ಆಧಾರ್‌ ದುರ್ಬಳಕೆ ನೆಪ: ಮುಂಬೈ ಪೊಲೀಸ್‌ ಸೋಗಲ್ಲಿ ಉದ್ಯಮಿಯಿಂದ ₹2 ಕೋಟಿ ಸುಲಿಗೆ!

By Kannadaprabha News  |  First Published Dec 11, 2023, 4:40 AM IST

ಮುಂಬೈ ಸೈಬರ್‌ ಕ್ರೈಂ ಪೊಲೀಸರ ಸೋಗಿನಲ್ಲಿ ಉದ್ಯಮಿಗೆ ಕರೆ ಮಾಡಿ ನಿಮ್ಮ ಹೆಸರಿನ ದಾಖಲೆ ಬಳಸಿಕೊಂಡು ವಿದೇಶಕ್ಕೆ ಮಾದಕವಸ್ತು ಕೋರಿಯರ್‌ ಮಾಡುತ್ತಿರುವ ಬಗ್ಗೆ ದೂರು ಬಂದಿದೆ ಎಂದು ಬೆದರಿಸಿ ಬರೋಬ್ಬರಿ 1.98 ಕೋಟಿ ರು. ಹಣ ವಂಚಿಸಿದ ಸಂಬಂಧ ನಗರದ ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.


ಬೆಂಗಳೂರು (ಡಿ.11): ಮುಂಬೈ ಸೈಬರ್‌ ಕ್ರೈಂ ಪೊಲೀಸರ ಸೋಗಿನಲ್ಲಿ ಉದ್ಯಮಿಗೆ ಕರೆ ಮಾಡಿ ನಿಮ್ಮ ಹೆಸರಿನ ದಾಖಲೆ ಬಳಸಿಕೊಂಡು ವಿದೇಶಕ್ಕೆ ಮಾದಕವಸ್ತು ಕೋರಿಯರ್‌ ಮಾಡುತ್ತಿರುವ ಬಗ್ಗೆ ದೂರು ಬಂದಿದೆ ಎಂದು ಬೆದರಿಸಿ ಬರೋಬ್ಬರಿ 1.98 ಕೋಟಿ ರು. ಹಣ ವಂಚಿಸಿದ ಸಂಬಂಧ ನಗರದ ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿ ತಾರಕ್‌ ಶಾ (52) ಸೈಬರ್‌ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಂಡವರು. ಶಾ ನೀಡಿದ ದೂರಿನ ಮೇರೆಗೆ ರಾಹುಲ್‌ ಕುಮಾರ್‌ ಮತ್ತು ಬಲ್‌ಸಿಂಗ್‌ ರಜಪೂತ್‌ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ದೋಚುತ್ತಿದ್ದಾಗಲೇ ಮನೆಗೆ ಬಂದು ಕಳ್ಳರನ್ನು ಕೂಡಿ ಹಾಕಿದ ಮಾಲೀಕ!

\Bಏನಿದು ಪ್ರಕರಣ?: \Bದೂರುದಾರ ತಾರಕ್‌ ಶಾ ಅವರಿಗೆ ಡಿ.2ರಂದು ಅಪರಿಚಿತ ಸಂಖ್ಯೆಯಿಂದ ಸ್ಕೈಪ್ ಕಾಲ್‌ ಬಂದಿದೆ. ಫೆಡೆಕ್ಸ್‌ ಕೊರಿಯರ್‌ನಿಂದ ಕರೆ ಮಾಡುತ್ತಿರುವುದಾಗಿ ಆ ವ್ಯಕ್ತಿ ಮೊದಲಿಗೆ ಪರಿಚಯಿಸಿ ಕೊಂಡಿದ್ದಾನೆ. ನಿಮ್ಮ ಆಧಾರ್‌ ಕಾರ್ಡ್‌ ಸಂಖ್ಯೆ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಮುಂಬೈನಿಂದ ತೈವಾನ್‌ ದೇಶಕ್ಕೆ ಎಂಡಿಎಂಎ ಡ್ರಗ್ಸ್‌ ಕೊರಿಯರ್‌ ಮಾಡಲಾಗಿದೆ. ಈ ಸಂಬಂಧ ಮುಂಬೈ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದಿದ್ದಾನೆ.

ಬಳಿಕ ಮುಂಬೈ ಸೈಬರ್‌ ಕ್ರೈಮ್‌ ಪೊಲೀಸರ ಸೋಗಿನಲ್ಲಿ ಕರೆ ಮಾಡಿ, ನಿಮ್ಮ ಹೆಸರಿನ ದಾಖಲೆಗಳನ್ನು ಬಳಸಿಕೊಂಡು ಅಕ್ರಮವಾಗಿ ವಿದೇಶಕ್ಕೆ ನಿಷೇಧಿತ ವಸ್ತುಗಳನ್ನು ಕೊರಿಯರ್‌ ಮಾಡಲಾಗುತ್ತಿದೆ. ಈ ಸಂಬಂಧ ನಿಮ್ಮನ್ನು ವಿಚಾರಣೆ ಮಾಡಬೇಕು ಎಂದಿದ್ದಾರೆ. ಇದರಿಂದ ಆತಂಕಗೊಂಡ ತಾರಕ್‌, ತಮಗೂ ಆ ಕೊರಿಯರ್‌ಗೂ ಸಂಬಂಧವಿಲ್ಲ ಎಂದಿದ್ದಾರೆ. ಈ ವೇಳೆ ದುಷ್ಕರ್ಮಿಗಳು, ಈ ಸಂಬಂಧ ಪರಿಶೀ ಲಿಸುವ ಅಗತ್ಯವಿದ್ದು, ನಾವು ನೀಡುವ ಖಾತೆಗೆ ಹಣ ಹಾಕುವಂತೆ ಸೂಚಿಸಿದ್ದಾರೆ. ಪರಿಶೀಲನೆ ಬಳಿಕ ಆ ಹಣವನ್ನು ವಾಪಾಸ್‌ ನೀಡುವುದಾಗಿ ತಿಳಿಸಿದ್ದಾರೆ.

ಬಾಲ್ಕನಿ ಸ್ವಚ್ಛಗೊಳಿಸುವಾಗ 5ನೇ ಮಹಡಿಯಿಂದ ಬಿದ್ದು ಮಹಿಳೆಯ ದಾರುಣ ಸಾವು

ಇವರ ಮಾತು ನಂಬಿದ ತಾರಕ್‌ ಅವರು, ದುಷ್ಕರ್ಮಿಗಳು ನೀಡಿದ ಬ್ಯಾಂಕ್‌ ಖಾತೆಗಳಿಗೆ ವಿವಿಧ ಹಂತಗಳಲ್ಲಿ 1.98 ಕೋಟಿ ರು. ಹಣ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ಬಳಿಕ ದುಷ್ಕರ್ಮಿಗಳು, ತಾರಕ್‌ ಅವರ ಸಂಪರ್ಕಕ್ಕೆ ಸಿಕ್ಕಿಲ್ಲ. ಹತ್ತಾರು ಬಾರಿ ಕರೆ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಬಳಿಕ ತಾನು ಸೈಬರ್‌ ವಂಚಕರ ಬಲೆ ಬಿದ್ದಿರುವುದು ತಾರಕ್‌ ಅವರಿಗೆ ಅರಿವಾಗಿದೆ. ಬಳಿಕ ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!