ತನ್ನ ಪತಿಯ ಹಣದಾಸೆಗೆ ಚಿತ್ರಹಿಂಸೆ ಅನುಭವಿಸುತ್ತಿದ್ದ ಗರ್ಭಿಣಿ ದೇಹ ಇಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ, ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಲಭ್ಯವಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
ಮಂಡ್ಯ (ಜ.1): ಹೊಸ ವರ್ಷದ ದಿನ ಎಲ್ಲರೂ ವರ್ಷಪೂರ್ತಿ ತಮ್ಮ ಜೀವನ ಸುಖಮಯವಾಗಿರಲಿ ಎಂದು ಬೇಡಿಕೊಂಡು ಖುಷಿಯಿಂದ ಇರುತ್ತಾರೆ. ಆದರೆ, ತನ್ನ ಪತಿಯ ಹಣದಾಸೆಗೆ ಚಿತ್ರಹಿಂಸೆ ಅನುಭವಿಸುತ್ತಿದ್ದ ಗರ್ಭಿಣಿ ದೇಹ ಇಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ, ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಲಭ್ಯವಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟ ಗೃಹಿಣಿಯನ್ನು ಎಚ್.ವೈ. ರಮ್ಯಾ (24) ಎಂದು ಗುರುತಿಸಲಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮೇಗಳಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಗೃಹಿಣಿ ಸಾವನ್ನಪ್ಪಿದ ಘಟನೆಗಿಂತ ಹೆಚ್ಚು ಕರುಳು ಹಿಂಡುವ ಇನ್ನೊಂದು ಸಂಗತಿಯೆಂದರೆ ಈ ಮಹಿಳೆ ಎರಡೂವರೆ ತಿಂಗಳ ಗರ್ಭಿಣಿ ಎನ್ನುವುದು. ಭೂಮಿಗೆ ಒಂದು ಜೀವ ಬರುವುದಕ್ಕೆ ಹಾತೊರೆಯುತ್ತಿದ್ದರೆ ಇತ್ತು ಜೀವವನ್ನು ಮಡಿಲಲ್ಲಿ ಇಟ್ಟುಕೊಂಡಿದ್ದ ತಾಯಿಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ಮಗು ಕೂಡ ಗರ್ಭದಲ್ಲಿಯೇ ಸಾವನ್ನಪ್ಪಿದೆ. ಆದರೆ, ಇದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದು, ಗಂಡ ಹಾಗೂ ಆತನ ಮನೆಯವರಿಂದಲೇ ಕೊಲೆ ಮಾಡಲಾಗಿದೆ ಎಂದು ಗೃಹಿಣಿ ತವರು ಮನೆಯವರು ಆರೋಪ ಮಾಡಿದ್ದಾರೆ.
ನ್ಯೂ ಇಯರ್ ಪಾರ್ಟಿ: ಕುಡಿದ ಮತ್ತಿನಲ್ಲಿ ಗನ್‌ಫೈರ್ ಮಾಡಿದ ತಂದೆ: ಮಗನ ದೇಹ ಹೊಕ್ಕ ಬುಲೆಟ್, ದುರಂತ ಸಾವು
ಒಂದು ವರ್ಷದಿಂದ ವರದಕ್ಷಿಣೆ ಕಿರುಕುಳ:
ಕಳೆದ 5 ವರ್ಷದ ಹಿಂದೆ ರಮ್ಯಾ, ಕುಮಾರ್ ಎಂಬಾತನ ಜೊತೆ ಮದುವೆಯಾಗಿದ್ದಳು. ದಂಪತಿಗೆ ಒಂದು ವರ್ಷಕ್ಕೆ ಹೆಣ್ಣು ಮಗು ಜನಿಸಿದ್ದು, ಈಗ ಆ ಮಗುವಿಗೆ 4 ವರ್ಷ ತುಂಬಿದೆ. ನಾಲ್ಕು ವರ್ಷಗಳ ನಂತರ ರಮ್ಯಾ ಮತ್ತೆ ಗರ್ಭಿಣಿಯಾಗಿದ್ದಳು. ಆದರೆ, ಕಳೆದ ಒಂದು ವರ್ಷದಿಂದ ಪತಿ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದರಿಂದ ತವರು ಮನೆಯಿಂದ ಕಾಡಿ ಬೇಡಿ ರಮ್ಯಾ ತನ್ನ ತಂದೆ ಕಡೆಯಿಂದ 4.5 ಲಕ್ಷ ರೂ. ತಂದುಕೊಟ್ಟಿದ್ದಳು. ಇಷ್ಟಾದರೂ ಹಣದ ದಾಹ ಕಡಿಮೆಯಾಗದೆ ಮತ್ತೆ ಬೇಡಿಕೆ ಇಟ್ಟಿದ್ದಾರೆ.
ಹಣದ ವಿಚಾರಕ್ಕೆ ದಂಪತಿ ಜಗಳ:
ಪತಿ ಹಾಗೂ ಆತನ ಕುಟುಂಬ ಸದಸ್ಯರು ಆಗಿಂದಾಗ್ಗೆ ಹಣದ ವಿಚಾರಕ್ಕಾಗಿ ಜಗಳ ತೆಗೆದು ರಮ್ಯಾಗೆ ಕಿರುಕುಳ ನೀಡುತ್ತಿದ್ದರು. ಆದರೆ, ನಿನ್ನೆ ರಮ್ಯಾ ಗಂಡನ ಮನೆಯಲ್ಲೇ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈಗ ರಮ್ಯಾ ಸಾವಿನ ಸುತ್ತ ಅನುಮಾನ ಹುಟ್ಟಿಕೊಂಡಿದ್ದು, ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ. ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಹೊಂದಿರಲಿಲ್ಲ. ಗಂಡ ಹಾಗೂ ಆತನ ಕುಟುಂಬಸ್ಥರು ಕೊಲೆಗೈದು ನೇಣುಹಾಕಿದ್ದಾರೆಂದು ಮೃತೆ ರಮ್ಯಾ ತಂದೆ ಯೋಗೇಶ್ ಹಲಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಚಿಕ್ಕಬಳ್ಳಾಪುರ: ಹೊಸ ವರ್ಷದ ಪಾರ್ಟಿ, ಕಂಠ ಪೂರ್ತಿ ಮದ್ಯ ಕುಡಿಸಿ ಗೆಳೆಯನನ್ನೇ ಕೊಂದ ಸ್ನೇಹಿತರು..!
ಕಂಠ ಪೂರ್ತಿ ಮದ್ಯ ಕುಡಿಸಿ ಸ್ನೇಹಿತನ ಕೊಲೆ: ಹೊಸ ವರ್ಷದ ಸೋಗಿನಲ್ಲಿ ಸ್ನೇಹಿತರಿಂದಲೇ ಸ್ನೇಹಿತನ ಕೊಲೆ ನಡೆದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮದನಪಲ್ಲಿ ರಸ್ತೆಯ ಐಮರೆಡ್ಡಿಹಳ್ಳಿಯ ಬಾಲಾಜಿ ಡಾಬಾ ಬಳಿ ನಡೆದಿದೆ. ಕಂಠ ಪೂರ್ತಿ ಮದ್ಯ ಕುಡಿಸಿ ಅಮಲಿನಲ್ಲಿ ಕೊಲೆ ಮಾಡಲಾಗಿದೆ. ಕೊಲೆಯಾದ ಯುವಕನನ್ನು ನವೀನ್ ರೆಡ್ಡಿ(28) ಎಂದು ಗುರುತಿಸಲಾಗಿದೆ. ಮೃತ ಚಿಂತಾಮಣಿ ತಾಲ್ಲೂಕು ದೊಡ್ಡಗಂಜೂರು ಗ್ರಾಮದ ನಿವಾಸಿ ಆಗಿದ್ದಾನೆ. ಕೊಲೆ ಮಾಡಿದ ಸಿದ್ದು, ಕಿರಣ್, ಬೈರಾರೆಡ್ಡಿ ಕೂಡ ಅದೇ ಗ್ರಾಮದವರು. ಸ್ಥಳಕ್ಕೆ ಚಿಂತಾಮಣಿ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಕ್ಯತ್ಯ ಎಸೆಗಿದ ಹಂತಕರು ಪೊಲೀಸರಿಗೆ ಶರಣಾಗಿದ್ದಾರೆ. ಈ ಕುರಿತಂತೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.