30 ಜನ ಅಯ್ಯಪ್ಪ ಪಾದಯಾತ್ರಿಗಳಿಗೆ ಕಾರು ಡಿಕ್ಕಿ, 1 ಸಾವು!

By Kannadaprabha News  |  First Published Dec 11, 2023, 5:42 AM IST

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಪಾದಯಾತ್ರೆ ಹೊರಟಿದ್ದ ಸುಮಾರು 30 ಮಂದಿಯಿದ್ದ ತಂಡದ ಮೇಲೆ ಕಾರೊಂದು ಹರಿದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಉಳಿದವರು ಅದೃಷ್ಟವಶಾತ್‌ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.


ಚಿಕ್ಕಬಳ್ಳಾಪುರ (ಡಿ.11) :  ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಪಾದಯಾತ್ರೆ ಹೊರಟಿದ್ದ ಸುಮಾರು 30 ಮಂದಿಯಿದ್ದ ತಂಡದ ಮೇಲೆ ಕಾರೊಂದು ಹರಿದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಉಳಿದವರು ಅದೃಷ್ಟವಶಾತ್‌ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಆಂಧ್ರ ಮೂಲದ ವೆಂಕಟೇಶ್‌(55) ಮೃತ ದುರ್ದೈವಿ. ಮಾಲೆಧಾರಿಗಳು ಆಂಧ್ರದ ಅನಂತಪುರ ಜಿಲ್ಲೆಯ ಹಿಂದೂಪುರ ಪಟ್ಟಣದಿಂದ ಚಿಕ್ಕಬಳ್ಳಾಪುರದ ಗೌರಿಬಿದನೂರಿಗೆ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದರು. ಈ ವೇಳೆ ಚೌಳೂರು ಕಡೆಯಿಂದ ಬಂದ ಕಾರು ಏಕಾಏಕಿ ಅಯ್ಯಪ್ಪ ಸ್ವಾಮಿ‌ ಮಾಲಾಧಾರಿಗಳ‌ತ್ತ ನುಗ್ಗಿದೆ. ಆಗ ಮಾಲಾಧಾರಿಗಳು ದಿಕ್ಕಾಪಾಲಾಗಿದ್ದು, ಆದರೆ ವೆಂಕಟೇಶ್ ಮಾತ್ರ ಕಾರಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Tap to resize

Latest Videos

ಘಟನೆಯಲ್ಲಿ ಪ್ರಹ್ಲಾದ್ ಹಾಗೂ ಮಣಿಕಂಠ ಎನ್ನುವವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಗೌರಿಬಿದನೂರಿನ ಸಾರ್ವಜನಿಕ ‌ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರ ಸಾವು

ರಸ್ತೆ ಅಪಘಾತ ಓರ್ವನ ಸಾವು; ಇಬ್ಬರ ಸ್ಥಿತಿ ಗಂಭೀರ

ಕಾರ್ಕಳ: ಬಸ್‌-ಬೊಲೆರೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಂಜರ್ಪಲ್ಕೆ ಎಂಬಲ್ಲಿ ನಡೆದಿದೆ.

ನಂದಳಿಕೆ ಕಡೆಯಿಂದ ಬರುತ್ತಿದ್ದ ಬೋಲೆರೊ ಕಾರು, ಕಾರ್ಕಳ ಕಡೆಯಿಂದ ಬರುತ್ತಿದ್ದ ಮುಂಬೈ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೊಲೆರೋದಲ್ಲಿದ್ದ ಚಿಕ್ಕಮಗಳೂರು ಜಿಲ್ಲೆಯ ಜಯಪುರ ನಿವಾಸಿ ಶಿವಪ್ಪ (48) ಸ್ಥಳದಲ್ಲೇ ಮೃತಪಟ್ಟರೆ, ಮಂಜು (45), ಸುಜಯ (28) ಅವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಕಳ ತಾಲೂಕಿನ ನಂದಳಿಕೆಯ ತಮ್ಮ ಕುಟುಂಬದ ಮನೆಗೆ ದೇವರ ಕಾರ್ಯಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಜಯಪುರದಿಂದ ನಂದಳಿಕೆಗೆ ಬೆಳಗ್ಗೆ ಬಂದಿದ್ದ ಕುಟುಂಬದ ಸದಸ್ಯರು, ಮನೆಯಲ್ಲಿ ಪೂಜೆ ಮುಗಿಸಿ ಮಧ್ಯಾಹ್ನದ ಭೋಜನ ಮುಗಿಸಿ ಹಿಂದಿರುಗುವ ಸಂದರ್ಭ ಈ ಘಟನೆ ಸಂಭವಿಸಿದೆ.

ಚಿತ್ರದುರ್ಗ ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್ ಅಪಘಾತ: ಇಬ್ಬರ ಸಾವು, ಹಲವರ ಸ್ಥಿತಿ ಗಂಭೀರ

ಅಪಘಾತದಲ್ಲಿ ಮೃತರಾದ ಕುಟುಂಬ ಗುರಿಕಾರ ಶಿವಪ್ಪ ಅವರೇ ಮುಂದೆ ನಿಂತು ದೈವದ ಕೆಲಸದ ವಿಧಿವಿಧಾನಗಳನ್ನು ನಡೆಸಿಕೊಟ್ಟಿದ್ದರು.

ಬಸ್‌ನಲ್ಲಿದ್ದ 12 ಮಂದಿ ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳ ರೋಟರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ 108 ಆಂಬುಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದರು.

click me!