
ಬೆಂಗಳೂರು (ಅ.17) : ಆನ್‌ಲೈನ್‌ನಲ್ಲಿ .250ಕ್ಕೆ ಸಿಹಿ ತಿನಿಸು ಬುಕ್ ಮಾಡಿದ್ದ ಯುವತಿಯ ಖಾತೆಯಿಂದ ಸೈಬರ್ ವಂಚಕರು ಬರೋಬ್ಬರಿ .28 ಸಾವಿರ ಎಗರಿಸಿರುವ ಘಟನೆ ಜರುಗಿದೆ. ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರ ನಿವಾಸಿ ಆರ್.ಸ್ಮೃತಿ (26) ಹಣ ಕಳೆದುಕೊಂಡವರು. ಇತ್ತೀಚೆಗೆ ಕಾಂತಿ ಸ್ವೀಟ್ಸ್ ಮಳಿಗೆಯಿಂದ ಸ್ವೀಟ್ಸ್ ತರಿಸಲು ಆನ್‌ಲೈನ್‌ನಲ್ಲಿ .250 ಮೊತ್ತದ ಸಿಹಿ ತಿನಿಸು ಬುಕ್ ಮಾಡಿದ್ದರು. ಈ ವೇಳೆ ಅಪರಿಚಿತ ನಂಬರ್‌ನಿಂದ ಸ್ಮೃತಿ ಅವರ ಮೊಬೈಲ್‌ಗೆ ಕರೆ ಬಂದಿದ್ದು, ಸಿಹಿ ತಿನಿಸಿನ ಆರ್ಡರ್‌ಗಾಗಿ ಮೊದಲು ನೋಂದಣಿ ಮಾಡುವಂತೆ ಕ್ಯೂಆರ್ ಕೋಡ್ ಕಳುಹಿಸಿದ್ದಾರೆ. ಇದನ್ನು ನಂಬಿದ ಸ್ಮೃತಿ, ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಿದ್ದಾರೆ. ತಕ್ಷಣ ಅವರ ಖಾತೆಯಿಂದ .28 ಸಾವಿರ ಕಡಿತವಾಗಿದೆ. ಬಳಿಕ ಇದು ಸೈಬರ್ ಕಿಡಿಗೇಡಿಗಳ ಕೃತ್ಯ ಎಂಬುದು ಅರಿವಿಗೆ ಬಂದಿದ್ದು, ಈಶಾನ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಎಚ್ಚರ: ಏನಿದು ಫ್ಲಿಪ್‌ಕಾರ್ಟ್ ಓಪನ್-ಬಾಕ್ಸ್?
ಬಸ್‌ನಲ್ಲಿ ವ್ಯಾಪಾರಿಯ 4.90 ಲಕ್ಷ ಕದ್ದ ಕಳ್ಳರು
ಖಾಸಗಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಬ್ಯಾಗ್‌ನಲ್ಲಿ ಇರಿಸಿದ್ದ .4.90 ಲಕ್ಷವನ್ನು ದುಷ್ಕರ್ಮಿಗಳು ಕಳವು ಮಾಡಿರುವ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತುಮಕೂರು ಮೂಲದ ವ್ಯಾಪಾರಿ ಕೃಷ್ಣಮೂರ್ತಿ (39) ಹಣ ಕಳೆದುಕೊಂಡವರು. ಅ.12ರಂದು ಉಡುಪಿಯಲ್ಲಿ ಹೂವು ಮಾರಾಟದಿಂದ ಬಂದ .4.90 ಲಕ್ಷವನ್ನು ಬ್ಯಾಗಿನಲ್ಲಿ ಇರಿಸಿಕೊಂಡು ರಾತ್ರಿ 8.50ರ ಸುಮಾರಿಗೆ ‘ಸೀ ಬರ್ಡ್’ ಖಾಸಗಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಹಣದ ಬ್ಯಾಗನ್ನು ಲಗೇಜ್ ಇರಿಸುವ ಕ್ಯಾರಿಯರ್‌ನಲ್ಲಿ ಇರಿಸಿ ರಾತ್ರಿ ನಿದ್ರೆಗೆ ಜಾರಿದ್ದಾರೆ.
ಮಾರನೇ ದಿನ ಅಂದರೆ ಅ.13ರಂದು ಬೆಳಗ್ಗೆ 6.20ಕ್ಕೆ ಆ ಬಸ್ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬಂದಿದೆ. ಬಸ್ ಇಳಿದು ಬ್ಯಾಗ್ ಪರಿಶೀಲಿಸಿದಾಗ, ಹಣ ಇಲ್ಲದಿರುವುದು ಗೊತ್ತಾಗಿದೆ. ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಕಳ್ಳರು ಬ್ಯಾಗಿನಲ್ಲಿದ್ದ ಹಣವನ್ನು ಎಗರಿಸಿದ್ದಾರೆ.
ನಿಯಂತ್ರಣ ತಪ್ಪಿ ಮರಕ್ಕೆ ಬೈಕ್ ಡಿಕ್ಕಿ: ಸವಾರ ಸಾವು
ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಸವೇಶ್ವರನಗರ ನಿವಾಸಿ ಗುರುರಾಜ್ (28) ಮೃತ ಸವಾರ. ಶನಿವಾರ ತಡರಾತ್ರಿ 12.45ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಸುಮ್ಮನಹಳ್ಳಿ ಕಡೆಗೆ ತೆರಳುವಾಗ ಮಾರ್ಗ ಮಧ್ಯೆ ಲಗ್ಗೆರೆ ರಿಂಗ್ ರಸ್ತೆಯ ವಿಶಾಲ್ ಮಾರ್ಚ್ ಬಳಿ ಈ ದುರ್ಘಟನೆ ಸಂಭವಿಸಿದೆ.
ಆನ್ ಲೈನ್ ವಂಚನೆಯಾಗಿದ್ದರೆ ಡೋಂಟ್ ವರಿ; Golden hourನಲ್ಲಿ ತಪ್ಪದೆ ಹೀಗೆ ಮಾಡಿ
ಗುರುರಾಜ್ ವೇಗವಾಗಿ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ, ಮೊದಲಿಗೆ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ಬಳಿಕ ಸಮೀಪದಲ್ಲೇ ಇದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗುರುರಾಜ್ ತಲೆಗೆ ಗಂಭೀರವಾಗಿ ಗಾಯವಾಗಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ