
ದಾಬಸ್‌ಪೇಟೆ(ಜ.22): ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿ ಯೊಬ್ಬ ತನ್ನ ಸ್ವಂತ ಅಣ್ಣನ ಮಗನನ್ನೇ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಿ ಪರಾರಿಯಾಗಿರುವಘಟನೆತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಮಾಕನಕುಪ್ಪೆ ಸರ್ವೀಸ್ ರಸ್ತೆಯಲ್ಲಿ ನಡೆದಿದೆ.
ತ್ಯಾಮಗೊಂಡ್ಲು ಹೋಬಳಿಯ ಚನ್ನಲಿಂಗಯ್ಯನಪಾಳ್ಯ ಗ್ರಾಮದ ನಿವಾಸಿ ರವಿಕುಮಾರ್ (28) ಕೊಲೆಯಾದ ವ್ಯಕ್ತಿಯಾಗಿದ್ದು, ಇದೇ ಗ್ರಾಮದ ಸುರೇಶ್ (38) ಕೊಲೆ ಮಾಡಿದ ಆರೋಪಿ
ಯಾಗಿದ್ದಾನೆ.
ಅತ್ತಿಗೆ ಮೈದುನ ಅಕ್ರಮ ಸಂಬಂಧ; ಅಡ್ಡಿಯಾಗಿದ್ದ ಅಣ್ಣನನ್ನೇ ಮಸಣ ಸೇರಿಸಿದ ತಮ್ಮ!
ಘಟನಾ ವಿವರ:
ಕೊಲೆಯಾದ ರವಿ ತಂದೆ ಚಿಕ್ಕಣ್ಣಗೂ ಹಾಗೂ ತಮ್ಮ ಸುರೇಶ್ ಇವರ ತಂದೆಯ ಹೆಸರಿನಲ್ಲಿ 19 ಗುಂಟೆ ಜಾಗವಿದ್ದು, ಈ ಜಾಗದ ವಿಷಯದಲ್ಲಿ ಚಿಕ್ಕಣ್ಣ ಹಾಗೂ ಸುರೇಶ್ ಗೂ ಆಗಾಗ ಜಗಳವಾಗುತ್ತಿತ್ತು. ಅದೇ ರೀತಿ ಜ.17 ರಂದು ಬೆಳಗ್ಗೆ ಬೋರ್ವೆಲ್ ಮೋಟಾರ್ ವಿಚಾರದಲ್ಲಿ ಚಿಕ್ಕಣ್ಣನ ಮಗ ರವಿಕುಮಾರ್ ಹಾಗೂ ಸುರೇಶ್ ಇಬ್ಬರಿಗೂ ಜಗಳವಾಗಿದ್ದು, ನಂತರ ಕುಟುಂಬಸ್ಥರು ಜಗಳವನ್ನು ನಿಲ್ಲಿಸಿದ್ದರು.
ಹಾಸನ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಕೊಂದ ಹೆಂಡ್ತಿ!
ಅದೇ ದಿನ ಸಂಜೆ 5.30ರ ವೇಳೆ ರವಿಕುಮಾರ್ ಹಾಲು ಹಾಕಲು ಮಾಕನಕುಪ್ಪೆ ಸರ್ವೀಸ್ ರಸ್ತೆಯಲ್ಲಿ ಮುದ್ದಲಿಂಗನಹಳ್ಳಿ ಡೇರಿಗೆ ತನ್ನ ಬೈಕ್ ನಲ್ಲಿ ಬರುವಾಗ ತನ್ನ ಕಾರಿನಲ್ಲಿ ಬಂದ ಸುರೇಶ್ ಬೈಕ್ ನಲ್ಲಿ ಬರುತ್ತಿದ್ದ ರವಿಕುಮಾರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ರವಿಕುಮಾರ್‌ನನ್ನು ಸ್ಥಳೀಯರು ತಕ್ಷಣ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ರವಿಕುಮಾರ್ ಮೃತಪಟ್ಟಿದ್ದಾನೆ. ದೂರು ದಾಖಲಿಸಿಕೊಂಡ ತ್ಯಾಮಗೊಂಡ್ಲು ಪೊಲೀಸರು ಆರೋಪಿ ಸುರೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ