ಸಾವಿಗೂ ಮುನ್ನ ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಮಹಿಳೆಯೇ ತನ್ನ ಸಾವಿಗೆ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ನಂತರ ಡೆತ್ ನೋಟ್ ಬರೆದಿಟ್ಟು ಮರಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾದ ಶಿವಣ್ಣ.
ವಿಜಯಪುರ(ಜು.25): ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧದ ಹೊಂದಿದ್ದ ಕಾರಣಕ್ಕೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್. ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. ಶಿವಣ್ಣ ಚೌಧರಿ (40) ಎಂಬಾತನೇ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ.
ಸಾವಿಗೂ ಮುನ್ನ ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಮಹಿಳೆಯೇ ತನ್ನ ಸಾವಿಗೆ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ನಂತರ ಡೆತ್ ನೋಟ್ ಬರೆದಿಟ್ಟು ಮರಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.
ತನ್ನ ಸಾವಿಗೆ ತಾರಾ(ಹೆಸರು ಬದಲಾಯಿಸಲಾಗಿದೆ) ಕಾರಣ ಎಂದು ಹೇಳಿ ಮೃತ ಶಿವಣ್ಣ ಡೆತ್ ನೋಟ್ ಬರೆದಿಟ್ಟಿದ್ದಾನೆ. ತಾರಾ ಜೊತೆಗೆ ಅನೈತಿಕ ಸಂಬಂದ ಇಟ್ಟುಕೊಂಡಿದ್ದಾಗಿ ಮೃತ ಶಿವಣ್ಣ ಹೇಳಿದ್ದಾನೆ. ತನ್ನ ವ್ಯಾಟ್ಸ್ ಆ್ಯಪ್ ಸ್ಟೇಟಸ್ ನಲ್ಲಿ ತಾರಾ ಜೊತೆಗಿರೋ ಫೋಟೋಗಳನ್ನು ಹಾಕಿದ್ದಾನೆ. ತಾರಾಗೆ ಹೆಚ್ಚಿನ ಪ್ರಮಾಣದ ಹಣ ಕೊಟ್ಟಿದ್ದೆ, ಮನೆಯವರ ವಿರೋಧ ಕಟ್ಟಿಕೊಂಡು ಆಕೆಯೊಂದಿಗಿದ್ದೆ, ನನ್ನ ಬಳಿ ಹಣ ಖಾಲಿಯಾದ ಬಳಿಕ ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ ಎಂದಿದ್ದಾಳೆ ಎಂದು ಡೆತ್‌ನೋಟ್‌ನಲ್ಲಿ ಮೃತ ಶಿವಣ್ಣ ಉಲ್ಲೇಖಿಸಿದ್ದಾನೆ.
Bengaluru crime: ಪತ್ನಿ ಜತೆ ಅಕ್ರಮ ಸಂಬಂಧ ಶಂಕೆ; ನೌಕರನಿಂದ ಹೊಟೇಲ್ ಕ್ಯಾಷಿಯರ್ ಹತ್ಯೆ
ತಾರಾಗೆ ತಕ್ಕ ಪಾಠವಾಗಬೇಕು. ನನ್ನ ಮೂರು ಮಕ್ಕಳು ಅನಾಥವಾದರೂ ಪರವಾಗಿಲ್ಲಾ ಆಕೆಗೆ ಶಿಕ್ಷೆಯಾಗಬೇಕು. ನಾನು ಆಕೆಗೆ ಕೊಟ್ಟ ಹಣ ನನ್ನ ಮಕ್ಕಳಿಗೆ ತಲುಪಲಿ ಎಂದು ವಿಡಿಯೋದಲ್ಲಿ ಶಿವಣ್ಣ ಹೇಳಿದ್ದಾನೆ. ಆಕೆ ನೂರು ಜನರಿಗೂ ಅಧಿಕ ಜನರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಮೃತ ಶಿವಣ್ಣ ಆರೋಪಿಸಿದ್ದಾನೆ. ಇದರ ಜೊತೆಗೆ ಗ್ರಾಮದ ಕೆಲವರ ಹೆಸರನ್ನೂ ಹೇಳಿದ್ದಾನೆ. ಗ್ರಾಮದ ಸಿದ್ದು ವಾಲೀಕಾರ ಮಾಟಮಂತ್ರ ಮಾಡುತ್ತಾನೆ. ಅದರಿಂದ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಾನೆ. ಸಿದ್ದುಗೆ ಮಹಮ್ಮದಸಾಬ್ ಫತ್ತೇಪೂರ, ಬಾಬು ನಾಟೀಕಾರ ಹಾಗೂ ಮಲಕಪ್ಪ ಸಹಾಯ ಮಾಡುತ್ತಾರೆಂದು ಆರೋಪಿಸಿ ಶರಣಾಗಿರೋ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇಷ್ಟೆಲ್ಲಾ ಮಾತನಾಡಿ ಶಿವಣ್ಣ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.