ಸನ್ನಡತೆ ಆಧಾರದಲ್ಲಿ ಜೈಲಿನಿಂದ ಆಚೆ ಬಂದು ಕಳ್ಳತನ: ಪೊಲೀಸರ ಬಲೆಗೆ ಬಿದ್ದ ಖದೀಮ

Suvarna News   | Asianet News
Published : Jan 29, 2020, 01:30 PM IST
ಸನ್ನಡತೆ ಆಧಾರದಲ್ಲಿ ಜೈಲಿನಿಂದ ಆಚೆ ಬಂದು ಕಳ್ಳತನ: ಪೊಲೀಸರ ಬಲೆಗೆ ಬಿದ್ದ ಖದೀಮ

ಸಾರಾಂಶ

ಸನ್ನಡತೆ ಆಧಾರದಲ್ಲಿ ಜೈಲಿನಿಂದ ಆಚೆ ಬಂದು ಮತ್ತೆ ಮನೆಗಳ್ಳತನ| ಹಗಲುಕಳ್ಳನನ್ನ ಬಂಧಿಸಿದ ಜಾಲಹಳ್ಳಿ ಠಾಣಾ ಪೊಲೀಸರು| ಬಂಧಿತನಿಂದ 500 ಗ್ರಾಂ ಚಿನ್ನಾಭರಣ ವಶ| ಸನ್ನಡತೆ ಆಧಾರದಲ್ಲಿ 2 ವರ್ಷ ಮುನ್ನವೇ ಬಿಡುಗಡೆಯಾಗಿದ್ದ ಕಳ್ಳ| 

ಬೆಂಗಳೂರು(ಜ.29):ಸನ್ನಡತೆ ಆಧಾರದಲ್ಲಿ ಜೈಲಿನಿಂದ ಆಚೆ ಬಂದು ಮತ್ತೆ ಮನೆಗಳ್ಳತನ ಮಾಡುತ್ತಿದ್ದ ಹಗಲುಕಳ್ಳನನ್ನ ನಗರದ ಜಾಲಹಳ್ಳಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉದಯ್ ಅಲಿಯಾಸ್ ನೀರು ಮಜ್ಜಿಗೆ ಎಂಬಾತನೇ ಬಂಧಿತ ಖದೀಮನಾಗಿದ್ದಾನೆ. 

ಉದಯ್ ಅಲಿಯಾಸ್ ನೀರು ಮಜ್ಜಿಗೆ 17 ವರ್ಷದವನಿದ್ದಾಗ ಕಳ್ಳತನ ನೆಡೆಸಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದನು. ಸನ್ನಡತೆಯ ಆಧಾರದ ಮೇಲೆ ನಿಗದಿತ ಶಿಕ್ಷೆಗಿಂತ ಎರಡು ವರ್ಷ ಮುನ್ನವೇ ಆತನನ್ನ ಬಿಡುಗಡೆಗೊಳಿಸಲಾಗಿತ್ತು. ಆದರೆ, ಮತ್ತೆ ತನ್ನ ಹಳೆ ಚಾಳಿ ಆರಂಭಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.  

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉದಯ್ ಜೈಲಿನಲ್ಲಿ ಮಜ್ಜಿಗೆ ಹಂಚುವ ಜವಾಬ್ದಾರಿ ನಿಭಾಯಿಸುತ್ತಿದ್ದ. ಹೀಗಾಗಿ ಉದಯ್‌ನಿಗೆ ನೀರುಮಜ್ಜಿಗೆ ಎಂಬ ಹೆಸರು ಬಂದಿತ್ತು. ಸನ್ನಡತೆ ಆಧಾರದಲ್ಲಿ 2 ವರ್ಷ ಮುನ್ನವೇ ಬಿಡುಗಡೆಯಾಗಿದ್ದನು. ಆರೋಪಿಯ ವಿರುದ್ಧ ಜಾಲಹಳ್ಳಿ, ಸೋಲದೇವನಹಳ್ಳಿ ಸೇರಿದಂತೆ ಹಲವೆಡೆ ಪ್ರಕರಣಗಳು ದಾಖಲಾಗಿವೆ.

ಉದಯ್ ಬಂಧನದ ವೇಳೆ ಸರಿಸುಮಾರು 500 ಗ್ರಾಂ ಚಿನ್ನಾಭರಣಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ