ದೆಹಲಿಯ ಲುಟ್ಯೆನ್ಸ್ ಐಷಾರಾಮಿ ಹೋಟೆಲ್‌ನಲ್ಲಿ ಕುಟುಂಬವೊಂದು ಉಳಿದುಕೊಂಡು 3.65 ಲಕ್ಷ ರು. ಬಿಲ್ ಕೊಡಲು ಹಿಂದೇಟು ಹಾಕಿತ್ತು. ಈಗ ಆ ಕುಟುಂಬ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದೆ.
ನವದೆಹಲಿ (ಜೂನ್ 9, 2023): ಈಗ ರಾಜ್ಯದಲ್ಲಿ ಎಲ್ಲಿ ನೋಡಿದ್ರೂ ಉಚಿತ ಗ್ಯಾರಂಟಿಯದ್ದೇ ಸದ್ದು. ಉಚಿತ ಪಡೆಯಲು ಏನೇನಲ್ಲ ಮಾಡ್ಬೇಕು.. ಏನೇನೆಲ್ಲ ಕಂಡೀಷನ್ಸ್ ಹಾಕವ್ರೆ ಅಂತ ಜನ ಚರ್ಚಿಸುತ್ತಿದ್ದಾರೆ. ಹಾಗೆ, ಅರ್ಜಿ ಸಲ್ಲಿಸೋಕೆ ಸೂಕ್ತ ದಾಖಲಾತಿಗಳನ್ನು ಹುಡುಕ್ತವ್ರೆ. ಆದರೆ, ಇಲ್ಲೊಬ್ಬ ಆಸಾಮಿ ರಾಷ್ಟ್ರ ರಾಜಧಾನಿಯ 5 ಸ್ಟಾರ್ ಹೋಟೆಲ್‌ನಲ್ಲಿ ಉಳ್ಕೊಂಡು ದುಡ್ಡು ಕೊಡಲ್ಲ ಅಂತಾವ್ನೆ. ಇವರಿಗೆ ಕೊನೆಗೂ ಫ್ರೀ ಲಾಡ್ಜಿಂಗ್ ವ್ಯವಸ್ಥೆ ಸಿಕ್ಕಿದೆ. ಆದ್ರೆ, ಅದು ಹೋಟೆಲ್‌ನಲ್ಲಿ.
ಹೌದು, ದೆಹಲಿಯ ಲುಟ್ಯೆನ್ಸ್ ಐಷಾರಾಮಿ ಹೋಟೆಲ್‌ನಲ್ಲಿ ಕುಟುಂಬವೊಂದು ಉಳಿದುಕೊಂಡು 3.65 ಲಕ್ಷ ರು. ಬಿಲ್ ಕೊಡಲು ಹಿಂದೇಟು ಹಾಕಿತ್ತು. ಈಗ ಆ ಕುಟುಂಬ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದೆ. ಈ ಕುಟುಂಬದ ವ್ಯಕ್ತಿ 6.50 ಲಕ್ಷ ಹಣ ಪಾವತಿ ಮಾಡಿದ ನಕಲಿ ಚಿತ್ರ ತೋರಿಸಿ ಹೋಟೆಲ್‌ನವರಿಗೆ ಯಾಮಾರಿಸಿದ್ದ.
ಇದನ್ನು ಓದಿ: Viral Video : ತಾಜ್ ಹೋಟೆಲ್‌ನಲ್ಲಿ ಚಿಲ್ಲರೆ ನೀಡಿ ಬಿಲ್ ಪಾವತಿಸಿದ ಮುಂಬೈ ವ್ಯಕ್ತಿ!
ಆ ಸಮಯದಲ್ಲಿ ಆತ ಹಾಗೂ ಆತನ ಕುಟಂಬ ಅಲ್ಲಿನ ಆಹಾರ, ಬಾರ್ ಎಲ್ಲವನ್ನು ತಿಂದು ತೇಗಿದ್ದರು. ಹಣ ಕೇಳಲು ಬಂದ ಸಿಬ್ಬಂದಿಗೆ ಬಾಯ್ತುಂಬ ಬೈದು ಹೋಟೆಲ್ ವಸ್ತುಗಳನ್ನು ಹಾನಿ ಮಾಡಿದ್ದರು. ಹೀಗಾಗಿ ಹೋಟೆಲ್‌ನವರು ಪೊಲೀಸರಿಗೆ ‘ಇಲ್ಲಿ ಸ್ವಲ್ಪ ನೋಡಿ ಸ್ವಾಮಿ’ ಎಂದು ಹೇಳಿದ್ದರು. ಅದಕ್ಕೆ ಪೊಲೀಸರು ಬಂದು ಕುಟುಂಬವನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಮುದ್ದೆ ಊಟ ಹಾಕ್ತಿದ್ದಾರೆ.
ಘಟನೆಯ ವಿವರ..
ಲುಟ್ಯೆನ್ಸ್‌ನ ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ಕುಟುಂಬದೊಂದಿಗೆ ತಂಗಿದ್ದ ನಂತರ 3.65 ಲಕ್ಷ ರೂಪಾಯಿ ಮೊತ್ತದ ಬಿಲ್ ಪಾವತಿಸಲು ನಿರಾಕರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ.. 1.3 ಕೋಟಿ ರೂ. ಬಿಲ್ ನೀಡಿದ ಅಬು ಧಾಬಿ ರೆಸ್ಟೋರೆಂಟ್: ನೆಟ್ಟಿಗರ ಆಕ್ರೋಶ..!
ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಹೋಟೆಲ್‌ನ ಸಹಾಯಕ ವ್ಯವಸ್ಥಾಪಕರು ಅತಿಥಿ ಮತ್ತು ಅವರ ಕುಟುಂಬ ಹೋಟೆಲ್‌ನಲ್ಲಿ ಎರಡು ಸಿಂಗಲ್ ಆಕ್ಯುಪೆನ್ಸಿ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ. ಅಲ್ಲದೆ, ಮೇ 31 ರೊಳಗೆ ಹಣ ಪಾವತಿ ಮಾಡಲಾಗುವುದು ಎಂದು ಸಿಬ್ಬಂದಿಗೆ ಭರವಸೆ ನೀಡಿದರು. ಅವರು ಮೇ 28 ರಂದು ಚೆಕ್‌ಇನ್ ಆಗಿದ್ರು ಎಂದು ತಿಳಿದುಬಂದಿದ್ದು, ಆದ್ರೆ ಹೇಳಿದ ದಿನಾಂಕದಂದು ಬಿಲ್ ಪಾವತಿಯನ್ನು ಪೂರೈಸಲು ವಿಫಲರಾಗಿದ್ದಾರೆ.
ಅಲ್ಲದೆ, ಆರೋಪಿಯು ವಂಚನೆಯ UTR (ಯೂನಿಕ್ ಟ್ರಾನ್ಸಾಕ್ಷನ್ ರೆಫರೆನ್ಸ್) ಸಂಖ್ಯೆಗಳನ್ನು ಪ್ರಸ್ತುತಪಡಿಸುವ ಮೂಲಕ ಹೋಟೆಲ್‌ನ ಕ್ರೆಡಿಟ್ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಾನು ಈಗಾಗಲೇ ಹೋಟೆಲ್‌ನ ಖಾತೆಗೆ 6,50,000 ರೂ.ಗಳನ್ನು ವರ್ಗಾಯಿಸಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ.
ಇದನ್ನೂ ಓದಿ: 23 ಲಕ್ಷ ಬಿಲ್ ಕೊಡದೆ ದೆಹಲಿ ಲೀಲಾ ಪ್ಯಾಲೇಸ್‌ನಿಂದ ಪರಾರಿಯಾದವ ಮಂಗಳೂರಿನಲ್ಲಿ ಅಂದರ್
ಆದರೆ ಪರಿಶೀಲಿಸಿದಾಗ, ಅಂತಹ ಯಾವುದೇ ವ್ಯವಹಾರವನ್ನು ಅವರು ಮಾಡಿರುವುದು ಕಂಡುಬಂದಿಲ್ಲ ಮತ್ತು ಅದರ ಬಗ್ಗೆ ಅವರನ್ನು ಕೇಳಿದಾಗ, ಜೂನ್ 3 ರಂದು ಪಾವತಿ ಮಾಡಲಾಗುವುದು ಎಂದು ಮತ್ತೆ ಭರವಸೆ ನೀಡಿದರು. ಈ ಅವಧಿಯಲ್ಲಿ, ಅವರು ಊಟ ಮತ್ತು ಬಾರ್ ಸೇರಿದಂತೆ ಎಲ್ಲಾ ಸೇವೆಗಳನ್ನು ಆನಂದಿಸಿದರು. ಆದರೆ ಮತ್ತೊಮ್ಮೆ ಖಚಿತವಾದ ದಿನಾಂಕದಂದು ಅವರು ಪಾವತಿ ಮಾಡಲು ವಿಫಲರಾಗಿದ್ದಾರೆ ಎಂದು ಎಫ್ಐಆರ್ ಹೇಳಿದೆ.
ಅಲ್ಲದೆ, ಈ ಬಗ್ಗೆ ವಿಚಾರಿಸಿದಾಗ ಪೊಲೀಸರಿಗೆ ಕರೆ ಮಾಡಿ ನಿಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದಾಗಿ ಹೋಟೆಲ್ ಸಿಬ್ಬಂದಿಗೆ ಬೆದರಿಕೆ ಹಾಕಿದರು. ಹಾಗೆ, ಹಣ ಪಾವತಿಸಲು ನಿರಾಕರಿಸಿದರು ಮತ್ತು ಹೋಟೆಲ್ ಸಿಬ್ಬಂದಿಯನ್ನು ನಿಂದಿಸಿದ್ದಾರೆ ಹಾಗೂ ಹೋಟೆಲ್ ಆಸ್ತಿಯನ್ನು ಹಾನಿ ಮಾಡಿದ್ದಾರೆ ಎಂದೂ ಎಫ್‌ಐಆರ್ ಹೇಳುತ್ತದೆ. ಆ ವ್ಯಕ್ತಿ 3,65,965 ರೂಪಾಯಿಗಳ ಬಿಲ್ ಅನ್ನು ಕ್ಲಿಯರ್ ಮಾಡಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 19 ಲಕ್ಷದ ಬಿಲ್‌ಗೆ 58 ಲಕ್ಷದ ಕಾರು ಹರಾಜು ಮಾಡಲು ಸಜ್ಜಾದ ಹೋಟೆಲ್!
ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಯನ್ನು ಪ್ರೇರೇಪಿಸುವುದು) ಅಡಿಯಲ್ಲಿ ಮಂಗಳವಾರ ಅತಿಥಿ ಮತ್ತು ಅವರ ಕುಟುಂಬದ ವಿರುದ್ಧ ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸದೆ ಹೋಟೆಲ್ ಸೇವೆಗಳನ್ನು ತಂಗಿದ್ದಕ್ಕಾಗಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. , ಹಾಗೆ, ತನಿಖೆ ನಡೆಯುತ್ತದೆ ಎಂದೂ ಹೇಳಿದ್ದಾರೆ.