ಕ್ರೆಡಿಟ್‌ ಕಾರ್ಡ್‌ ಕೊಡಿಸುತ್ತೇವೆಂದು ನಂಬಿಸಿ ವೃದ್ಧನಿಂದ ₹4.77 ಲಕ್ಷ ಸುಲಿದ ಖದೀಮರು!

By Kannadaprabha News  |  First Published Dec 11, 2023, 4:49 AM IST

ದುಷ್ಕರ್ಮಿಗಳು ಕೆನರಾ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಕೊಡಿಸುವುದಾಗಿ ವೃದ್ಧರೊಬ್ಬರನ್ನು ನಂಬಿಸಿ 4.77 ಲಕ್ಷ ರು. ಹಣ ಹಾಕಿಸಿಕೊಂಡು ಬಳಿಕ ವಂಚಿಸಿದ ಆರೋಪ ಸಂಬಂಧ ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.


ಬೆಂಗಳೂರು (ಡಿ.11) :  ದುಷ್ಕರ್ಮಿಗಳು ಕೆನರಾ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಕೊಡಿಸುವುದಾಗಿ ವೃದ್ಧರೊಬ್ಬರನ್ನು ನಂಬಿಸಿ 4.77 ಲಕ್ಷ ರು. ಹಣ ಹಾಕಿಸಿಕೊಂಡು ಬಳಿಕ ವಂಚಿಸಿದ ಆರೋಪ ಸಂಬಂಧ ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಡಿಚಿಕ್ಕನಹಳ್ಳಿ ನಿವಾಸಿ ಸತ್ಯನಾರಾಯಣ(70) ಸೈಬರ್‌ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಂಡವರು. ವಂಚನೆ ಸಂಬಂಧ ಇವರ ಪುತ್ರ ಸುರ್ಜಿತ್‌ ಕಾಮತ್‌ ನೀಡಿದ ದೂರಿನ ಮೇರೆಗೆ ಐಡಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಆಧಾರ್‌ ದುರ್ಬಳಕೆ ನೆಪ: ಮುಂಬೈ ಪೊಲೀಸ್‌ ಸೋಗಲ್ಲಿ ಉದ್ಯಮಿಯಿಂದ ₹2 ಕೋಟಿ ಸುಲಿಗೆ!

ಇತ್ತೀಚೆಗೆ ಸತ್ಯನಾರಾಯಣ ಕಾಮತ್‌ ಅವರ ಮೊಬೈಲ್‌ಗೆ ಕರೆ ಮಾಡಿದ್ದ ಅಪರಿಚಿತರು, ತಾವು ಬ್ಯಾಂಕ್‌ ಪ್ರತಿನಿಧಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ನಿಮಗೆ ಕೆನರಾ ಬ್ಯಾಂಕಿನ ಕ್ರೆಡಿಟ್ ಕಾರ್ಡ್‌ ಕೊಡಿಸುವುದಾಗಿ ಸತ್ಯನಾರಾಯಣ ಅವರನ್ನು ನಂಬಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ನೀಡಿದ ಬ್ಯಾಂಕ್‌ ಖಾತೆಗೆ ವಿವಿಧ ಹಂತಗಳಲ್ಲಿ 4.77 ಲಕ್ಷ ರು. ಹಣ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ಬಳಿಕ ದುಷ್ಕರ್ಮಿಗಳು ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ಸಂಪರ್ಕ ಕಡಿದುಕೊಂಡಿದ್ದಾರೆ. ಬಳಿಕ ಸತ್ಯನಾರಾಯಣ ಅವರಿಗೆ ತಾವು ಸೈಬರ್‌ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲ್ಕನಿ ಸ್ವಚ್ಛಗೊಳಿಸುವಾಗ 5ನೇ ಮಹಡಿಯಿಂದ ಬಿದ್ದು ಮಹಿಳೆಯ ದಾರುಣ ಸಾವು

click me!