident) ಸಹ ಈ ದಿನ ಸಂಭವಿಸಿದೆ. ಈ ಪೈಕಿ, ರಾಜಸ್ಥಾನದಲ್ಲಿ (Rajasthan) ಭೀಕರ ಅಪಘಾತ ಸಂಭವಿಸಿದ್ದು, ಐವರು ಬಲಿಯಾಗಿದ್ದಾರೆ. ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ (Hanumangarh District) ಕಾರು (Car) ಹಾಗೂ ಟ್ರಕ್‌ (Truck) ನಡುವೆ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಈ ವೇಳೆ ಐದು ಜನರು ಬಲಿಯಾಗಿದ್ದಾರೆ ಹಾಗೂ ಒಬ್ಬರು ಗಾಯಗೊಂಡಿದ್ದಾರೆ ಎಂದು ರಾಜಸ್ಥಾನ ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ. ರವಾತ್ಸಾರ್‌ - ಸರ್ದಾರ್‌ಶಹರ್‌ ಮೆಗಾ ಹೆದ್ದಾರಿಯಲ್ಲಿ ಬಿಸ್ರಾಸರ್‌ ಗ್ರಾಮದ ಬಳಿ ಶನಿವಾರ ತಡ ರಾತ್ರಿ ಈ ಅಪಘಾತ ಸಂಭವಿಸಿದೆ. ಇಟ್ಟಿಗೆಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್‌ಗೆ ಕಾರೊಂದು ಡಿಕ್ಕಿ ಹೊಡೆದಿದೆ ಎಂದೂ ಅವರು ತಿಳಿಸಿದ್ದಾರೆ. 

ಅಲ್ಲದೆ, ಈ ಅಪಘಾತ ನಡೆದ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಇನ್ನು, ಮತ್ತೊಬ್ಬರು ಗಾಯಾಳುವನ್ನು ಬಿಕನೇರ್‌ಗೆ ಶಿಫ್ಟ್‌ ಮಾಡಲಾಗಿದೆ ಎಂದೂ ಪಲ್ಲು ಪೊಲೀಸ್‌ ಠಾಣೆಯ ಸ್ಟೇಷನ್‌ ಹೌಸ್‌ ಅಧಿಕಾರಿ (ಎಸ್‌ಎಚ್‌ಒ) ಗೋಪಿ ರಾಮ್‌ ಹೇಳಿದ್ದಾರೆ. ಪಲ್ಲು ಎಂಬ ಊರಿನಿಂದ ಸರ್ದಾರ್‌ಶಹರ್‌ ಕಡೆಗೆ ಟ್ರಕ್‌ ಹೋಗುತ್ತಿದ್ದ ವೇಳೆ, ಬಿಸ್ರಾಸರ್‌ ಗ್ರಾಮದಿಂದ ಕಾರೊಂದು ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದೂ ತಿಳಿದುಬಂದಿದೆ. 

ಇದನ್ನು ಓದಿ: Accident: ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಾರು ಡಿಕ್ಕಿ: ಕಾರಿನಲ್ಲಿದ್ದ ತಮಿಳುನಾಡಿನ ಮೂವರು ಸಾವು

ಇನ್ನು, ಈ ಅಪಘಾತದಲ್ಲಿ ಮೃತಪಟ್ಟವರನ್ನು 24 ವರ್ಷದ ರಾಜು ಮೇಘ್ವಾಲ್‌, 28 ವರ್ಷದ ನರೇಶ್‌ ಕುಮಾರ್‌, 32 ವರ್ಷದ ದಾನಾರಂ, 28 ವರ್ಷದ ಬಬ್ಲೂ ಹಾಗೂ ಅಷ್ಟೇ ವಯಸ್ಸಿನ ಮುರಳಿ ಶರ್ಮಾ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬಿಸ್ರಾಸರ್‌ ಗ್ರಾಮದವರು ಹಾಗೂ ಎಲ್ಲರೂ ಸ್ನೇಹಿತರು ಎಂದು ತಿಳಿದುಬಂದಿದೆ. 

ಈ ಘಟನೆ ಬಳಿಕ ಟ್ರಕ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದೂ ತಿಳಿದುಬಂದಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪಲ್ಲು ಪೊಲೀಸ್‌ ಠಾಣೆಯ ಸ್ಟೇಷನ್‌ ಹೌಸ್‌ ಅಧಿಕಾರಿ ಗೋಪಿ ರಾಮ್‌ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ, ಈ ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಅಪಘಾತಕ್ಕೀಡಾದ ಟ್ರಕ್‌ ಉರುಳಿದ್ದರೆ, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ಕೇರಳದಲ್ಲಿ ಪ್ರವಾಸಿ ಬಸ್ ಅಪಘಾತ: ಓರ್ವ ವಿದ್ಯಾರ್ಥಿ ಸಾವು

ಉತ್ತರ ಕನ್ನಡದಲ್ಲಿ ಅಪಘಾತ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಡುವೆ ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ನಡೆದಿದೆ. ಇನ್ನು ಕಾರು ಅಪಘಾತದಿಂದ ಸ್ಥಳದಲ್ಲೇ ಮೃತಪಟ್ಟವರನ್ನು ತಮಿಳುನಾಡು ಮೂಲದವರು ಎಂದು ಹೇಳಲಾಗಿದೆ. ಜೊತೆಗೆ ಓರ್ವನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಅವರನ್ನು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು, ಸಾವಿಗೀಡಾದವರು ಹಾಗೂ ಗಾಯಾಳುವಿನ ಮಾಹಿತಿಗಾಗಿ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ. 

ಇನ್ನೊಂದೆಡೆ, ಬೆಂಗಳೂರಿನ ಮೈಸೂರು ರಸ್ತೆಯ ಡಿಮಾರ್ಟ್ ಬಳಿ ಭೀಕರ ರಸ್ತೆ ಅಪಘಾತ ಉಂಟಾಗಿದ್ದು, ಹಿಟ್ ಅಂಡ್ ರನ್ ನಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ. 

click me!