
ಶಿರಸಿ (ಜ.1) : ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ್ದ ದರೋಡೆ ಪ್ರಕರಣದ ಪ್ರಮುಖ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಘಟನೆ ನಡೆದ ಕೇವಲ 48 ಗಂಟೆಗಳಲ್ಲಿ ಮಾಲು ಸಮೇತವಾಗಿ ಬಂಧಿಸಿ ಅವರಿಂದ ನಗದು, ಎರಡು ಬೈಕ್, ಚಾಕು ಮತ್ತು ಬ್ಲೂಟೂತ್ ಸೇರಿ ಒಟ್ಟೂ.2.65 ಲಕ್ಷ ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ರಾಜೀವ ಗೊಲ್ಲರ್, ಗಣೇಶಕುಮಾರ ಕೃಷ್ಣಪ್ಪ ಗೊಲ್ಲರ್ ಹಾಗೂ ಅಜ್ಜಪ್ಪ ಯಾನೆ ಅರ್ಜುನ ಮಂಜಪ್ಪ ಗೊಲ್ಲರ ಆರೋಪಿಗಳು. ಅವರೆಲ್ಲರೂ ಶಿಕಾರಿಪುರ ಹಾಗೂ ಹಾನಗಲ್ ತಾಲೂಕಿನವರು.
ಡಿ. 28ರಂದು ರಾತ್ರಿ ಮದುರವಳ್ಳಿಯ ಶ್ರೀಕಾಂತ ಗಣೇಶ ಕಬ್ಬೇರ್ ಬೈಕ್‌ನಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಅವರನ್ನು ತಡೆಗಟ್ಟಿ.19 ಸಾವಿರ ನಗದು, ಉಂಚಳ್ಳಿಯ ಕರಿಯಪ್ಪ ಶಾಂತಕುಮಾರಿ ನಾಯ್ಕ ಅವರ ಬೈಕ್ ತಡೆಗಟ್ಟಿ.2500 ನಗದು, ಬ್ಲೂ ಟೂತ್, ಜಾಗು ಮದುರವಳ್ಳಿಯ ಶಿವಕುಮಾರ ದೇಸಾಯಿ ಗೌಡಾ ಅವರನ್ನು ತಡೆಗಟ್ಟಿಮೊಬೈಲ್ ಕಿತ್ತುಕೊಂಡು ಹೋದ ಬಗ್ಗೆ ಬನವಾಸಿ ಮತ್ತು ಗ್ರಾಮೀಣ ಠಾಣೆಯಲ್ಲಿ ಒಟ್ಟೂಐದು ಪ್ರಕರಣಗಳು ದಾಖಲಾಗಿದ್ದವು.
ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ಹಗಲು ದರೋಡೆ; ಜೆಡಿಎಸ್ ಮುಖಂಡ ಆರೋಪ
ಇದನ್ನು ಸವಾಲಾಗಿ ಸ್ವೀಕರಿಸಿದ್ದ ಡಿವೈಎಸ್‌ಪಿ ಗಣೇಶ ಕೆ.ಎಲ್. ಹಾಗೂ ಸಿಪಿಐ ರಾಮಚಂದ್ರ ನಾಯ್ಕ ಆರೋಪಿಗಳನ್ನು ಬಂಧಿಸಲು 20 ಪೊಲೀಸ್ ಸಿಬ್ಬಂದಿ ತಂಡ ಮಾಡಿ ಕಾರ್ಯಚರಣೆ ನಡೆಸಿದ್ದರು. ಎಸ್ಪಿ ವಿಷ್ಣುವರ್ಧನ್ ಎನ್. ಮಾರ್ಗದರ್ಶನ, ಡಿವೈಎಸ್‌ಪಿ ಗಣೇಶ ಕೆ.ಎಲ್. ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಪಿಐ ಗಳಾದ ರಾಮಚಂದ್ರ ನಾಯಕ, ಕುಮಾರ ಕೆ., ಸಿದ್ದಪ್ಪ ಸಿಮಾನಿ, ಸುರೇಶ ಯಳ್ಳೂರ್, ಪಿಎಸ್‌ಐಗಳಾದ ಹಣಮಂತ ಬಿರಾದಾರ, ಪ್ರತಾಪ, ಚಂದ್ರಕಲಾ ಎಂ. ಪತ್ತಾರ, ಭೀಮಾಶಂಕರ, ರಾಜಕುಮಾರ ಉಕ್ಕಲಿ, ಸಿಬ್ಬಂದಿ ಮಣಿಪಾಲ, ಚಂದ್ರಪ್ಪ ಕೊರವರ, ಸಂತೋಷ, ಶಿವರಾಜ್ ಎಸ್., ಮಂಜುನಾಥ ಎನ್., ಬಸವರಾಜ ಎ., ಯತೀಶ ಪಾಟಿಲ…, ರಮೇಶ ನಾಯ್ಕ, ಚೇತನಕುಮಾರ, ಪ್ರದೀಪ ರೇವಣಕರ, ಗಣಪತಿ ನಾಯ್ಕ, ಚೇತನ ಜೆ.ಎನ್., ಅರುಣಕುಮಾರ ವಿ., ದಯಾನಂದ ಹುಂಡೆಕರ, ನಾಗರಾಜ ಒಣಿಕೇರಿ, ಮಾಂತೇಶ, ರಾಮಯ್ಯ, ಅಶೋಕ, ಜಿಮ್ಮು ಸಿಂದೆ, ಸಂತೋಷ, ಮೋಹನ, ಶಫಿ, ರಾಜೇಶ ನಾಯ್ಕ, ಸುರೇಶ ವಡ್ಡರ, ನಾಗರಾಜ ಕೋಟೇಶ ಪಾಲ್ಗೊಂಡಿದ್ದರು. ಎಸ್ಪಿ ವಿಷ್ಣುವರ್ಧನ್ ಅವರು ಪೊಲೀಸರ ಈ ಮಹತ್ವದ ಕಾರ್ಯಚರಣೆಯನ್ನು ಮೆಚ್ಚಿ ಬಹುಮಾನ ಘೋಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ