ದೀಪಾವಳಿ ದಿನವೇ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರ್ಮರಣ

By Suvarna News  |  First Published Nov 15, 2020, 9:57 PM IST

ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಆದ್ರೆ, ಈ ಕುಟುಂಬ ಮಸಾಣ ಸೇರಿದೆ.


ಬೆಳಗಾವಿ, (ನ.15): ದೀಪಾವಳಿ ಹಬ್ಬದ ಸಡಗರದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪುಟ್ಟ ಬಾಲಕಿ ಸೇರಿ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾದ ಘಟನೆ ಬೆಳಗಾವಿಯ ಗೋಕಾಕ್ ನಲ್ಲಿ ನಡೆದಿದೆ.

ಗೋಕಾಕ್ ಸಂಗೇಶ್ವರ-ನರಗುಂದ ಕಾರೊಂದಕ್ಕೆ ಟಾಟಾ ಏಸ್ ಡಿಕ್ಕಿಯಾದ ಪರಿಣಾಮ 4 ವರ್ಷದ ಓರ್ವ ಬಾಲಕಿ, ಇಬ್ಬರು ಮಹಿಳೆಯರು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದೆ.

Tap to resize

Latest Videos

ಹೊಸಪೇಟೆ: ದೀಪಾವಳಿ ಹಬ್ಬದಂದೇ ಭರ್ಜರಿ ಕಾರ್ಯಾಚರಣೆ, 7 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಗೋಕಾಕ್ ತಾಲೂಕಿನ ಮಮದಾಪೂರ ಕ್ರಾಸ್ ಸಮೀಪ ನಡೆದ ಘಟನೆಯಲ್ಲಿ ಮೃತಪಟ್ತವರೆಲ್ಲರೂ  ರಾಮದುರ್ಗ ತಾಲೂಕಿನ ಮುರಕಟ್ನಾಳ್ ಗ್ರಾಮದವರೆನ್ನಲಾಗಿದೆ.

ಗಾಯಾಳುಗಳನ್ನು ಗೋಕಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಸಂಬಂಧ ಗೋಕಾಕ್​​ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!