Ballari: ಎಸ್‌ಟಿ ಸಮಾವೇಶಕ್ಕೆ ಆಗಮಿಸಿದ್ದ ಯುವಕನೊಬ್ಬ ಕಾಲುವೆಗೆ ಕಾಲು ಜಾರಿ ಮೃತ

By Govindaraj SFirst Published Nov 21, 2022, 4:40 AM IST
Highlights

ರಾಜ್ಯಮಟ್ಟದ ಎಸ್‌ಟಿ ಸಮಾವೇಶಕ್ಕೆ ಆಗಮಿಸಿದ್ದ ಯುವಕನೊಬ್ಬ ಸಮಾವೇಶ ಮುಗಿದ ಬಳಿಕ ಶೌಚಲಯಕ್ಕೆ ತೆರಳಿ ಕಾಲುವೆಗೆ ಮುಖ ತೊಳೆಯಲು ಹೋದ ವೇಳೆ ಗೌತಮ್‌ನಗರದ ಎಚ್‌ಎಲ್‌ಸಿ ಕಾಲುವೆಗೆ ಕಾಲು ಜಾರಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. 

ಬಳ್ಳಾರಿ (ನ.21): ರಾಜ್ಯಮಟ್ಟದ ಎಸ್‌ಟಿ ಸಮಾವೇಶಕ್ಕೆ ಆಗಮಿಸಿದ್ದ ಯುವಕನೊಬ್ಬ ಸಮಾವೇಶ ಮುಗಿದ ಬಳಿಕ ಶೌಚಲಯಕ್ಕೆ ತೆರಳಿ ಕಾಲುವೆಗೆ ಮುಖ ತೊಳೆಯಲು ಹೋದ ವೇಳೆ ಗೌತಮ್‌ನಗರದ ಎಚ್‌ಎಲ್‌ಸಿ ಕಾಲುವೆಗೆ ಕಾಲು ಜಾರಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಚೆಳ್ಳಕೇರಿ ತಾಲೂಕಿನ ಗೌರಿಪುರ ನಿವಾಸಿ ಉಮಾಪತಿ (26) ಮೃತ. ಸಮಾವೇಶದಿಂದ ಎರಡು ಕಿ.ಮೀ. ದೂರದಲ್ಲಿರುವ ಗೌತಮ್‌ನಗರ ಬಳಿ ಮುಖ ತೊಳೆಯಲು ಹೋದ ವೇಳೆ ಘಟನೆ ಸಂಭವಿಸಿದೆ. ಎಚ್‌ಎಲ್‌ಸಿ ಕಾಲುವೆ ಸಮೀಪದಲ್ಲಿ ಸಮಾವೇಶ ಆಯೋಜಿಸಿದ್ದರಿಂದ ಕಾಲುವೆ ಬಳಿ ಪೊಲೀಸ್ ಸೂಕ್ತ ಭದ್ರತೆ ಒದಗಿಸಿದ್ದರು ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿದವು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ, ವಕೀಲ ಸ್ಥಳದಲ್ಲೇ ಸಾವು: ನ್ಯಾಯಾಲಯದ ಉದ್ಯೋಗಿಯೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವಕೀಲರ ತಂಡವಿದ್ದ ಕಾರು ಚಿಕ್ಕಮಗಳೂರು ಜಿಲ್ಲೆ ಬಾಳೆ ಹೊನ್ನೂರು ಸಮೀಪ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮದ್ದೂರಿನ ವಕೀಲ ಸ್ಥಳದಲ್ಲೇ ಮೃತಪಟ್ಟು, ಮೂವರು ವಕೀಲರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಭಾನುವಾರ ಜರುಗಿದೆ.

Hassan: ಜಮೀನು ವಿಷಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಮದ್ದೂರು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಕೀಲರಾಗಿದ್ದ ಪ್ರವೀಣ್‌ (40) ಚಾಲನೆ ಮಾಡುತ್ತಿದ್ದ ಮಾರುತಿ ಸ್ವಿಟ್ಸ್‌ ಕಾರು ಬಾಳೆ ಹೊನ್ನೂರಿನ ಎನ್‌.ಪುರ ರಸ್ತೆ ಬದಿಯ ನೀರಿನ ಕಟ್ಟೆಗೆ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಪ್ರವೀಣ್‌ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪ್ರವೀಣ್‌ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಕೀಲರಾದ ಎಂ.ಎಂ.ಪ್ರಶಾಂತ್‌, ಉಮೇಶ್‌ ಹಾಗೂ ಕೆ.ಸ್ವಾಮಿ ಅವರು ನೀರಿನ ಕಟ್ಟೆಯಿಂದ ಈಜಿಕೊಂಡು ಬಂದು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಮದ್ದೂರು ಜೆಎಂಎಫ್‌ಸಿ ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ಬೆಂಚ್‌ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚೇತನ್‌ ವಿವಾಹ ದಾವಣಗೆರೆಯಲ್ಲಿ ಭಾನುವಾರ ಏರ್ಪಡಿಸಲಾಗಿತ್ತು. 

Bengaluru: ಟಿವಿ, ಫ್ರಿಡ್ಜ್, ಗೀಸರ್‌ಗಳ ರಿಪೇರಿ ಹೆಸರಿನಲ್ಲಿ ವಂಚಿಸುತ್ತಿದ್ದವನ ಬಂಧನ

ವಿವಾಹ ಪೂರ್ವವಾಗಿ ನಡೆದ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮದ್ದೂರಿನ ವಕೀಲರ ತಂಡ 4 ಕಾರುಗಳಲ್ಲಿ ದಾವಣಗೆರೆಗೆ ತೆರಳಿತ್ತು. ಆರತಕ್ಷತೆ ಸಮಾರಂಭ ಮುಗಿದ ನಂತರ ದಾವಣಗೆರೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ ನಂತರ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕಾಗಿ ವಕೀಲರ ತಂಡ ತೆರಳುತ್ತಿತ್ತು. ಈ ಪೈಕಿ ವಕೀಲ ಪ್ರವೀಣ್‌ ಚಾಲನೆ ಮಾಡುತ್ತಿದ್ದ ಕಾರು ನರಸಿಂಹರಾಜಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪ್ರವೀಣ್‌ ಮೃತಪಟ್ಟಿದ್ದಾರೆ. ಈ ಸಂಬಂಧ ಎನ್‌.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಕೀಲ ಪ್ರವೀಣ್‌ ನಿಧನಕ್ಕೆ ವಕೀಲರ ಸಂಘದ ಅಧ್ಯಕ್ಷ ಎಂ.ಎನ್‌.ಶಿವಣ್ಣ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

click me!