
ಬೆಂಗಳೂರು(ನ.18): ಉದ್ಯಮಿಯೊಬ್ಬರ(Businessman) ಮನೆಯಲ್ಲಿ ಹಾಡಹಗಲೇ 47 ಲಕ್ಷ ರು. ನಗದು ಹಾಗೂ 170 ಗ್ರಾಂ ಚಿನ್ನಾಭರಣ ಕಳುವಾಗಿರುವ(Theft) ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಮ್ಮನಹಳ್ಳಿ ನಿವಾಸಿ ಶ್ರೀಧರ್ ಎಂಬುವವರ ಮನೆಯಲ್ಲಿ ನ.15ರಂದು ಈ ಕೃತ್ಯ ನಡೆದಿದೆ. ಕಳೆದ ಎರಡು ತಿಂಗಳಿಂದ ಮನೆಯಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ನೇಪಾಳ(Nepal) ಮೂಲದ ಕೃಷ್ಣ ಮತ್ತು ಆತನ ಪ್ರತ್ನಿ ಜಾನಕಿ ಹಣ ಹಾಗೂ ಚಿನ್ನಾಭರಣ(Jewellery) ಕದ್ದು ಪರಾರಿಯಾಗಿದ್ದಾರೆ ಎಂದು ಮನೆ ಮಾಲೀಕ ಶ್ರೀಧರ್ ದೂರು(Complaint) ನೀಡಿದ್ದಾರೆ.
ಮನೆ ಕೆಲಸ ಬಾಕಿಯಿದೆ ಎಂದು ಕೃತ್ಯ:
ಮನೆ ಮಾಲೀಕ ಶ್ರೀಧರ್ ಅವರು ನ.15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಪರಿಚಿತರ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅರಮನೆ ಮೈದಾನಕ್ಕೆ ಬಂದಿದ್ದರು. ಅವರ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ನಿಶ್ಚಿತಾರ್ಥ ಸಮಾರಂಭಕ್ಕೆ ವೈಟ್‌ಫೀಲ್ಡ್‌ಗೆ ತೆರಳಿದ್ದರು. ಇನ್ನು ಪುತ್ರ ಶಾಲೆಗೆ ಹೋಗಿದ್ದ. ಶ್ರೀಧರ್ ಪತ್ನಿ ಅವರು ನಿಶ್ಚಿತಾರ್ಥಕ್ಕೆ ತೆರಳುವ ಮುನ್ನ ಮನೆಗೆ ಬೀಗ ಹಾಕಲು ಮುಂದಾದಾಗ, ಸೆಕ್ಯೂರಿಟಿ ಗಾರ್ಡ್(Security Guard) ಪತ್ನಿ ಜಾನಕಿ ಮನೆ ಕೆಲಸ ಬಾಕಿ ಇದೆ ಎಂದು ಹೇಳಿದ್ದಾಳೆ. ಹೀಗಾಗಿ ನಗದು ಹಾಗೂ ಚಿನ್ನಾಭರಣವಿದ್ದ ಮಲಗುವ ಕೋಣೆಗೆ ಮಾತ್ರ ಬೀಗ ಹಾಕಿಕೊಂಡು ಶ್ರೀಧರ್ ಅವರ ಪತ್ನಿ ಹಾಗೂ ಪುತ್ರಿಯರು ನಿಶ್ಚಿತಾರ್ಥಕ್ಕೆ ತೆರಳಿದ್ದರು.
Robbery; ದೇವರ ಹುಂಡಿ ಕಳ್ಳತನಕ್ಕೂ ಮುನ್ನ ನಮಸ್ಕಾರ ಮಾಡಿಕೊಂಡ! ವಿಡಿಯೋ
ಮಧ್ಯಾಹ್ನ 1.45ರ ಸುಮಾರಿಗೆ ಶ್ರೀಧರ್ ಮನೆಗೆ ಬಂದಾಗ ಮನೆಯ ಎರಡನೇ ಮಹಡಿ ಮಲಗುವ ಕೋಣೆಯ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಬಳಿಕ ಕೋಣೆಯ ಒಳಗೆ ಹೋಗಿ ಡ್ರಾಯರ್ ಪರಿಶೀಲಿಸಿದಾಗ 47 ಲಕ್ಷ ರು. ನಗದು ಹಾಗೂ 7 ಲಕ್ಷ ರು. ಮೌಲ್ಯದ 170 ಗ್ರಾಂ ಚಿನ್ನಾಭರಣ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಹಾಗೂ ಆತನ ಪತ್ನಿಯನ್ನು ಹುಡುಕಿದಾಗ ಮನೆ ಖಾಲಿ ಮಾಡಿಕೊಂಡು ಹೋಗಿರುವುದು ತಿಳಿದು ಬಂದಿದೆ. ಆರೋಪಿಗಳು(Accused) ಮನೆಯ ಎಲ್ಲ ಸಿಸಿಟಿವಿ(CCTV) ಕ್ಯಾಮರಾ ಆಫ್ ಮಾಡಿ ಬಳಿಕ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು(Police) ತಿಳಿಸಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್, ನಗದು ಕಳ್ಳತನ
ಕುಶಾಲನಗರ(Kushalnagar): ಕೊಡಗು(Kodagu) ಜಿಲ್ಲೆಯ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಮೊಬೈಲ್ ಅಂಗಡಿಯೊಂದರ ಮೇಲ್ಚಾವಣಿ ಕತ್ತರಿಸಿ ನುಗ್ಗಿದ ಕಳ್ಳರು ಭಾರಿ ಮೌಲ್ಯದ ಮೊಬೈಲ್‌ಗಳು ಮತ್ತು ನಗದು ಕಳ್ಳತನ ಮಾಡಿದ ಪ್ರಕರಣ ನಡೆದಿದೆ.
ಮಂಗಳವಾರ ರಾತ್ರಿ ವೇಳೆಯಲ್ಲಿ ಈ ಘಟನೆ ನಡೆದಿದೆ. ಕುಶಾಲನಗರದ ಮುಖ್ಯ ರಸ್ತೆಯ ಸಮೀಪ ಗಲ್ಲಿಯಲ್ಲಿರುವ ಮೊಬೈಲ್ ಶಾಪ್ ಗೆ ನುಗ್ಗಿದ ಕಳ್ಳರು(Thieves) ಅಂಗಡಿಯಲ್ಲಿಟ್ಟಿದ್ದ 1 ಲಕ್ಷ ರು. ನಗದು ಮತ್ತು ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಮೊಬೈಲ್‌ಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ.
Crime| ಬಾಯ್ ಫ್ರೆಂಡ್‌ಗಾಗಿ ತನ್ನ ಮನೆಯಲ್ಲಿಯೇ ಅರ್ಧ ಕೇಜಿ ಚಿನ್ನಾಭರಣ ಕದ್ದಳು..!
ಮೊಬೈಲ್ ಅಂಗಡಿ(Mobile Shop) ಮಾಲೀಕ ಮದನ್ ಲಾಲ್ ಎಂಬವರು ಬೆಳಗ್ಗಿನ ವೇಳೆ ಅಂಗಡಿಗೆ ಬಂದ ಸಂದರ್ಭ ಅಂಗಡಿಯಲ್ಲಿದ್ದ ವಸ್ತುಗಳು ಮತ್ತು ನಗದು ಕಳ್ಳತನ ಆಗಿರುವುದು ಕಂಡುಬಂದಿದೆ. ತಕ್ಷಣ ಮಾಹಿತಿಯನ್ನು ಕುಶಾಲನಗರ ಪೊಲೀಸ್ ಠಾಣೆಗೆ ತಿಳಿಸಿದ ಕೂಡಲೇ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೃತ್ಯ ನಡೆದ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. ಸಮೀಪದ ಕಟ್ಟಡಗಳ ಸಿಸಿ ಕ್ಯಾಮೆರಾದಲ್ಲಿ ಪರಿಶೀಲನೆ ನಡೆಸಿದ ಸಂದರ್ಭ ಮಂಗಳವಾರ ರಾತ್ರಿ 11.55 ರ ಸಮಯದಲ್ಲಿ ಓರ್ವ ವ್ಯಕ್ತಿ ಮುಸುಕು ಹಾಕಿಕೊಂಡು ಓಡಾಡುತ್ತಿದ್ದ ದೃಶ್ಯ ಗೋಚರಗೊಂಡಿದೆ.
ಸ್ಥಳಕ್ಕೆ ಡಿವೈಎಸ್ಪಿ ಶೈಲೇಂದ್ರ ಕುಮಾರ್, ವೃತ್ತ ನಿರೀಕ್ಷಕರಾದ ಮಹೇಶ್, ಠಾಣಾಧಿಕಾರಿ ಲೋಕೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ