ಮುಂಡರಗಿ: ನಕಲಿ ರಸೀದಿ ಸೃಷ್ಟಿಸಿ 20 ಟನ್‌ ಅಕ್ರಮ ಅಕ್ಕಿ ಸಾಗಾಟ!

By Kannadaprabha NewsFirst Published Jun 9, 2023, 12:50 PM IST
Highlights

ನಕಲಿ ರಸೀದಿ ಬಿಲ್‌ ಸೃಷ್ಟಿಸಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಆರೋಪದಲ್ಲಿ 4.59 ಲಕ್ಷ ಮೌಲ್ಯದ 19.95 ಟನ್‌ ತೂಕದ 399 ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮುಂಡರಗಿ (ಜೂ.9) : ನಕಲಿ ರಸೀದಿ ಬಿಲ್‌ ಸೃಷ್ಟಿಸಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಆರೋಪದಲ್ಲಿ 4.59 ಲಕ್ಷ ಮೌಲ್ಯದ 19.95 ಟನ್‌ ತೂಕದ 399 ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಪಟ್ಟಣದ ಕೆಎಫ್‌ಸಿಎಸ್ಸಿ ಗೋದಾಮು ಬಳಿ ಆಹಾರ ಇಲಾಖೆ ತಂಡ ಖಚಿತ ಮಾಹಿತಿ ಮೇರೆಗೆ ಜೂ.5ರಂದು ವಶಪಡಿಸಿಕೊಂಡಿದೆ.

ಇಂದು 3 ಗ್ಯಾರಂಟಿ: ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಘೋಷಣೆ ಸಂಭವ

ಮುಂಡರಗಿ ಕೆಎಫ್‌ಸಿಎಸ್ಸಿ ಗೋದಾಮಿಗೆ ಅಕ್ರಮ ಅಕ್ಕಿ ತರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಹೂವಿನಹಡಗಲಿ ತಾಲೂಕಿನ ಕೊಂಬಳಿ ಗ್ರಾಮದ ಲಾರಿ ಚಾಲಕ ಹೊನ್ನಪ್ಪ ಮಾನ್ಯಮಸಲವಾಡ ಲಾರಿಯನ್ನು ಗೋದಾಮು ಬಳಿ ನಿಲ್ಲಿಸಿದ್ದಾನೆ. ಆಹಾರ ನಿರೀಕ್ಷಕ ಜೆ.ಎನ್‌. ಅಮಾತಿ ಸ್ಥಳಕ್ಕೆ ಬಂದು ರಸೀದಿ ಪರಿಶೀಲಿಸಿ ನಂತರ ಜಿಲ್ಲಾ ಆಹಾರ ಅಧಿಕಾರಿ ಗಂಗಪ್ಪಗೆ ಮಾಹಿತಿ ರವಾನಿಸಿದ್ದಾರೆ. ನಂತರ ಅವರು ರಸೀದಿ ಅಸಲಿಯೋ ನಕಲಿಯೋ ಎಂಬುದನ್ನು ಪರಿಶೀಲಿಸಲು ಬೆಂಗಳೂರಿನ ಕಮೀಷನರ್‌ ಕಚೇರಿಗೆ ಕಳಿಸಿದಾಗ ಇದು ನಕಲಿ ರಸೀದಿ ಎಂಬುದು ಬಹಿರಂಗಗೊಂಡಿದೆ. ಬಳಿಕ ಮುಂಡರಗಿ ಆಹಾರ ನಿರೀಕ್ಷಕರು ಲಾರಿ ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡಿತರ ಆಹಾರ ಬಿಡುಗಡೆ

ಯಾದಗಿರಿ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆವತಿಯಿಂದ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಪಡಿತರ ಆಹಾರ ವಿತರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಅವರು ತಿಳಿಸಿದ್ದಾರೆ. ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ 2023ರ ಜೂನ್‌ ಮಾಹೆಯಲ್ಲಿ ಯಾದಗಿರಿ ಜಿಲ್ಲೆಯ ಎಎವೈ 29,380 ಪಡಿತರ ಚೀಟಿಗಳಿದ್ದು, ಪ್ರತಿ ಪಡಿತರ ಚೀಟಿಗಳಿಗೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ಜೋಳ ಹಾಗೂ ಬಿಪಿಎಲ್‌ 8,85,305 ಪಡಿತರ ಸದಸ್ಯರಿದ್ದು, ಪ್ರತಿ ಪಡಿತರ ಸದಸ್ಯರಿಗೆ 3 ಕೆಜಿ ಎನ್‌ಎಫ್‌ಎಸ್‌ಎ ಅಕ್ಕಿ ಹಾಗೂ 1 ಕೆ.ಜಿ ಓಎಂಎಸ್‌ಎಸ್‌(ಡಿ) ಅಕ್ಕಿ ಮತ್ತು 2 ಕೆಜಿ ಜೋಳ ಉಚಿತವಾಗಿ ವಿತರಿಸಲಾಗುವುದು.

ಅನ್ನಭಾಗ್ಯ ಯೋಜನೆಯ 450 ಅಕ್ಕಿ ಮೂಟೆ ತುಂಬಿದ್ದ ಲಾರಿಯೇ ನಾಪತ್ತೆ!

2023ರ ಜೂನ್‌ ಮಾಹೆಯಲ್ಲಿ ಪ್ರತಿ ಪಡಿತರ ಸದಸ್ಯರಿಗೆ 3 ಕೆ.ಜಿ ಎನ್‌ಎಫ್‌ಎಸ್‌ಎ ಅಕ್ಕಿ ಹಾಗೂ 1 ಕೆಜಿ ಓಎಂಎಸ್‌ಎಸ್‌(ಡಿ) ಅಕ್ಕಿ ಮತ್ತು 2 ಕೆಜಿ ಜೋಳ ಸೇರಿ ಒಟ್ಟಾರೆ 4ಕೆಜಿ ಅಕ್ಕಿ ಹಾಗೂ 2ಕೆಜಿ ಜೋಳ 2023ರ ಜೂನ್‌ ಮಾಹೆಗೆ ಉಚಿತವಾಗಿ ವಿತರಿಸಲಾಗುವುದು. ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಪಡಿತರ ಪಡೆದುಕೊಳ್ಳಲು ಯಾವುದೇ ದೂರು ಇದ್ದಲ್ಲಿ ತಾಲೂಕು ಮಟ್ಟದಲ್ಲಿ ಆಯಾ ತಾಲೂಕಿನ ತಹಸೀಲ್ದಾರರಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ಉಪ ನಿರ್ದೇಶಕರ ಕಚೇರಿಗೆ ದೂ: 08473 253707, ಸಹಾಯವಾಣಿ ಸಂಖ್ಯೆ 1967ಗೆ ದೂರನ್ನು ದಾಖಲಿಸುವಂತೆ ತಿಳಿಸಿದೆ. ಪಡಿತರ ಚೀಟಿದಾರರಿಗೆ ಕಡ್ಡಾಯವಾಗಿ ಮಾಸ್‌್ಕ ಧರಿಸಿ ಸಾಮಾಜಿಕ ಅಂತರ ಕಾಯ್ದಕೊಂಡು ನ್ಯಾಯಬೆಲೆ ಅಂಗಡಿಯಿಂದ ಆಹಾರಧಾನ್ಯವನ್ನು ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!