ಆರೋಪಿ ಅಣ್ಣ ಶಂಕ್ರಪ್ಪ ಕುಡಿದು ಬಂದು ಮನೆಯಲ್ಲಿ ಜಗಳ ಮಾಡಿದ್ದ, ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ತಮ್ಮ ಹನುಮಂತಪ್ಪನ ಎದೆಗೆ ಚೂರಿ ಇರಿದಿದ್ದನು. ತಕ್ಷಣ ಹನುಮಂತಪ್ಪ ಲಮಾಣಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಹಾವೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಹನುಮಂತಪ್ಪ ಲಮಾಣಿ ಸಾವನ್ನಪ್ಪಿದ್ದಾನೆ.
ಹಾವೇರಿ(ಫೆ.17): ಅನೈತಿಕ ಸಂಬಂಧದ ಶಂಕೆ ಹಿನ್ನಲೆಯಲ್ಲಿ ತಮ್ಮನ ಎದೆಗೆ ಅಣ್ಣ ಚೂರಿ ಹಾಕಿ ಕೊಲೆಗೈದ ಘಟನೆ ಹಾವೇರಿ ತಾಲೂಕಿನ ನೆಲೋಗಲ್ಲ ತಾಂಡಾ ಇಂದು(ಶನಿವಾರ) ನಡೆದಿದೆ. ಹನುಮಂತಪ್ಪ ಲಮಾಣಿ(42) ಕೊಲೆಯಾದ ದುರ್ದೈವಿಯಾಗಿದ್ದಾನೆ. ಶಂಕ್ರಪ್ಪ ಲಮಾಣಿ(55) ಎಂಬಾತನೇ ತಮ್ಮನನ್ನ ಕೊಲೆಗೈದ ಆರೋಪಿಯಾಗಿದ್ದಾನೆ.
ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಶಂಕೆಯಿಂದ ತಮ್ಮ ಹನುಮಂತಪ್ಪ ಲಮಾಣಿಯನ್ನ ಕೊಲೆಗೈದಿರಬಹುದು ಎಂದು ಶಂಕಿಸಲಾಗಿದೆ. ಆರೋಪಿ ಅಣ್ಣ ಶಂಕ್ರಪ್ಪ ಕುಡಿದು ಬಂದು ಮನೆಯಲ್ಲಿ ಜಗಳ ಮಾಡಿದ್ದ, ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ತಮ್ಮ ಹನುಮಂತಪ್ಪನ ಎದೆಗೆ ಚೂರಿ ಇರಿದಿದ್ದನು. ತಕ್ಷಣ ಹನುಮಂತಪ್ಪ ಲಮಾಣಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಹಾವೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಹನುಮಂತಪ್ಪ ಲಮಾಣಿ ಸಾವನ್ನಪ್ಪಿದ್ದಾನೆ.
ಚಿಕ್ಕಬಳ್ಳಾಪುರ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ ಕೊಲೆ ಮಾಡಿದ ಪ್ರಿಯಕರ
ಆರೋಪಿ ಶಂಕ್ರಪ್ಪನನ್ನು ಪೋಲಿಸರು ಬಂಧಿಸಿದ್ದಾರೆ. ಈ ಸಂಬಂಧ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.