
ಭೋಪಾಲ್(ನ.16): ಎರಡು ದಿನಗಳ ಹಿಂದೆ ರಾತಿಬಾದ್ ಅರಣ್ಯದಲ್ಲಿ ಓರ್ವ ಯುವತಿ ಮತ್ತು ಆಕೆಯ ಮಗುವಿನ ಮೃತದೇಹ (Deadbody) ಪತ್ತೆಯಾದ ಪ್ರಕರಣದಲ್ಲಿ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. 55 ವರ್ಷದ ತಂದೆ ಮೊದಲು 25 ವರ್ಷದ ಮಗಳನ್ನು ಅತ್ಯಾಚಾರಗೈದು (Rape), ನಂತರ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮಗಳ ಪ್ರೇಮ ವಿವಾಹಕ್ಕೆ (Love Marriage) ಕೋಪಗೊಂಡ ತಂದೆಯೇ ಈ ಕುಕೃತ್ಯವೆಸಗಿದ್ದಾನೆ. ವಿಷಯ ರಾತಿಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ.
ಪೊಲೀಸರ ಪ್ರಕಾರ, ಭಾನುವಾರ ಮಧ್ಯಾಹ್ನ 25 ವರ್ಷದ ಯುವತಿ ಮತ್ತು 8 ತಿಂಗಳ ಮಗುವಿನ ಶವ ಸಮಸ್‌ಗಢದ ಕಾಡಿನಲ್ಲಿ (Forest) ಪತ್ತೆಯಾಗಿವೆ. ಇನ್ನು ಮೃತ ಯುವತಿಯನ್ನು ಬಿಲ್ಕಿಸ್‌ಗಂಜ್ ನಿವಾಸಿ ಎಂದು ಗುರುತಿಸಲಾಗಿದೆ. ಈ ವಿಷಯದಲ್ಲಿ ತಂದೆ ಕಮಲ್ ಅವರನ್ನು ಪ್ರಶ್ನಿಸಿದಾಗ ಆತನ ಹೇಳಿಕೆಗಳು ಮತ್ತಷ್ಟು ಆತಂಕ ಹೆಚ್ಚಿಸಿವೆ ಎಂದು ಟಿಐ ಸುಧೇಶ್ ತಿವಾರಿ ಹೇಳಿದ್ದಾರೆ. ತೀವ್ರ ವಿಚಾರಣೆ ಬಳಿಕ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಯುವತಿಯ ತಂದೆ ಕೃಷಿ ಮಾಡುತ್ತಾರೆ ಎಂದೂ ತಿಳಿಸಿದ್ದಾರೆ. ಒಂದು ವರ್ಷದ ಹಿಂದೆ, ಮಗಳು ಬೇರೆ ಜಾತಿಯ ಹುಡುಗನೊಂದಿಗೆ ರಾಯ್‌ಪುರ (ಛತ್ತೀಸ್‌ಗಢ) ಗೆ ಓಡಿಹೋಗಿದ್ದಳು ಮತ್ತು ಅವನೊಂದಿಗೆ ಪ್ರೇಮ ವಿವಾಹವಾಗಿದ್ದಳು (Love Marriage). ಇದರಿಂದ ಅವರು ತುಂಬಾ ದುಃಖಿತರಾಗಿದ್ದರು ಮತ್ತು ಕೋಪಗೊಂಡಿದ್ದರೆನ್ನಲಾಗಿದೆ.
ಮೃತ ಮಗುವನ್ನು ಹೂಳುವ ನೆಪದಲ್ಲಿ ಕಾಡಿಗೆ ಕರೆದೊಯ್ದು ಅಪರಾಧ
ಈ ಮಧ್ಯೆ, ದೀಪಾವಳಿಯಂದು (ನವೆಂಬರ್ 4) ರಾತಿಬಾದ್‌ನಲ್ಲಿ ವಾಸಿಸುವ ಹಿರಿಯ ಮಗಳು ಕರೆ ಮಾಡಿ, ತಂಗಿ ತನ್ನ 8 ತಿಂಗಳ ಮಗುವಿನೊಂದಿಗೆ ಮನೆಗೆ ಬಂದಿದ್ದಾಳೆ, ಅವರ ಮಗ ತೀರಿಕೊಂಡಿದ್ದಾನೆ ಎಂದಿದ್ದಾಳೆ. ಇದಾದ ನಂತರ ಕಮಲ್ ದೀಪಾವಳಿಯ ಎರಡನೇ ದಿನದಂದು ತನ್ನ ಮಗನೊಂದಿಗೆ ಅಲ್ಲಿಗೆ ತಲುಪಿದ್ದಾರೆ. ಮೃತ ದೇಹವನ್ನು ಇಡಬಾರದು ಎಂದು ಕಿರಿಯ ಮಗಳಿಗೆ ಹೇಳಿ, ಅದನ್ನು ಹೂತು ಹಾಕಿಕೊಂಡು ಬರುತ್ತೇವೆ. ಇದಾದ ಬಳಿಕ ತನ್ನ ಮಗ, ಕಿರಿಯ ಮಗಳು ಹಾಗೂ ಮೃತ ಮಗುವನ್ನು ಬೈಕ್‌ನಲ್ಲಿ ಸಮಸ್‌ಗಢದ ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ಸ್ವಲ್ಪ ದೂರ ಮಗನನ್ನು ರಸ್ತೆಯಲ್ಲೇ ನಿಲ್ಲುವಂತೆ ಹೇಳಿ ಮಗಳೊಂದಿಗೆ ಮುಂದಕ್ಕೆ ಹೋಗಿದ್ದಾನೆ.
ಕಾಡಿನೊಳಕ್ಕೆ ಮಗಳನ್ನು ಕರೆದೊಯ್ದ ಯುವಕ ನೀನು ಮದುವೆ ಯಾಕಾಗಿದ್ದೀ? ಎಂದು ಪ್ರಶ್ನಿಸಿ ಅತ್ಯಾಚಾರಗೈದು, ಕೊಲೆ ಮಾಡಿದ್ದಾನೆ. ಇದಾದ ಬಳಿಕ ಮಗಳು ಮತ್ತು ಮೊಮ್ಮಗನ ಮೃತದೇಹವನ್ನು ಕಾಡಿನೊಳಗಿನ ಚರಂಡಿಗೆ ಎಸೆದಿದ್ದಾನೆ. ಹೌದು ಮಗಳು ಪ್ರೀತಿಸಿ ಮದುವೆಯಾಗಿದ್ದಳು. ಇದರಿಂದ ಕೋಪಗೊಂಡ ಅಪ್ಪ ಈ ಕುಕೃತ್ಯ ಎಸಗಿದ್ದಾನೆ.
ಇನ್ನು ನೀನೇಕೆ ಮದುವೆಯಾಗಿದ್ದು ಎಂದು ತಂದೆ ಮಗಳನ್ನು ಪ್ರಶ್ನಿಸಿದಾಗ ಮಗಳು ಏನನ್ನೂ ಹೇಳಲಿಲ್ಲ. ಹೀಗಿರುವಾಗ ತಂದೆ ನೀನು ಇದಕ್ಕಾಗಿ ಮದುವೆಯಾಗಿರುವೆ ... ಬಾ, ನಾನು ಇದನ್ನು ನಿನಗೆ ಕೊಡುತ್ತೇನೆ ಎಂದು ಮಗಳನ್ನು ರೇಪ್ ಮಾಡಿದ್ದಾನೆ. ಈ ವೇಳೆ ಮಗಳು ತನ್ನನ್ನು ಬಿಡುವಂತೆ ಅಂಗಲಾಚಿದರೂ ತಂದೆ ಕೇಳಲಿಲ್ಲ. ಬಳಿಕ ಆರೋಪಿ ತಂದೆ ಮಗಳು ಮತ್ತು ಮೊಮ್ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ, ಇಬ್ಬರ ಶವಗಳನ್ನು ಚರಂಡಿಗೆ ಎಸೆದು ಮಗನ ಜೊತೆ ಮನೆಗೆ ಬಂದಿದ್ದಾನೆ. ಘಟನೆಯ ನಂತರ, ಹಿರಿಯ ಮಗಳು, ತಂದೆ ತನ್ನ ಕಿರಿಯ ಸಹೋದರಿಯನ್ನು ಕೊಲೆಗೈದಿದ್ದಾಗಿ ಹೇಳಿದ್ದಾಳೆ.
ಆಸುಪಾಸಿನವರ ಚುಚ್ಚು ಮಾತಿನಿಂದ ಕೋಪಗೊಂಡಿದ್ದ ಅಪ್ಪ
ಮಗಳು ಪ್ರೇಮವಿವಾಹದ ಕಾರಣಕ್ಕೆ ಸಮಾಜದ ಜನರು ಹೀಯಾಳಿಸುತ್ತಿದ್ದರು ಎಂದು ಆರೋಪಿ ತಂದೆ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಗಳ ಕಾರಣದಿಂದ ಮನೆಯಿಂದ ಹೊರಗೆ ಹೋಗಲೂ ಆಗುತ್ತಿರಲಿಲ್ಲ. ಸಮಾಜದಲ್ಲಿ ಎಲ್ಲಿಯೂ ಮುಖ ತೋರಿಸದ ಕಾರಣ ಮನಸ್ಸಿನಲ್ಲಿ ಸಿಟ್ಟು ಉಳಿದು ಅವಕಾಶ ಸಿಕ್ಕ ತಕ್ಷಣ ಸೇಡು ತೀರಿಸಿಕೊಂಡೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ