
ರಾಮನಗರ(ಅ.24): ಮಫ್ತಿಯಲ್ಲಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ಪಾನಮತ್ತ ಮೂವರು ಯುವಕರು ಹಲ್ಲೆ ಮಾಡಿರುವ ಘಟನೆ ನಗರದ ರಾಯರದೊಡ್ಡಿಯಲ್ಲಿನ ಸುಪ್ರಿತ್ ವೈನ್ಸ್ ಬಳಿ ನಡೆದಿದೆ. ಐಜೂರು ಪೊಲೀಸ್ ಠಾಣೆ ಪ್ರಭಾರ ಪಿಎಸ್‌ಐ ದುರುಗಪ್ಪ ಹಲ್ಲೆಗೊಳಗಾದವರು. ರಾಯರದೊಡ್ಡಿ ವಾಸಿ ಕಿರಣ್ ಕುಮಾರ್, ಪಾದರಹಳ್ಳಿ ವಾಸಿ ಶ್ರೀಕಾಂತ ಹಾಗೂ ಚೇತನ್ ಅಲಿಯಾಸ್ ಕುಂತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣವೊಂದರ ಆರೋಪಿ ಮತ್ತು ಮಾಲು ಪತ್ತೆ ಮಾಡುವ ಸಲುವಾಗಿ ಮಫ್ತಿಯಲ್ಲಿ ಪಿಎಸ್ ಐ ದುರುಗುಪ್ಪರವರು ಪೇದೆಗಳಾದ ಚನ್ನಬಸಪ್ಪ ಮತ್ತು ಶಿವರಾಜ ಅವರೊಂದಿಗೆ ರಾಯರದೊಡ್ಡಿಗೆ ತೆರಳಿದ್ದಾರೆ. ಸುಪ್ರಿತಾ ವೈನ್ಸ್ ಬಳಿ ಪೇದೆ ಚನ್ನಬಸಪ್ಪ ಹಾಗೂ ಬಿಜಿಎಸ್ ವೃತ್ತದ ಬಳಿ ಪೇದೆ ಶಿವರಾಜ ಅವರನ್ನು ನಿಲ್ಲಿಸಿದ್ದಾರೆ. ದುರುಗುಪ್ಪ ಸುಪ್ರೀತಾ ವೈನ್ಸ್ ಮುಂಭಾಗ ಆರೋಪಿ ಮತ್ತು ಮಾಲಿನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾಗ ಪಾನಮತ್ತರಾಗಿದ್ದ ಮೂವರು ಗಲಾಟೆ ಮಾಡಿಕೊಂಡಿದ್ದಾರೆ. ದುರುಗುಪ್ಪರವರು ತಾನು ಸಬ್ ಇನ್ಸ್‌ಪೆಕ್ಟರ್ ಆಗಿದ್ದು, ಏಕೆ ಗಲಾಟೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಆ ಗುಂಪಿನಲ್ಲಿದ್ದ ಓರ್ವ ತನ್ನ ಕೈಯಲ್ಲಿದ್ದ ಬಿಯರ್ ಬಾಟಲ್‌ನಿಂದ ದುರುಗುಪ್ಪರವರ ಬಲ ಭಜುದ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಉಳಿದವರು ಹಲ್ಲೆ ಮಾಡಿದ್ದಾರೆ.
ಶಿವಮೊಗ್ಗದ ಟಿಪ್ಪು ನಗರದಲ್ಲಿ ವಿಚಿತ್ರ ಪ್ರಕರಣ; ಮೊಬೈಲ್ ಟವರ್ ಅನ್ನೇ ಕದ್ದ ಕಳ್ಳರು!
ಈ ಸಂಬಂಧ ದುರುಗುಪ್ಪ ಐಜೂರು ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಸುಪ್ರೀತಾ ವೈನ್ಸ್ ಬಳಿ ಲುಂಗಿ ಮತ್ತು ಬನಿಯನ್ ನಲ್ಲಿರುವ ಪಿಎಸ್ ಐ ದುರುಗುಪ್ಪ ಅವರನ್ನು ಪಾನಮತ್ತ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ