ಮೆಣಸಿನ ಗಿಡ ಹಾಗೂ ಹತ್ತಿಯ ಹೊಲದಲ್ಲಿ ಅಕ್ರಮವಾಗಿ ಬೆಳೆದ 31 ಗಾಂಜಾ ಗಿಡಗಳು| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ನಡೆದ ಘಟನೆ| ಸ್ಥಳದಿಂದ ಪರಾರಿಯಾದ ಆರೋಪಿಗಳು
ಬಳ್ಳಾರಿ(ನ.15): ದೀಪಾವಳಿ ಹಬ್ಬದಂದೇ ಅಬಕಾರಿ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ 7 ಲಕ್ಷ 20 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಿದ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಗುಂಡ್ಲಹಳ್ಳಿಯಿಂದದ ಬಸಾಪುರಕ್ಕೆ ಹೋಗುವ ಮಧ್ಯದಲ್ಲಿ ಇಂದು (ಭಾನುವಾರ) ನಡೆದಿದೆ.
ಸರ್ವೆ ನಂಬರ್ 63 /2 ಸರ್ವೆ ನಂಬರ್ 63/3 ದೇವಣ್ಣ ಹಾಗೂ ಬಾಲಯ್ಯ ಇವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಮೆಣಸಿನ ಗಿಡ ಹಾಗೂ ಹತ್ತಿಯ ಹೊಲದಲ್ಲಿ ಅಕ್ರಮವಾಗಿ 31 ಗಾಂಜಾ ಗಿಡಗಳನ್ನು ಬೆಳೆದಿದ್ದ ರೈತರು ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಳ್ಳಾರಿ: ಹೊಲದಲ್ಲಿ ಬೆಳೆದಿದ್ದ 1.75 ಲಕ್ಷ ರು. ಮೌಲ್ಯದ ಗಾಂಜಾ ವಶ
ದಾಳಿ ವೇಳೆ ಒಟ್ಟು 49 ಕೆಜಿ 240 ಗ್ರಾಂ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊಲದ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ದಾಳಿ ಮಾಡಿದ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.