ಬೆಂಗಳೂರು: ಪೊಲೀಸರ ಕಂಡು ಓಡಿದವರ ಬೈಕ್‌ನಲ್ಲಿ ಗಾಂಜಾ, ಡ್ಯಾಗರ್‌ ಪತ್ತೆ..!

Published : Jul 25, 2023, 06:54 AM IST
ಬೆಂಗಳೂರು: ಪೊಲೀಸರ ಕಂಡು ಓಡಿದವರ ಬೈಕ್‌ನಲ್ಲಿ ಗಾಂಜಾ, ಡ್ಯಾಗರ್‌ ಪತ್ತೆ..!

ಸಾರಾಂಶ

ಅಪರಿಚಿತರು ಬಿಟ್ಟು ಹೋದ ದ್ವಿಚಕ್ರ ವಾಹನದಲ್ಲಿ 40 ಗ್ರಾಂ ಗಾಂಜಾ ಹಾಗೂ ಒಂದು ಡ್ಯಾಗರ್‌ ಪತ್ತೆಯಾಗಿದೆ. ದ್ವಿಚಕ್ರ ವಾಹನ ಜಪ್ತಿ ಮಾಡಿರುವ ತಲಘಟ್ಟಪುರ ಠಾಣೆ ಪೊಲೀಸರು, ಈ ಸಂಬಂಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿ, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. 

ಬೆಂಗಳೂರು(ಜು.25):  ವೇಗವಾಗಿ ಬಂದ ದ್ವಿಚಕ್ರ ವಾಹನವನ್ನು ಸಂಚಾರ ಪೊಲೀಸರು ನಿಲ್ಲಿಸುವಂತೆ ಸೂಚಿಸಿ ತಡೆಯಲು ಮುಂದಾದಾಗ ಸವಾರ ಹಾಗೂ ಹಿಂಬದಿ ಸವಾರ ರಸ್ತೆಯಲ್ಲೇ ದ್ವಿಚಕ್ರ ವಾಹನ ಬಿಟ್ಟು ಪರಾರಿಯಾಗಿರುವ ಘಟನೆ ತಲಘಟ್ಟಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಪರಿಚಿತರು ಬಿಟ್ಟು ಹೋದ ದ್ವಿಚಕ್ರ ವಾಹನದಲ್ಲಿ 40 ಗ್ರಾಂ ಗಾಂಜಾ ಹಾಗೂ ಒಂದು ಡ್ಯಾಗರ್‌ ಪತ್ತೆಯಾಗಿದೆ. ದ್ವಿಚಕ್ರ ವಾಹನ ಜಪ್ತಿ ಮಾಡಿರುವ ತಲಘಟ್ಟಪುರ ಠಾಣೆ ಪೊಲೀಸರು, ಈ ಸಂಬಂಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿ, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಶೆ ಏರಿಸಿ, ಕಿಕ್ ನೀಡೋ ಗಾಂಜಾ… ದೇಹ ಸೇರಿದರೆ ನಿತ್ಯ ನರಕ, ತರೋ ಕಾಯಿಲೆ ಒಂದೆರಡಲ್ಲ

ವ್ಹೀಲಿಂಗ್‌ ಮಾಡುವ ದ್ವಿಚಕ್ರ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲು ತಲಘಟ್ಟಪುರ ಸಂಚಾರ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಚಿಕ್ಕೇಗೌಡನಪಾಳ್ಯದ 80 ಅಡಿ ರಸ್ತೆಯಲ್ಲಿ ಭಾನುವಾರ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸಂಜೆ 80 ಅಡಿ ರಸ್ತೆ ಕಡೆಯಿಂದ ಚನ್ನಸಂದ್ರದ ಕಡೆಗೆ ದ್ವಿಚಕ್ರ ವಾಹನವೊಂದು ಬಹಳ ವೇಗವಾಗಿ ಬಂದಿದೆ. ಈ ವೇಳೆ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಸಿಬ್ಬಂದಿ, ದ್ವಿಚಕ್ರ ವಾಹನ ನಿಲ್ಲಿಸುವಂತೆ ತಡೆಯಲು ಮುಂದಾದಾಗಿದ್ದಾರೆ. ಆಗ ಸವಾರ ಹಾಗೂ ಹಿಂಬದಿ ಸವಾರ ರಸ್ತೆಯಲ್ಲೇ ದ್ವಿಚಕ್ರ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಈ ವೇಳೆ ದ್ವಿಚಕ್ರ ವಾಹನ ತಪಾಸಣೆ ಮಾಡಿದಾಗ ಗಾಂಜಾ ಹಾಗೂ ಡ್ಯಾಗರ್‌ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!