ಚಿನ್ನದಂಗಡಿ ಮೇಲೆ ನಕಲಿ ಪೊಲೀಸರ ದಾಳಿ: 800 ಗ್ರಾಂ ಆಭರಣ ಕಳ್ಳತನ

By Suvarna NewsFirst Published Nov 15, 2020, 11:42 AM IST
Highlights

ಚಿನ್ನದಂಗಡಿಯಲ್ಲಿ ನಕಲಿ ಪೊಲೀಸರು ಕೈಚಳಕ| ಬೆಂಗಳೂರಿನ ಹಲಸೂರು ಗೇಟ್ ನಗರ್ತಪೇಟೆಯಲ್ಲಿ ನಡೆದ ಘಟನೆ| ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು|

ಬೆಂಗಳೂರು(ನ.15): ಖದೀಮರ ತಂಡವೊಂದು ಪೊಲೀಸರ ಸೋಗಿನಲ್ಲಿ ಚಿನ್ನದಂಗಡಿಯಲ್ಲಿ ಚಿನ್ನಭಾರಣ ಕಳ್ಳತನ ಮಾಡಿದ ಘಟನೆ ನಗರದ ಹಲಸೂರು ಗೇಟ್ ನಗರ್ತಪೇಟೆಯಲ್ಲಿ ನಡೆದಿದೆ. ಚಿನ್ನಭಾರಣ ಪಾಲಿಶ್ ಮಾಡುವ ಗೀತಾ ಜುವೆಲ್ಲರ್ಸ್ ಎಂಬ ಚಿನ್ನದಂಗಡಿಯಲ್ಲಿ ನಕಲಿ ಪೊಲೀಸರು ತಮ್ಮ ಕೈಚಳಕ ಮೆರೆದಿದ್ದಾರೆ.  

"

ನಿಮ್ಮ ಚಿನ್ನದಂಗಡಿಯಲ್ಲಿ ದೀಪಾವಳಿ ಹಬ್ಬಕ್ಕೆ ನಕಲಿ‌ ಚಿನ್ನ ಮಾರಾಟ ಮಾಡುತ್ತಿದ್ದೀರಿ ಎಂದು ದಾಳಿ ಮಾಡುತ್ತಿರುವುದಾಗಿ ಹೇಳಿದ್ದಾರೆ ಖದೀಮರ ತಂಡ. ನಾವು ಪೊಲೀಸರು ರೇಡ್‌ಗೆ ಬಂದಿದ್ದೇವೆ ಎಂದು 800 ಗ್ರಾಂ ನಷ್ಟು ಚಿನ್ನಭಾರಣ ಕಳ್ಳತನ ಮಾಡಿದ್ದಾರೆ.

ಟ್ರ್ಯಾಕ್ಟರ್ ಕದ್ದು ಭೋಗ್ಯಕ್ಕೆ ಬಿಡುತ್ತಿದ್ದ ಖತರ್ನಾಕ್‌ ಕಳ್ಳ ಅರೆಸ್ಟ್‌

ಕೋಲ್ಕತ್ತಾದಲ್ಲಿ ಇದ್ದ ಮಾಲೀಕನಿಗೆ ಕರೆ ಮಾಡಿದ ಖದೀಮರು ನಿಮ್ಮ ಅಂಗಡಿ‌ ಮೇಲೆ  ರೇಡ್ ಮಾಡಿದ್ದೇವೆ ಪೊಲೀಸ್ ಠಾಣೆಗೆ ಬನ್ನಿ ಎಂದು ಹೇಳಿದ್ದಾರೆ. ಹೀಗಾಗಿ ಗೀತಾ ಜುವೈಲರ್ಸ್ ಮಾಲೀಕ ಕಾರ್ತಿಕ್ ಎಂಬುವರು ಕೋಲ್ಕತ್ತಾದಿಂದ ಬಂದು, ಹಲಸೂರು ಗೇಟ್ ಪೊಲೀಸ್ ಠಾಣೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಜುವೆಲ್ಲರ್ಸ್ ನಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. 

ಈ ಸಂಬಂಧ ಗೀತಾ ಜುವೈಲರ್ಸ್ ಮಾಲೀಕ ಕಾರ್ತಿಕ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸುರ ಅರೋಪಿಗಳ ಪತ್ತೆ ಜಾಲ ಬೀಸಿದ್ದಾರೆ. ಸದ್ಯ ಕಾರಿನ ನಂಬರ್ ಆಧರಿಸಿ ನಾಗಮಂಗಲ ಮೂಲದ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಮತ್ತಿಬ್ಬರು ಕಳ್ಳರಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. 
 

click me!