ರೌಡಿ ಸತೀಶ್ ನಾಯಕ್ ಇಟ್ಟ ಹಾವಳಿಗೆ ಪೊಲೀಸರೇ ಶಾಕ್, ರೌಡಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಸ್ಪಿ ಹೆಚ್.ಡಿ. ಆನಂದಕುಮಾರ್
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ನ.20): ವಿಜಯಪುರ ಜಿಲ್ಲೆಯಲ್ಲಿ ಭೀಮಾತೀರದ ಹಂತಕರ ಹಾವಳಿಗೆ ಬ್ರೇಕ್ ಬಿತ್ತು ಎನ್ನುವಾಗಲೇ ನಗರ ಭಾಗದಲ್ಲಿ ರೌಡಿಗಳು ಬಾಲ ಬಿಚ್ಚುತ್ತಿದ್ದಾರೆ. ಅದ್ರಲ್ಲೂ ಹತ್ತಾರು ಕ್ರಿಮಿನಲ್ ಕೇಸ್‌ಗಳನ್ನ ಹೊಂದಿರುವ ಖತರ್ನಾಕ್ ರೌಡಿ ಸತೀಶ್.ಡಿ. ನಾಯಕ್ ಒಂದು ಹೆಜ್ಜೆ ಮುಂದೆ ಹೋಗಿ IPS ಅಧಿಕಾರಿಗಳ ಧ್ವನಿ ಹಿನ್ನೆಲೆಯಾಗಿ ಬಳಕೆ ಮಾಡಿ ರೀಲ್ಸ್ ಮಾಡುವ ಮೂಲಕ ಪೊಲೀಸ್ ಇಲಾಖೆಯನ್ನೇ ಅವಮಾನಿಸುವ ಕೆಲಸ ಮಾಡಿದ್ದಾನೆ. ರೀಲ್ಸ್ ನೋಡಿದ ಜನರು ಕೂಡ ಐಪಿಎಸ್ ಅಧಿಕಾರಿ ನೀಡಿದ ಹೇಳಿಕೆಯನ್ನೇ ತನ್ನ ರೀಲ್ಸ್‌ಗೆ ಬಳಕೆ ಮಾಡಿದ್ದು ಕಂಡು ಬೆಚ್ಚಿಬಿದ್ದಿದ್ದಾರೆ.
IPS ಅಧಿಕಾರಿ ಧ್ವನಿ ಬಳಸಿ ರೌಡಿ ಶೀಟರ್ ರೀಲ್ಸ್, ಆತಂಕದಲ್ಲಿ ಜನತೆ..!
IPS ಅಧಿಕಾರಿ ಧ್ವನಿ ಬಳಸಿ ರೌಡಿ ಶೀಟರ್ ರೀಲ್ಸ್ ಮಾಡಿದ ಘಟನೆ ನಡೆದಿದೆ. IPS ಅಧಿಕಾರಿ ರೌಡಿ ಶೀಟರ್ ಬಗ್ಗೆ ಮಾಧ್ಯಮ ಗೋಷ್ಠಿಯಲ್ಲಿ ನೀಡಿದ್ದ ಹೇಳಿಕೆಯನ್ನೆ ಬಳಸಿ ರೌಡಿ ರೀಲ್ಸ್ ಮಾಡಿದ್ದಾನೆ. ಈ ರೀಲ್ಸ್ ನೋಡಿದ ಜಿಲ್ಲೆಯ ಜನರು ಭಯಭೀತರಾಗಿದ್ದಾರೆ. ರೌಡಿ ಶೀಟರ್ ರೌಡಿ ಸತೀಶ್ ನಾಯಕ್ ಈ ರೀಲ್ಸ್ ಮಾಡಿದ್ದಾನೆ.
Vijayapura: ನಾಗರಬೆಟ್ಟ ಎಕ್ಸ್‌ಪರ್ಟ್ ಶಾಲೆಯಲ್ಲಿ ಅನುಮಾನಾಸ್ಪದವಾಗಿ ವಿದ್ಯಾರ್ಥಿಯ ಸಾವು
ಐಪಿಎಸ್ ಅಧಿಕಾರಿ ಅಗರವಾಲ್ ಧ್ವನಿ ಬಳಸಿ ರೀಲ್ಸ್..!
2020ರಲ್ಲಿ ವಿಜಯಪುರ ಎಸ್ಪಿಯಾಗಿದ್ದ ಅನುಪಮ ಅಗರವಾಲ್ ಸತೀಶ್ ನಾಯಕ್‌ನ ಕ್ರಿಮಿನಲ್ ಮೊಕದ್ದಮೆ, ಕೃತ್ಯಗಳನ್ನ ಮಾಧ್ಯಮ ಗೋಷ್ಟಿಯಲ್ಲಿ ಹೇಳಿದ್ದರು. ಆತನ ಮೇಲೆ ಗೂಂಡಾ ಆಕ್ಟ್ ಹಾಕಿ, ಗಡಿಪಾರು ಮಾಡುವ ಬಗ್ಗೆ ಹೇಳಿದ್ದರು. ಅದನ್ನೆ ಹಿನ್ನಲೆ ಧ್ವನಿಯಾಗಿಸಿ ಸತೀಶ್ ನಾಯಕ್ ರೀಲ್ಸ್ ಮಾಡಿದ್ದಾನೆ.
ಐಪಿಎಸ್ ಅಧಿಕಾರಿಗಳ ಧ್ವನಿಯನ್ನು ಬಿಡದ ರೌಡಿಗಳು..!
ರೌಡಿಗಳು ತಲವಾರ್, ಚೂರಿ, ಸ್ಟೈಲ್ ಆಗಿ ಪೋಟೊ, ವಿಡಿಯೋಗಳನ್ನ ಶೂಟ್ ಮಾಡಿಸಿ ಅವುಗಳನ್ನ ಸೋಶಿಯಲ್ ಮಿಡಿಯಾಗಳಿಗೆ ಹರಿಬಿಡ್ತಿರ್ತಾರೆ. ಆದ್ರೆ ಈಗ ಹೊಸ್ ಟ್ರೆಂಡ್ ಅನ್ನೋ ರೀತಿಯಲ್ಲಿ IPS ಅಧಿಕಾರಿಗಳು, ಪೊಲೀಸರು ಕ್ರಿಮಿನಲ್ ಕೆಲಸಗಳ ಬಗ್ಗೆ ಹೇಳಿಕೆ ನೀಡಿದ್ದ ಹೇಳಿಕೆಗಳನ್ನ ತಮ್ಮ ಪ್ರತಿಷ್ಠೆ ಎನ್ನುವಂತೆ ರೀಲ್ಸ್ ಮಾಡ್ತಿದ್ದಾರೆ. ಈ ಮೂಲಕ ರೌಡಿ ಸತೀಶ್ ಐಪಿಎಸ್ ಅಧಿಕಾರಿಗಳಿಗೆ ಅವಮಾನಿಸಿದ್ದಾನೆ. ಸತೀಶ್ ಡಿ ನಾಯಕ್ ಇಟ್ಟ ಹಾವಳಿಗೆ ಆಗಿನ ಎಸ್ಪಿ ಅನುಪಮ ಅಗರವಾಲ್ ಗೂಂಡಾ ಆಕ್ಟ್‌ನಲ್ಲಿ ಹಾಕಿದ್ದರು.
ಡಿ.12 ರೊಳಗಾಗಿ ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲೇಬೇಕು: ಯತ್ನಾಳ
ರೌಡಿ ಸತೀಶ್ ನಾಯಕ್ ಮೇಲೆ ಹತ್ತಾರು ಕೇಸ್..!
ಕೊಲೆ ಯತ್ನ, ಸುಲಿಗೆ, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, ಕಿಡ್ನಾಫ್, ಸುಲಿಗೆ, ದರೋಡೆ ಸೇರಿದಂತೆ ಅನೇಕ ಕೇಸ್ ಗಳು ಸತೀಶ್ ಮೇಲಿವೆ. ಕಳೆದ ಚುನಾವಣೆ ಸಂದರ್ಭದಲ್ಲಿ ಸತೀಶ್ ಡಿ ನಾಯಕ್ ಮೇಲೆ ಗೂಂಡಾ ಆಕ್ಟ್ ಹಾಕಲಾಗಿತ್ತು. ಆದ್ರು ಇಷ್ಟು ಮಟ್ಟಿಗೆ ಸತೀಶ್ ಐಪಿಎಸ್ ಅಧಿಕಾರಿಗಳನ್ನೆ ಅನುಕಿಸುವಂತೆ ರೀಲ್ಸ್ ಮಾಡಿದ್ದಾನೆ..
ರೌಡಿ ವಿರುದ್ಧ ಎಸ್ಪಿ ಆನಂದಕುಮಾರ್ ಕೆಂಡಾಮಂಡಲ..!
ಸತೀಶ್ ಈ ರೀಲ್ಸ್‌ಗೆ ಈಗಿನ ವಿಜಯಪುರ ಎಸ್ಪಿ ಆನಂದಕುಮಾರ ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕಿ ಭಯ ಪಡೆಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಇಂಥಹ ಕ್ರಿಮಿನಲ್ಸ್ ಭಯ ಪಡೆಸಿದರೆ ಸ್ಥಳೀಯ ಠಾಣೆಗೆ ದೂರು ನೀಡಿ ಅಂತಾ ಎಸ್ಪಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.