ಸೆಕೆಂಡ್ ಹ್ಯಾಂಡ್ ಫೋನ್‌ ಬಳಸಿದ ನಟ ದರ್ಶನ್; ವಿಡಿಯೋ ಕಾಲ್ ಕೇಸಿನಲ್ಲಿ ದಾಸನಿಗೆ ಬಿಗ್ ರಿಲೀಫ್!

By Sathish Kumar KH  |  First Published Oct 24, 2024, 12:22 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದ ನಟ ದರ್ಶನ್ ಅವರು ವಿಡಿಯೋ ಕಾಲ್ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದರ್ಶನ್‌ಗೆ ಮೊಬೈಲ್ ಮತ್ತು ಸಿಮ್ ಕೊಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಅ.24): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಕೇರ್ ಆಫ್ ಪರಪ್ಪನ ಅಗ್ರಹಾರ ಆಗಿದ್ದ ನಟ ದರ್ಶನ್ ತೂಗುದೀಪ, ಜೈಲಿನಲ್ಲಿದ್ದರೂ 'ಬಾಸ್' ರೀತಿ ಐಷಾರಾಮಿ ಜೀವನ ನಡೆಸಿದ್ದಕ್ಕೆ ಹಲವು ಪುರಾವೆಗಳು ಸಿಕ್ಕಿವೆ. ಅದರಲ್ಲಿ ದರ್ಶನ್ ವಿಡಿಯೋ ಕಾಲ್ ಮೂಲಕ ಹೊರಗಿರುವ ವ್ಯಕ್ತಿಯೊಂದಿಗೆ ಮಾತನಾಡಿದ್ದರು. ಈ ಪ್ರಕರಣ ಬೇಧಿಸಿರುವ ಪೊಲೀಸರು ದರ್ಶನ್ ಬಳಸಿದ್ದು ಸೆಕೆಂಡ್ ಹ್ಯಾಂಡ್ ಒನ್‌ ಪ್ಲಸ್ ಬ್ರ್ಯಾಂಡ್ ಮೊಬೈಲ್ ಎಂಬುದನ್ನು ಪತ್ತೆ ಮಾಡಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದರ್ಶನ್‌ಗೆ ಬಿಗ್ ರಿಲೀಫ್ ಸಿಕ್ಕಿದೆ.

ನಟ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಿ ಮೂರು ತಿಂಗಳುಗಳೇ ಕಳೆದಿವೆ. ಆದರೆ, ಕೊಲೆ ಕೇಸಿನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ, ರೌಡಿ ಶೀಟರ್ ಧರ್ಮ ಸೇರಿದಂತೆ ಹಲವು ರೌಡಿಗಳು ನಟ ದರ್ಶನ್‌ಗೆ ಐಷಾರಾಮಿ ವ್ಯವಸ್ಥೆಯನ್ನು ಕಲ್ಪಿಸಿದ್ದರು. ನಟ ದರ್ಶನ್ ರೌಡಿಗಳೊಂದಿಗೆ ಜೈಲಿನ ಆವರಣದಲ್ಲಿ ಕುರ್ಚಿಯಲ್ಲಿ ಕುಳಿತು ಕೈಯಲ್ಲಿ ಸಿಗರೇಟ್ ಹಿಡಿದು ಸೇದುತ್ತಾ, ಕಾಫಿ ಮಗ್ ಹಿಡಿದುಕೊಂಡು ಕಾಫಿ ಹೀರುತ್ತಾ ಐಷಾರಾಮಿ ಜೀವನವನ್ನು ಅನುಭವಿಸುತ್ತಿದ್ದನು. ಇದರ ಜೊತೆಗೆ ದರ್ಶನ್‌ಗೆ ಮತ್ತೊಬ್ಬ ರೌಡಿಶೀಟರ್ ಧರ್ಮ ಜೈಲಿನ ಒಳಗೆ ಅಕ್ರಮವಾಗಿ ಮೊಬೈಲ್ ಇಟ್ಟುಕೊಂಡು ಅದನ್ನು ದರ್ಶನ್‌ಗೆ ಕೊಟ್ಟು ವಿಡಿಯೋ ಕಾಲ್‌ನಲ್ಲಿ ಮಾತನಾಡಿಸಿದ್ದನು. ಇದರ ಬೆನ್ನಲ್ಲಿಯೇ ದರ್ಶನ್‌ನಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ರವಾನಿಸಲಾಗಿತ್ತು.

Latest Videos

undefined

ಇದನ್ನೂ ಓದಿ: ದರ್ಶನ್‌ಗೆ ವಿಪರೀತ ಬೆನ್ನುನೋವು: ಬಳ್ಳಾರಿಯಲ್ಲಿಯೇ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಒಪ್ಪಿಗೆ!

ಆದರೆ, ಇದೀಗ ದರ್ಶನ್ ವಿಡಿಯೋ ಕಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಮ್ ಹಾಗೂ ಮೊಬೈಲ್ ಕೊಟ್ಟ ವ್ಯಕ್ತಿಯನ್ನು ಪೊಲೀಸರು ಬಂಧಿಸುವ ಮೂಲಕ ನಟ ದರ್ಶನ್‌ಗೆ ರಿಲೀಫ್ ಸಿಕ್ಕಂತಾಗಲಿದೆ. ಇನ್ನು ಜೈಲಿನಲ್ಲಿ ನಟ ದರ್ಶನ್‌ಗೆ ಮೊಬೈಲ್ ಕೊಟ್ಟು ಮಾತನಾಡುವಂತೆ ಮನವಿ ಮಾಡಿದ್ದ ರೌಡಿ ಶೀಟರ್ ಧರ್ಮನಿಗೆ ಮೊಬೈಲ್ ಹಾಗೂ  ಸಿಮ್ ಕೊಟ್ಟವರು ಬಾಣಸವಾಡಿಯ ಟೂರ್ಸ್  ಅಂಡ್ ಟ್ರಾವೆಲ್ಸ್ ಮಾಲೀಕ ಮಣಿವಣ್ಣನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ಕಂಪನಿಯ ಚಾಲಕ ಯಾದವ್ ಹೆಸರಲ್ಲಿ ಸಿಮ್ ಖರೀದಿ ಮಾಡಿದ್ದ ಮಣಿವಣ್ಣನ್, ಬಟ್ಟೆಯಲ್ಲಿ ಸಿಮ್ ಹಾಗೂ ಮೊಬೈಲ್ ಅಡಗಿಸಿ ಜೈಲಿಗೆ ಕಳುಹಿಸಿದ್ದನು.

ಪರಪ್ಪನ ಅಗ್ರಹಾರ ಜೈಲಿನ ಕೆಲ ಭ್ರಷ್ಟ ಅಧಿಕಾರಿಗಳ ಮೂಲಕ ಮೊಬೈಲ್  ಅನ್ನು ರೌಡಿಶೀಟರ್ ಧರ್ಮನಿಗೆ ಕೊಡಲಾಗಿತ್ತು. ಧರ್ಮನಿಗಾಗಿ ಒನ್ ಪ್ಲಸ್ ಮೊಬೈಲ್  ಮೆಜೆಸ್ಟಿಕ್‌ನಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿ ಮಾಡಲಾಗಿತ್ತು. ಆದರೆ, ಮೊಬೈಲ್ ಖರೀದಿಗೂ ಮುನ್ನ ಜೈಲಿನಲ್ಲಿನ ಮತ್ತೊಂದು ಮೊಬೈಲ್‌ಗೆ ಯಾವ ಫೋನ್ ಬೇಕು ಎಂದು ಫೋಟೋ ಕಳುಹಿಸಲಾಗಿತ್ತು. ಈ ಬಗ್ಗೆ ಪೊಲೀಸರು ಮೊಬೈಲ್ ಶಾಪ್ ಮಾಲೀಕನ ಮೊಬೈಲ್‌ನಿಂದಲೂ ಸಾಕ್ಷಿಗಳನ್ನ ಕಲೆ ಹಾಕಲಾಗಿತ್ತು. ಎರಡು ಮೊಬೈಲ್ ಫೋಟೋ ಕಳುಹಿಸಿ ಒಂದು ಮೊಬೈಲ್ ಸೆಲೆಕ್ಟ್ ಮಾಡುವಂತೆ ಹೇಳಿದ್ದರು. ಸದ್ಯ ಪೊಲೀಸರು ಮೊಬೈಲ್ ಅಂಗಡಿ ಮಾಲೀಕನನ್ನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಾಗಿ ಬೀಳುವ ಹಂತಕ್ಕೆ ತಲುಪಿದ ದರ್ಶನ್; ನರಕ 'ದರ್ಶನ' ಮಾಡಿಸುತ್ತಿರುವ ಬೆನ್ನುನೋವು!

ಇನ್ನು ಜೈಲಿನಲ್ಲಿರುವ ರೌಡಿ ಶೀಟರ್ ಧರ್ಮನಿಗೆ ಮೊಬೈಲ್ ಹಾಗೂ ಸಿಮ್ ಕೊಟ್ಟಿದ್ದ ಟ್ರಾವೆಲ್ಸ್ ಮಾಲೀಕ ಮಣಿವಣ್ಣನ್ ಬಂಧಿಸಲಾಗಿತ್ತು. ಆದರೆ, ಇವರು ಠಾಣ ಜಾಮೀನಿನ (Station Bail) ಮೇಲೆ ರಿಲೀಸ್ ಆಗಿದ್ದಾರೆ. ಇನ್ನು ಜೈಲಿನಿಂದ ನಟ ದರ್ಶನ್ ವಿಡಿಯೋ ಕಾಲ್ ಮಾಡಿದ ಸುದ್ದಿ ವೈರಲ್ ಆಗುತ್ತಿದ್ದಂತೆ ಜೈಲಿನಲ್ಲಿದ್ದ ರೌಡಿಶೀಟರ್ ಧರ್ಮ ಮೊಬೈಲ್ ಮತ್ತು ಸಿಮ್ ಅನ್ನ ಜಜ್ಜಿ ಟಾಯ್ಲೆಟ್ ನಲ್ಲಿ ಹಾಕಿ ಫ್ಲಶ್ ಮಾಡಿದ್ದಮು. ಈ ಬಗ್ಗೆ ಪೊಲೀಸರು ಅಂತಿಮ ವರದಿಯನ್ನ ತಯಾರು ಮಾಡುತ್ತಿದ್ದು, ಕೆಲ ದಿನಗಳಲ್ಲೆ ನ್ಯಾಯಲಯಕ್ಕೆ ವರದಿ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

click me!