ಕುಲುಷಿತ ನೀರು ಕುಡಿದು ಮೂವರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ತಾಲೂಕಿನ ದೊಡ್ಡಪೊನ್ನಾಂಡಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಗಿರಿಶ್, ಧನು ಮತ್ತು ಡಂಕಣಾಚಾರಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳು.
ಬಂಗಾರಪೇಟೆ (ನ.28): ಕುಲುಷಿತ ನೀರು ಕುಡಿದು ಮೂವರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ತಾಲೂಕಿನ ದೊಡ್ಡಪೊನ್ನಾಂಡಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಗಿರಿಶ್, ಧನು ಮತ್ತು ಡಂಕಣಾಚಾರಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳು. ಸೋಮವಾರ ಬೆಳಗ್ಗೆ ತಿಂಡಿ ತಿಂದ ಬಳಿಕ ಎಂದಿನಂತೆ ನೀರು ಕುಡಿದಾಗ ಈ ಘಟನೆ ನಡೆದಿದೆ.
ನೀರು ಕುಡಿದು ಅಸ್ವಸ್ಥರಾದ ಮಕ್ಕಳು
ಸೋಮವಾರ ವಸತಿ ಶಾಲೆಯಲ್ಲಿರುವ ಸುಮಾರು ೨೫೦ಕ್ಕೂ ಹೆಚ್ಚಿನ ಮಕ್ಕಳು ಬೆಳಗ್ಗಿನ ತಿಂಡಿ ಮುಗಿದ ಬಳಿಕ ಅಲ್ಲಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಮಕ್ಕಳು ನೀರು ಕುಡಿದರು. ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಶುದ್ಧ ನೀರಿನ ಒಂದು ಘಟಕದಲ್ಲಿ ನೀರು ಕುಡಿದ ಮೂವರು ಮಕ್ಕಳು ಮಾತ್ರ ವಾಂತಿ, ಭೇದಿ ಮಾಡಿಕೊಂಡು ಅಸ್ವಸ್ಥರಾದರು.
ಕುಡಿಯುವ ನೀರಿಗೆ ಆಧಾರವಾಗಿದ್ದ ಅರ್ಕಾವತಿ ನದಿ ಕಲುಷಿತ; ಡಿಸಿಎಂ ತವರು ಜಿಲ್ಲೆಗೇ ಇದೆಂಥ ದುಸ್ಥಿತಿ!
ಇದರಿಂದ ಗಾಬರಿಗೊಂಡ ವಸತಿ ಶಾಲೆಯ ಶಿಕ್ಷಕರು ತಕ್ಷಣವೇ ಮೂವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಮೂವರು ವಿದ್ಯಾರ್ಥಿಗಳಿಗೆ ಯಾವುದೇ ಅಪಾಯವಿಲ್ಲದೆ ಚೇತರಿಸಿಕೊಳ್ಳುತ್ತಿದ್ದಾರೆ.
ಕಲುಷಿತ ನೀರು ಸೇವಿಸಿ 20ಕ್ಕೂ ಅಧಿಕ ಮಕ್ಕಳು ಅಸ್ವಸ್ಥ: ಸಿಎಂ ಎಚ್ಚರಿಕೆ ನೀಡಿದ್ದರೂ ಮುಂದುವರಿದ ನಿರ್ಲಕ್ಷ್ಯ!
ಸುದ್ದಿ ತಿಳಿದು ವಸತಿ ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು ಘಟನೆಗೆ ಕಾರಣವನ್ನು ಶೋಧ ಮಾಡುತ್ತಿದ್ದಾರೆ. ಒಂದು ಮೂಲಕ ಪ್ರಕಾರ ಶುದ್ಧ ನೀರಿನ ಯಂತ್ರದ ಪಕ್ಕದಲ್ಲೆ ಜಿರಲೆ ಔಷಧಿ ಇಟ್ಟಿದ್ದರು ಎನ್ನಲಾಗಿದೆ. ಆ ಜಿರಲೆ ಔಷಧಿ ಆಕಸ್ಮಿಕವಾಗಿ ನೀರಿನಲ್ಲಿ ಬೆರೆತಿರಬಹುದು ಎಂದು ಶಂಕಿಸಲಾಗಿದೆ. ಕಾಮಸಮುದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.