ಸೈಫ್​ ಮೇಲೆ ಹಲ್ಲೆ ಮಾಡಿದ ರಾಷ್ಟ್ರೀಯ ಕುಸ್ತಿಪಟು ಶರೀಫುಲ್ಲಾ, ವಿಜಯ್​ ದಾಸ್​ ಆಗಿದ್ದು ಹೇಗೆ? ರೋಚಕ ಸ್ಟೋರಿ ಇಲ್ಲಿದೆ...

Published : Jan 21, 2025, 05:43 PM ISTUpdated : Jan 22, 2025, 10:28 AM IST
ಸೈಫ್​ ಮೇಲೆ ಹಲ್ಲೆ ಮಾಡಿದ ರಾಷ್ಟ್ರೀಯ ಕುಸ್ತಿಪಟು ಶರೀಫುಲ್ಲಾ, ವಿಜಯ್​ ದಾಸ್​ ಆಗಿದ್ದು ಹೇಗೆ? ರೋಚಕ ಸ್ಟೋರಿ ಇಲ್ಲಿದೆ...

ಸಾರಾಂಶ

ಬಾಂಗ್ಲಾದೇಶಿ ಕುಸ್ತಿಪಟು ಶರೀಫುಲ್ಲಾ, ವಿಜಯ್ ದಾಸ್ ಎಂಬ ನಕಲಿ ಹೆಸರಿನಲ್ಲಿ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ದರೋಡೆ ಉದ್ದೇಶದಿಂದ ಬಂದಿದ್ದ ಆತನಿಗೆ ಸೈಫ್ ಮನೆಯೆಂದು ತಿಳಿದಿರಲಿಲ್ಲ ಎನ್ನಲಾಗಿದೆ. ನಕಲಿ ಆಧಾರ್ ಬಳಸಿ ಭಾರತದಲ್ಲಿ ನೆಲೆಸಿದ್ದ ಈತ, ಬಾಂಗ್ಲಾದೇಶಕ್ಕೆ ನಿರಂತರ ಕರೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಟ ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದ ಕುರಿತು ಹಲವಾರು ಅಪ್​ಡೇಟ್ಸ್​ಗಳು ಹೊರಬರುತ್ತಲೇ ಇವೆ. ಬಾಂಗ್ಲಾದೇಶದ ಪ್ರಜೆಯಾಗಿರುವ ಆರೋಪಿ ಮೊಹಮ್ಮದ್ ಶೆಹಜಾದ್ ಇದಾಗಲೇ ಅರೆಸ್ಟ್​ ಆಗಿದ್ದಾನೆ. ಈತನಿಗೆ ತಾನು ಬಾಲಿವುಡ್ ತಾರೆಯ ಮನೆಗೆ ಪ್ರವೇಶಿಸುತ್ತಿದ್ದೇನೆ ಎಂಬುದು ತಿಳಿದಿರಲಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಇದಾಗಲೇ ತಿಳಿಸಿದ್ದಾರೆ.  ಶಂಕಿತನ ಉದ್ದೇಶ ದರೋಡೆ, ಉದ್ದೇಶಿತ ದಾಳಿಯಾಗಿರಲಿಲ್ಲ ಎಂದಿದ್ದಾರೆ. ಅದೇನೇ ಇದ್ದರೂ ಸದ್ಯ ಆರೋಪಿ ಬಾಂಗ್ಲಾದೇಶಿ ಪ್ರಜೆ ಶರೀಫುಲ್ಲಾ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ಹಿಂದೆ ಪೊಲೀಸರು ಬಿದ್ದಿದ್ದಾರೆ. ಇಷ್ಟು ಉದ್ದ ಹೆಸರು ಇರುವ ಶರೀಫುಲ್ಲಾ, ಭಾರತಕ್ಕೆ ಬಂದು ತನ್ನ ಹೆಸರನ್ನು ವಿಜಯ ದಾಸ್​ ಎಂದು ಬದಲಿಸಿಕೊಂಡಿದ್ದ ಎನ್ನುವ ವಿಷಯ ಈಗ ಬೆಳಕಿಗೆ ಬಂದಿದೆ. 

ಶರೀಫುಲ್ಲಾ,  ಮೇಘಾಲಯದ ಡಾಕಿ ನದಿಯನ್ನು ದಾಟಿ ಭಾರತಕ್ಕೆ ಪ್ರವೇಶಿಸಿದ್ದಾನೆ. ಬಾಂಗ್ಲಾದೇಶಿ ಪ್ರಜೆಯಾಗಿರುವ ಈತ ಭಾರಕ್ಕೆ ಬಂದು ಏಳು ತಿಂಗಳಾಗಿದೆ. ಮೊದಲಿಗೆ ಬಂಗಾಳದ ನಿವಾಸಿಯ ಆಧಾರ್ ಕಾರ್ಡ್ ಬಳಸಿ ಸಿಮ್ ಪಡೆದಿದ್ದ ಈತ, ನಂತರ  ಮುಂಬೈಗೆ ಬಂದಿದ್ದ. ಕುತೂಹಲದ ವಿಷಯ ಏನೆಂದರೆ, ಈಗ ಬಾಂಗ್ಲಾದೇಶದ ರಾಷ್ಟ್ರೀಯ ಮಟ್ಟದ ಕುಸ್ತಿಪಟು ಎಂದೂ ಪೊಲೀಸರು ಹೇಳಿದ್ದಾರೆ. ಜಿಲ್ಲಾ ಮಟ್ಟದ ಮತ್ತು ರಾಷ್ಟ್ರೀಯ ಮಟ್ಟದ ಕುಸ್ತಿ ಚಾಂಪಿಯನ್‌ಶಿಪ್‌ಗಳಲ್ಲಿ ಕಡಿಮೆ ತೂಕದ ವಿಭಾಗದಲ್ಲಿ ಈತ ಸ್ಪರ್ಧಿಸಿದ್ದ ಎನ್ನಲಾಗಿದೆ. ಭಾರತದಲ್ಲಿ ನೆಲೆಸಲು ಹಿಂದೂಗಳ ಹೆಸರು ಇಟ್ಟುಕೊಳ್ಳುವುದು ಸೇಫ್​ ಎಂದು ಭಾವಿಸಿದ್ದ ಈತ, ನಕಲಿ ಸಿಮ್​, ನಕಲಿ ಅಡ್ರೆಸ್​ ಎಲ್ಲವನ್ನೂ ಬಳಸಿ ವಿಜಯ್​ ದಾಸ್​ ಎಂದು ಬದಲಾಯಿಸಿಕೊಂಡಿದ್ದ! ಇದಕ್ಕಾಗಿ ಆತ ಸ್ಥಳೀಯ ವ್ಯಕ್ತಿಯೊಬ್ಬರ ಆಧಾರ್​ ಕಾರ್ಡ್​ ಪಡೆದು, ಅದರಿಂದ ಸಿಮ್​ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮುಂಬೈ ಪೊಲೀಸರು ಇನ್ನಷ್ಟು ತನಿಖೆ ಚುರುಕುಗೊಳಿಸಿದ್ದಾರೆ. 
  
ಸೈಫ್​ ಮನೆಯೆಂದು ಗೊತ್ತಿಲ್ದೇ ನುಗ್ಗಿದ್ನಂತೆ ಕಳ್ಳ! ಪೊಲೀಸರಿಗೆ ಪರೋಟಾ ಸಾಕ್ಷಿ- ಖದೀಮ ಸಿಕ್ಕಿಬಿದ್ದದ್ದೇ ರೋಚಕ...
 
ಆರೋಪಿ ಬಳಸಿದ ಸಿಮ್ ಕಾರ್ಡ್ ಪಶ್ಚಿಮ ಬಂಗಾಳದ ಖುಕುಮೋನಿ ಜಹಾಂಗೀರ್ ಶೇಖಾ ಎಂಬವರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲಿಗೆ ಈತನಿಗೆ ಸಹಾಯ ಮಾಡಿರುವವರು ಯಾರು ಎನ್ನುವುದು ತಿಳಿದಿದ್ದು, ಆತನ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈತನ ನಕಲಿ ಹಿಂದೂ ಹೆಸರನ್ನು ತನ್ನ ಕೆಲಸ ಹುಡುಕಲು ಬಳಸಿಕೊಳ್ಳುತ್ತಿದ್ದ. ಆದರೆ  ಕೊನೆಗೆ ಯಾವುದೇ ದಾಖಲೆಗಳು ಇಲ್ಲದ ಸ್ಥಳದಲ್ಲಿ ಕೆಲಸ ಆರಿಸಿಕೊಂಡಿದ್ದ.  ಕಾರ್ಮಿಕ ಗುತ್ತಿಗೆದಾರ ಅಮಿತ್ ಪಾಂಡೆ ಅವನಿಗೆ ವರ್ಲಿ ಮತ್ತು ಥಾಣೆಯ ಪಬ್‌ಗಳು ಮತ್ತು ಹೋಟೆಲ್‌ಗಳಲ್ಲಿ ಮನೆಗೆಲಸದ ಕೆಲಸವನ್ನು ಪಡೆಯಲು ಸಹಾಯ ಮಾಡಿದ್ದರು. 

ಈತನ ಸೆಲ್‌ಫೋನ್ ಅನ್ನು ಪೊಲೀಸರು ಪರಿಶೀಲಿಸಿದಾಗ,  ಅವನು ಬಾಂಗ್ಲಾದೇಶಕ್ಕೆ ಹಲವಾರು ಕರೆಗಳನ್ನು ಮಾಡಿದ್ದಾನೆ ಮತ್ತು ನೆರೆಯ ದೇಶದಲ್ಲಿರುವ ತನ್ನ ಕುಟುಂಬಕ್ಕೆ ಕರೆ ಮಾಡಲು ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿದ್ದಾನೆ ಎಂದು ಕಂಡುಕೊಂಡಿದ್ದಾರೆ. ಸದ್ಯ ಈತನ ಹಿಂದೆ ಯಾರಿದ್ದಾರೆ, ಈತನ ನಿಜವಾದ ಉದ್ದೇಶ ಏನಿತ್ತು? ನಟನ ಮನೆ ಎಂದು ಗೊತ್ತಿಲ್ಲದೇ ಹೋಗಿದ್ದೆ ಎಂದಿದ್ದ ಈತನ ಮಾತು ಸತ್ಯವೋ ಎನ್ನುವುದನ್ನು ಪರಿಶೀಲಿಸಬೇಕಿದೆ. ಬಾಂದ್ರಾದಲ್ಲಿ ಕೋಟ್ಯಧೀಶ್ವರ ಮನೆ ಇದೆ ಎಂದು ತಿಳಿದ ಹಿನ್ನೆಲೆಯಲ್ಲಿ, ಆತ ಅಲ್ಲಿಗೆ ದರೋಡೆಗೆ ಹೋಗಿದ್ದ. ಅದು ಸೈಫ್​ ಮನೆಯೆಂದು ಗೊತ್ತಿರಲಿಲ್ಲ ಎಂದು ಹೇಳಿರುವುದು ಎಷ್ಟು ನಿಜ ಎನ್ನುವುದನ್ನು ತಿಳಿಯಬೇಕಿದೆ. 

ನಿರ್ಮಾಪಕರ ಮಾತು ಕೇಳಿ ಸೈಫ್​ಗೆ ನಿದ್ದೆ ಮಾತ್ರೆ ಕೊಡ್ತಿದ್ದ ಸೈಫ್​ ಪತ್ನಿ ಅಮೃತಾ ಸಿಂಗ್! ಕಾರಣ ರಿವೀಲ್​...

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ