ಮಾಜಿ ವಿಧಾನಪರಿಷತ್ ಸದಸ್ಯೆ ಹಾಗೂ ಚಿಕ್ಕಮಗಳೂರು ಕಾಂಗ್ರೆಸ್ ಮುಖಂಡರಾದ ಗಾಯತ್ರಿ ಶಾಂತೇಗೌಡ ಅವರ ಚಿಕ್ಕಮಗಳೂರು ಮನೆ ಮೇಲೆ ಐಟಿ ದಾಳಿ ನಡೆದಿದೆ. ಚಿಕ್ಕಮಗಳೂರು ನಿವಾಸ ಸೇರಿ ಹಲವೆಡೆ ಕಡೆ ದಾಳಿ ನಡೆದ ಬಗ್ಗೆ ಮಾಹಿತಿ ವ್ಯಕ್ತವಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ.17): ಮಾಜಿ ವಿಧಾನಪರಿಷತ್ ಸದಸ್ಯೆ ಹಾಗೂ ಚಿಕ್ಕಮಗಳೂರು ಕಾಂಗ್ರೆಸ್ ಮುಖಂಡರಾದ ಗಾಯತ್ರಿ ಶಾಂತೇಗೌಡ ಅವರ ಚಿಕ್ಕಮಗಳೂರು ಮನೆ ಮೇಲೆ ಐಟಿ ದಾಳಿ ನಡೆದಿದೆ. ಚಿಕ್ಕಮಗಳೂರು ನಿವಾಸ ಸೇರಿ ಹಲವೆಡೆ ಕಡೆ ದಾಳಿ ನಡೆದ ಬಗ್ಗೆ ಮಾಹಿತಿ ವ್ಯಕ್ತವಾಗಿದೆ. ಚಿಕ್ಕಮಗಳೂರು ನಗರದ ಹೂವಿನ ಮಾರ್ಕೆಟ್ ರಸ್ತೆಯಲ್ಲಿನ ಅವರ ನಿವಾಸ, ಬೇಲೂರಿನಲ್ಲಿರುವ ಮಾಜಿ ಗಾಯತ್ರಿ ಶಾಂತೇಗೌಡ ಅವರ ಅಳಿಯನ ಮನೆ ಮೇಲೂ ಸಹ ದಾಳಿ ನಡೆದಿದೆ.
ಒಟ್ಟು 10ಕ್ಕೂ ಹೆಚ್ಚು ವಾಹನದಲ್ಲಿ ಅಗಮಿಸಿರುವ ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಿತ್ರಿ ಶಾಂತೇಗೌಡ ಅವರು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದರು, ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಾಣೇಶ್ ವಿರುದ್ಧ ಕೆಲವೇ ಮತಗಳ ಅಂತರದಲ್ಲಿ ಸೋಲನ್ನನುಭವಿಸಿ, ನಂತರ ಫಲಿತಾಂಶದ ಮರುಪರಿಶೀಲನೆಗಾಗಿ ಕೋರ್ಟಿನ ಮೊರೆ ಹೋಗಿದ್ದರು.ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಅಪ್ತಬಣದಲ್ಲಿ ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ ಗುರುತಿಸಿಕೊಂಡಿದ್ದಾರೆ.
ಹೈಕಮಾಂಡ್ ಹೇಳಿದರೆ ದೇವನಹಳ್ಳಿಯಿಂದ ಸ್ಪರ್ಧೆ: ಮುನಿಯಪ್ಪ
13 ಕಡೆಗಳಲ್ಲಿ ದಾಳಿ: ಗಾಯಿತ್ರಿ ಶಾಂತೇಗೌಡ ಅವರ ಅಳಿಯ ಸಂತೋಷ್ ಅವರ ಮನೆ ಸೇರಿದಂತೆ ಒಟ್ಟು 13 ಕಡೆಗಳಲ್ಲಿ ಐಟಿ ತಂಡ ದಾಳಿ ನಡೆಸಿದ್ದು ಮಾಹಿತಿ ಕಲೆಹಾಕುತ್ತಿದೆ.
ಮದುವೆ ಬೋರ್ಡ್ ಹಾಕಿಕೊಂಡು ಬಂದಿರುವ ಐಟಿ ತಂಡ: ಗಾಯಿತ್ರಿ ಶಾಂತೇಗೌಡ ಅವರ ಮನೆ ಮೇಲೆ ದಾಳಿ ನಡೆಸಲು ಹತ್ತಕ್ಕೂ ಅಧಿಕ ಕಾರುಗಳಲ್ಲಿ ಬಂದಿರುವ ಅಧಿಕಾರಿಗಳ ತಂಡ, ವಾಹನದ ಮೇಲೆ ಮದುವೆಯ ಬೋರ್ಡ್ ಹಾಕಿಕೊಂಡಿದೆ. ಅಭಿನವ್ ವೆಡ್ಸ್ ದೀಪಿಕಾ ಎಂಬುದಾಗಿ ವಾಹನದಲ್ಲಿ ಹಾಕಲಾಗಿದೆ.
ಪಕ್ಷೇತರನಾಗಿ ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ: ಶಿವರಾಮೇಗೌಡ
ಐಟಿ ಅಧಿಕಾರಿಗಳು ವಿರುದ್ದ ಪ್ರತಿಭಟನೆ: ಐಟಿ ದಾಳಿ ನಡೆಯುತ್ತಿದ್ದಂತೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಐಟಿ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಗಾಯತ್ರಿ ಶಾಂತೇಗೌಡರು ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಶಾಸಕ ಸಿಟಿ ರವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.