ಕೊಪ್ಪಳ: ಬರೀ ಹೆಣ್ಣು ಹೆತ್ತಳು ಅಂದಿದ್ದಕ್ಕೆ ಆತ್ಮಹತ್ಯೆ, 4 ತಿಂಗಳ ಹಸುಗೂಸು ಸೇರಿ 3 ಮಕ್ಕಳು ತಬ್ಬಲಿ!

By Kannadaprabha News  |  First Published Oct 24, 2024, 1:44 PM IST

ತಂದೆ ಎನ್ನುವ ಕ್ರೂರಿ ಮಾಡಿದ ತಪ್ಪಿಗೆ ಜೇಲು ಸೇರಿದ್ದಾನೆ. ಈಗ ನಾಲ್ಕು ತಿಂಗಳ ಹಸುಗೂಸು ಸೇರಿ ಮೂರು ಹೆಣ್ಣು ಮಕ್ಕಳು ತಂದೆ, ತಾಯಿ ಇಲ್ಲದೆ ಅನಾಥವಾಗಿವೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯ ಪತಿ ಗಣೇಶ ಜೈಲು ಸೇರಿದ್ದು, ಇತರ ಐವರು ಆರೋಪಿಗಳು ನಾಪತ್ತೆಯಾಗಿದ್ದಾರೆ. 


ಸೋಮರಡ್ಡಿ ಅಳವಂಡಿ 

ಕೊಪ್ಪಳ(ಅ.24): ತಾಯಿ ಎದೆಗವಚಿಕೊಂಡು ಹಾಲು ಉಣ್ಣಬೇಕಾದ ನಾಲ್ಕು ತಿಂಗಳು ಹೆಣ್ಣು ಕೂಸು ಈಗ ಅನಾಥ. ಅಷ್ಟೇ ಅಲ್ಲ, ನಾಲ್ಕು, ಮೂರು ವರ್ಷದ ಇನ್ನೆರಡು ಹೆಣ್ಣು ಮಕ್ಕಳೂ ಸಹ ಅನಾಥ! ಮೂರು ಹೆಣ್ಣು ಹೆತ್ತಳು ಎನ್ನುವ ಕಾರಣಕ್ಕೆ ಪತಿ ಸೇರಿದಂತೆ ಪತಿಯ ಕುಟುಂಬಸ್ಥರು ನಿಂದಿಸಿದರು ಎಂದು ಮನನೊಂದು ಹನುಮವ್ವ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾರೆ. 

Tap to resize

Latest Videos

undefined

ಇನ್ನು ತಂದೆ ಎನ್ನುವ ಕ್ರೂರಿ ಮಾಡಿದ ತಪ್ಪಿಗೆ ಜೇಲು ಸೇರಿದ್ದಾನೆ. ಈಗ ನಾಲ್ಕು ತಿಂಗಳ ಹಸುಗೂಸು ಸೇರಿ ಮೂರು ಹೆಣ್ಣು ಮಕ್ಕಳು ತಂದೆ, ತಾಯಿ ಇಲ್ಲದೆ ಅನಾಥವಾಗಿವೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯ ಪತಿ ಗಣೇಶ ಜೈಲು ಸೇರಿದ್ದು, ಇತರ ಐವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಇವರು ನಾಪತ್ತೆಯಾದಾಗ ದೊಡ್ಡ ಆತಂಕ ಎದುರಾಗಿತ್ತು. ಮಕ್ಕಳು ಯಾರ ಬಳಿ ಇವೆ ಎನ್ನುವುದು ಸಹ ಗೊತ್ತಾಗಿರಲಿಲ್ಲ. ಹನುಮವ್ವಳ ತಂದೆ-ತಾಯಿ ನನ್ನ ಮೊಮ್ಮಕ್ಕಳು ಎಲ್ಲಿದ್ದಾರೆ. ನಮಗೆ ಅವರನ್ನು ಯಾಕೆ ತೋರಿಸುತ್ತಿಲ್ಲ ಎಂದು ಪೊಲೀಸರ ಅಲವತ್ತುಕೊಂಡಿದ್ದರು. ಅವರ ಮುಖವನ್ನಾದರೂ ನಾವು ನೋಡುತ್ತೇವೆ, ತಾಯಿ ಇಲ್ಲ ಅವರನ್ನು ಏನಾದರೂ ಮಾಡಿಯಾರು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದರು. ಕೊನೆಗೆ ವಿಚಾರಣೆ ಮಾಡುವ ವೇಳೆಯಲ್ಲಿ ಆ ಮೂವರು ಮಕ್ಕಳನ್ನು ಚಳ್ಳಾರಿ ಗ್ರಾಮದ ಜೈಲು ಸೇರಿರುವ ಗಣೇಶನ ಸಹೋದರನ ಮನೆಯಲ್ಲಿಡಲಾಗಿದೆ ಎನ್ನುವ ಮಾಹಿತಿ ಪೊಲೀಸರಿಗೆ ಗೊತ್ತಾಗಿದೆ. 

ಕುಣಿಗಲ್: ಸಾಲಗಾರರ ಕಿರುಕುಳಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆಗೆ ಯತ್ನ, ಪತಿ ಸಾವು, ಪತ್ನಿ ಗಂಭೀರ!

ತಾಯಿ ಕಳೆದುಕೊಂಡಿರುವ ಆ ನಾಲ್ಕು ತಿಂಗಳ ಮಗು ಬಿಕ್ಕಿ ಬಿಕ್ಕಿ ಅಳುತ್ತಿದೆಯಂತೆ. ಇನ್ನಿಬ್ಬರು ಮಕ್ಕಳುಸಹತಾಯಿ ಕಳೆದುಕೊಂಡು ದುಃಖದಿಂದ ಹೊರಬರಲು ಆಗದೆ, ಜೊತೆಗೆ ತಂದೆಯನ್ನು ಪೊಲೀಸರು ಜೈಲಿಗೆ ಕರೆದುಕೊಂಡು ಹೋಗಿದ್ದನ್ನು ನೋಡಿ ಖಿನ್ನತೆಗೆ ಒಳಗಾಗಿದ್ದಾರೆ. 

ಆತ್ಮಹತ್ಯೆಯಲ್ಲ ಕೊಲೆ: 

ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿರಲು ಸಾಧ್ಯವೇ ಇಲ್ಲ. ಆಕೆಯನ್ನು ಕೊಲೆ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ನೋಡಿದಾಗ ನಮಗೆ ಈ ಅನುಮಾನ ಬಂದಿದೆ. ಅವರೇ ಕೊಂದು ಸೀರೆಯಿಂದ ನೇತು ಹಾಕಿಕೊಂಡಂತೆ ಹಾಕಿದ್ದಾರೆ. ಹೀಗಾಗಿ, ತನಿಖೆ ಮಾಡಿದರೆ ಸತ್ಯ ಗೊತ್ತಾಗುತ್ತದೆ ಎನ್ನುತ್ತಾನೆ ಬಸಪ್ಪ ಕೋರಿ. ಆಕೆ ಎರಡನೇ ಹೆಣ್ಣು ಮಗು ಹೆತ್ತಾಗಲೇ ಅವರ ಕಿರಿ ಕಿರಿ ಪ್ರಾರಂಭವಾಯಿತು. ಅದಾದ ಮೇಲೆಯೂ ಅವರು ಕಿರಿಕಿರಿ ಮಾಡುತ್ತಲೇ ಇದ್ದರು. ಮೂರನೇ ಬಾರಿಯೂ ಹೆಣ್ಣು ಹೆತ್ತಿದ್ದರಿಂದ ಅವರು ಕುದ್ದುಹೋದರು. ನನ್ನ ಮಗಳನ್ನು ಹಿಂಸಿಸಲು ಪ್ರಾರಂಭಿಸಿದರು. ಕೇವಲ ಒಂದು ತಿಂಗಳ ಬಾಣಂತಿ ಇದ್ದಾಗಲೇ ಕರೆದುಕೊಂಡು ಬಂದಿದ್ದಾರೆ. ಹೆಣ್ಣು ಹೆತ್ತ ನೀನು ಬದುಕಿಯೂ ಪ್ರಯೋಜನ ಇಲ್ಲ ಎಂದು ಹೇಳಿಯೇ ಕರೆದುಕೊಂಡು ಬಂದಿದ್ದಾರೆ. ನಾನು ದುಡಿಯಲು ಉಡುಪಿಗೆ ಹೋಗಿದ್ದೆ, ಅಲ್ಲಿಂದ ಬಂದಾಗ ಮಗಳ ನೇತಾಡುತ್ತಿದ್ದ ಶವ ನೋಡಲು ಆಗಲಿಲ್ಲ. ಆ ವೇಳೆಗಾಗಲೇ ಅವರು ಯಾರೂ ಇರಲಿಲ್ಲ ಎಂದು ಘಟನೆಯನ್ನು ಬಸಪ್ಪ ವಿವರಿಸಿದರು.

ಬೆಂಗಳೂರು: ಬೆಡ್‌ಶಿಟ್‌ ವಿಚಾರದಲ್ಲಿ ಅಕ್ಕನ ಜೊತೆಗೆ ಗಲಾಟೆ, 19 ವರ್ಷದ ತಂಗಿ ಆತ್ಮಹತ್ಯೆ!

ಹೆಣ್ಣು ಹೆತ್ತಿದ್ದಾಳೆ ಎನ್ನುವ ಕಾರಣಕ್ಕಾಗಿಯೇ ಅವರು ಹಿಂಸೆ ನೀಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆ ಮೂವರು ಮಕ್ಕಳು ಆರೋಪಿ ಗಣೇಶನ ಸಹೋದರನ ಮನೆಯಲ್ಲಿದ್ದಾರೆ ಎಂದು ಕೊಪ್ಪಳ ಗ್ರಾಮೀಣ ಠಾಣೆ ಸಿಪಿಐ ಡಿ. ಸುರೇಶ ತಿಳಿಸಿದ್ದಾರೆ. 

ಸಮಗ್ರ ತನಿಖೆಯಾಗಬೇಕು. ಆಕೆಯನ್ನು ಕೊಂದವರಿಗೆ ಶಿಕ್ಷೆಯಾಗಬೇಕು. ಹೆಣ್ಣು ಹೆರುವುದೇ ತಪ್ಪಾ, ಇಂಥವರಿಗೆ ದೇವರು ಶಿಕ್ಷೆ ನೀಡಲಿ ಎಂದು ಮೃತಳ ತಂದೆ ಬಸಪ್ಪ ಕೋರಿ ಹೇಳಿದ್ದಾರೆ. 

click me!