Bengaluru: ಪೋಷಕರನ್ನು ಬಿಟ್ಟು ಬಂದ ಯುವತಿ: ಸ್ನೇಹಿತೆಯೇಬೇಕೆಂದು ಫಜೀತಿಗೆ ಸಿಲುಕಿದ ಯುವಕ

Published : Oct 16, 2022, 08:59 PM IST
Bengaluru: ಪೋಷಕರನ್ನು ಬಿಟ್ಟು ಬಂದ ಯುವತಿ: ಸ್ನೇಹಿತೆಯೇಬೇಕೆಂದು ಫಜೀತಿಗೆ ಸಿಲುಕಿದ ಯುವಕ

ಸಾರಾಂಶ

ಪೋಷಕರು ಬೇಡ ಸ್ನೇಹಿತನೇ ಬೇಕೆಂದು ಮನೆ ಬಿಟ್ಟು ಬಂದ ಯುವತಿಯನ್ನು ರಾಜ್ಯ ಮಹಿಳಾ ವಸತಿ ಗೃಹಕ್ಕೆ ಪೊಲೀಸರು ಕಳುಹಿಸಿರುವ ಘಟನೆ ನಗರದಲ್ಲಿ ನಡೆದಿದೆ. ಮದುವೆ ವಯಸಲ್ಲ, ಆದ್ರೂ ಸ್ನೇಹಿತೆ ಬೇಕೆಂದು ಯುವಕ ಫಜೀತಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾನೆ. 

ಬೆಂಗಳೂರು (ಅ.16): ಪೋಷಕರು ಬೇಡ ಸ್ನೇಹಿತನೇ ಬೇಕೆಂದು ಮನೆ ಬಿಟ್ಟು ಬಂದ ಯುವತಿಯನ್ನು ರಾಜ್ಯ ಮಹಿಳಾ ವಸತಿ ಗೃಹಕ್ಕೆ ಪೊಲೀಸರು ಕಳುಹಿಸಿರುವ ಘಟನೆ ನಗರದಲ್ಲಿ ನಡೆದಿದೆ. ಮದುವೆ ವಯಸಲ್ಲ, ಆದ್ರೂ ಸ್ನೇಹಿತೆ ಬೇಕೆಂದು ಯುವಕ ಫಜೀತಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹರ್ಷಿತ್ (19) ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು, ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಗ್ರಿ ಓದುತ್ತಿದ್ದ. 

ಈತ ಭೂಮಿಕಾ (18) (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯ ಸ್ನೇಹಿತನಾಗಿದ್ದು, ಇಬ್ಬರ ಸ್ನೇಹವನ್ನ ತಪ್ಪು ತಿಳಿದು ಯುವತಿಯ ಪೋಷಕರಿಂದ ಕಿರುಕುಳ ಆರೋಪ ಮಾಡಿದ್ದಾರೆ. ಮಗಳನ್ನ ಕಳಿಸಿಕೊಡುವಂತೆ ಯುವತಿಯ ಪೋಷಕರು ಚಾಮರಾಜಪೇಟೆ ಠಾಣಾ ಮೆಟ್ಟಿಲೇರಿದ್ದು, ಸದ್ಯ ಪೊಲೀಸರ ಮುಂದೆ ಪೋಷಕರ ಜೊತೆ ಯುವತಿಯು ತೆರಳಲು ನಿರಾಕರಿಸಿದ್ದಾಳೆ. ಹೀಗಾಗಿ ರಾಜ್ಯ ಮಹಿಳಾ ವಸತಿ ಗೃಹದ ಸುಪರ್ದಿಗೆ ಚಾಮರಾಜಪೇಟೆ ಪೊಲೀಸರು ಯುವತಿಯನ್ನು ಒಪ್ಪಿಸಿದ್ದಾರೆ. ಇನ್ನು 10-15 ಪ್ಯಾರಾಸಿಟಮಲ್‌ ಮಾತ್ರೆ ಒಟ್ಟಿಗೆ ಸೇವಿಸಿ ಹರ್ಷಿತ್ ಅಸ್ವಸ್ಥನಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಹರ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ನಟಿ, ನಿರ್ದೇಶಕಿಗೆ Uber ಕ್ಯಾಬ್‌ ಡ್ರೈವರ್‌ನಿಂದ ಅನುಚಿತ ವರ್ತನೆ..!

ಸುಂದರಿ ಮಾತು ನಂಬಿ 10 ಲಕ್ಷ ಕಳೆದುಕೊಂಡ: ವಿಡಿಯೋ ಕಾಲ್‌ ಮಾಡಿ ಬೆತ್ತಲಾಗುವಂತೆ ಹೇಳಿದ ಸುಂದರಿಯೊಬ್ಬಳ ಮಾತಿಗೆ ಮರುಳಾದ ಮಾಜಿ ಸೈನಿಕನೊಬ್ಬ ವಿಡಿಯೋ ಕಾಲ್‌ನಲ್ಲಿ ಬೆತ್ತಲಾಗಿ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದು, ಇದೀಗ ವಂಚಕರ ಜಾಲ ಪತ್ತೆಗೆ ಸೈಬರ್‌ ಠಾಣೆ ಪೊಲೀಸರಿಗೆ ದೂರು ನೀಡಿರುವ ಪ್ರಕರಣ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ. ಹಣ ಕಳೆದುಕೊಂಡ ವ್ಯಕ್ತಿ ಚಿಕ್ಕಬಳ್ಳಾಪುರ ನಗರದ ಕೆಳಗಿನ ತೋಟದ ನಿವಾಸಿ ಎಸ್‌.ಎನ್‌.ಅಶ್ವತ್ಥನಾರಾಯಣಚಾರಿ (59) ಎಂಬ ಮಾಜಿ ಯೋಧ. ಇವರು ಹಾಲಿ ಚಿಕ್ಕಬಳ್ಳಾಪುರದ ಎಸ್‌ಬಿಐ ಬ್ಯಾಂಕ್‌ನಲ್ಲಿ ಸೀನಿಯರ್‌ ಹೆಡ್‌ ಆರ್ಮರ್‌ ಗಾರ್ಡ್‌ ಕೆಲಸ ನಿರ್ವಹಿಸುತ್ತಿದ್ದಾರೆ.

ಅ.1 ರಂದು ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಬ್ಯಾಂಕ್‌ ಕರ್ತವ್ಯದಲ್ಲಿ ಇದ್ದಾಗ 9127575055 ಮೊಬೈಲ್‌ ನಂಬರ್‌ರಿಂದ ವಿಡಿಯೋ ಕಾಲ್‌ ಬಂದಿದೆ. ಆಗ ರೀಸಿವ್‌ ಮಾಡಿದಾಗ ಅಪರಿಚಿತ ಮಹಿಳೆ ಮಾತನಾಡಿದ್ದಾಳೆ. ಆಗ ಆಕೆ ತನ್ನ ಮೈಮೇಲಿನ ಬಟ್ಟೆಬಿಚ್ಚಿ ಬೆತ್ತಲಾಗಿ ಅಶ್ವತ್ಥನಾರಾಯಣಚಾರಿಗೂ ಬಟ್ಟೆಬಿಚ್ಚುವಂತೆ ಹೇಳಿದ್ದಾಳೆ. ಆಕೆಯ ಮಾತು ನಂಬಿದ ಮಾಜಿ ಸೈನಿಕ ಆಕೆ ಹೇಳಿದಂತೆ ಮಾಡಿದ್ದಾನೆ. ಸುಮಾರು 5 ನಿಮಿಷಗಳ ಕಾಲ ಆಕೆಯೊಂದಿಗೆ ಮಾತನಾಡಿದ್ದಾನೆ.

ಐಡಿ ಕಾರ್ಡ್ ಕೇಳಿದ ಭದ್ರತಾ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ

ಬಂಧಿಸುತ್ತೇವೆಂದು ಬೆದರಿಕೆ: ಅ.3 ರಂದು ಪುನಃ ಯಾರೋ ಅಪರಿಚಿತರು ನಾವು ಕೇಂದ್ರ ಅಪರಾಧ ದಳದಿಂದ ಮಾತನಾಡುತ್ತಿದ್ದೇವೆ. ನಿಮ್ಮ ಅಶ್ಲೀಲ ವಿಡಿಯೋ ಮೀಡಿಯಾದಲ್ಲಿ ಬರುತ್ತಿದೆ. ಮೊದಲು ಅದನ್ನು ಡೀಲಿಟ್‌ ಮಾಡಿಸಿ ಇಲ್ಲ ಅಂದರೆ ನಿಮ್ಮ ವಿರುದ್ದ ಎಫ್‌ಐಆರ್‌ ದಾಖಲಿಸಿ ಬಂಧಿಸುತ್ತೇವೆಂದು ಎಚ್ಚರಿಕೆ ನೀಡಿ ಮೀಡಿಯಾ ನಂಬರ್‌ ಸಹ ಅವರೇ ಕೊಟ್ಟಿದ್ದಾರೆ. ಇದನ್ನು ನಂಬಿದ ಮಾಜಿ ಸೈನಿಕ ಆತ ಕೊಟ್ಟನಂಬರ್‌ಗೆ ಪೋನ್‌ ಮಾಡಿದಾಗ ನಿಮ್ಮ ವಿಡಿಯೋ ಡೀಲಿಟ್‌ ಮಾಡಲಿಕ್ಕೆ 2,51,550 ರು ಕಳಿಸಿದರೆ ಮಾತ್ರ ಮಾಡುವುದಾಗಿ ಹೇಳಿದ್ದಾರೆ. ಮಾನ ಮರ್ಯಾದೆಗೆ ಅಂಜಿದ ಅಶ್ವತ್ಥನಾರಾಯಣಚಾರಿ ತನ್ನ ಬ್ಯಾಂಕ್‌ ಖಾತೆಗೆ 51,550 ರು. ವರ್ಗಾಯಿಸಿ ಉಳಿದ ಹಣವನ್ನು ಸ್ನೇಹಿತರ ಫೋನ್‌ ಫೇ ಮುಖಾಂತರ ಕಳಿಸಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!