Shraddha Murder Case: ಮೃತದೇಹ ಪೀಸ್ ಮಾಡಿದ ಬಳಿಕ ಆಕೆಯ ತಲೆಯನ್ನು ಫ್ರಿಡ್ಜ್‌ನಲ್ಲಿಟ್ಟು ಶ್ರದ್ಧಾ ಮುಖ ನೋಡ್ತಿದ್ದ ಪಾತಕಿ..!
ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಹೋಗಿದ್ದ ಅವರು ದೆಹಲಿಯ ಛತರ್‌ಪುರದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಭೇಟಿ ಮಾಡಿದ್ದಾರೆ. ದೆಹಲಿಗೆ ಶಿಫ್ಟ್ ಆದ ಬಳಿಕ ಅವರು ಮೊದಲು ಆ ವ್ಯಕ್ತಿಯ ಮನೆಯಲ್ಲೇ ಕೆಲ ಕಾಲ ತಂಗಿದ್ದರು ಎಂದು ವರದಿಗಳು ಹೇಳುತ್ತಿವೆ.
ಶ್ರದ್ಧಾ ವಾಕರ್‌ನನ್ನು (Shraddha Walker) 35 ಪೀಸ್ ಮಾಡಿ ಬರ್ಬರ ಹತ್ಯೆ (Murder) ಮಾಡಿದ ಪ್ರಕರಣವನ್ನು ದೆಹಲಿ ಪೊಲೀಸರು (Delhi Police) ತನಿಖೆ ನಡೆಸುತ್ತಿದ್ದಾರೆ. ಶ್ರದ್ಧಾಳನ್ನು ಕೊಲ್ಲಲೆಂದೇ ಅಫ್ತಾಬ್ ಪೂನಾವಾಲ (Aftab Poonawala) ದೆಹಲಿಯ (Delhi) ಛತರ್‌ಪುರ್‌ನಲ್ಲಿ (Chhatarpur) ಮನೆಯನ್ನು ಬಾಡಿಗೆಗೆ ಪಡೆದಿದ್ದನಾ ಎಂಬ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಶ್ರದ್ಧಾಳನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು 35 ಪೀಸ್ ಮಾಡಿ ಬಿಸಾಡಿದ 6 ತಿಂಗಳ ಹಳೆಯ ಪ್ರಕರಣವನ್ನು ಪೊಲೀಸರು ಇಂಚಿಂಚೂ ತನಿಖೆ ಮಾಡುತ್ತಿದ್ದಾರೆ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಅಫ್ತಾಬ್, ಫುಡ್ ಬ್ಲಾಗರ್ ಸಹ ಆಗಿದ್ದ ಎಂದು ದೆಹಲಿ ಪೊಲಿಸರು ಹೇಳಿದ್ದಾರೆ. ಹಾಗೂ, ಶ್ರದ್ಧಾ ಹಾಗೂ ಅಫ್ತಾಬ್ ಆಗಾಗ್ಗೆ ಜಗಳವಾಡುತ್ತಿದ್ದರೂ ಎಂದೂ ಹೇಳಿದ್ದಾರೆ.
ಆರೋಪಿ ಹಾಗೂ ಮೃತ ಶ್ರದ್ಧಾ ಡೇಟಿಂಗ್ ಸೈಟ್‌ವೊಂದರಲ್ಲಿ ಭೇಟಿಯಾಗಿದ್ದರು. ಅವರು 2019 ರಿಂದಲೂ ರಿಲೇಷನ್‌ಶಿಪ್‌ನಲ್ಲಿದ್ದರು ಹಾಗೂ ಈ ವರ್ಷ ದೆಹಲಿಗೆ ಶಿಫ್ಟ್ ಆಗಿದ್ದರು ಎಂದು ಪೊಲೀಸ್ ಮೂಲಗಳು ಸುದ್ದಿಸಂಸ್ಥೆಗೆ ಹೇಳಿದ್ದಾರೆ. ಇದಕ್ಕೂ ಮುನ್ನ ಅವರು ಮಹಾರಾಷ್ಟ್ರದಲ್ಲಿದ್ದರು.
ಇದನ್ನು ಓದಿ: Delhi Shraddha Murder Case: ಶ್ರದ್ಧಾ ಕೊಂದ ಬಳಿಕ ಮತ್ತೊಬ್ಬಳನ್ನು ಮನೆಗೆ ಕರೆತಂದಿದ್ದ ಅಫ್ತಾಬ್
ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಇವರಿಬ್ಬರೂ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಗಿರಿಧಾಮಗಳಿಗೆ ತೆರಳುತ್ತಿದ್ದರು ಹಾಗೂ ಇತರೆ ಹಲವು ಜಾಗಗಳಿಗೆ ಪ್ರವಾಸ ಹೋಗುತ್ತಿದ್ದರು ಎಂದೂ ಪೊಲೀಸರು ಹೇಳಿದ್ದಾರೆ. ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಹೋಗಿದ್ದ ಅವರು ದೆಹಲಿಯ ಛತರ್‌ಪುರದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಭೇಟಿ ಮಾಡಿದ್ದಾರೆ. ದೆಹಲಿಗೆ ಶಿಫ್ಟ್ ಆದ ಬಳಿಕ ಅವರು ಮೊದಲು ಆ ವ್ಯಕ್ತಿಯ ಮನೆಯಲ್ಲೇ ಕೆಲ ಕಾಲ ತಂಗಿದ್ದರು ಎಂದು ವರದಿಗಳು ಹೇಳುತ್ತಿವೆ.
ನಂತರ, ಅಫ್ತಾಬ್ ಛತರ್‌ಪುರದಲ್ಲೇ ಪ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದು ಶ್ರದ್ಧಾ ಜತೆಗೆ ಶಿಫ್ಟ್ ಆದ. ಅದೇ ಫ್ಲ್ಯಾಟ್‌ನಲ್ಲಿ ಮೇ 18 ರಂದು ಹತ್ಯೆ ಮಾಡಿದ. ಅಲ್ಲದೆ, ಈ ಕೊಲೆಗೂ ಕೆಲವೇ ದಿನಗಳ ಮುನ್ನ ಆ ಮನೆಯನ್ನು ಬಾಡಿಗೆಗೆ ಪಡೆಯಲಾಗಿತ್ತು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಹಿನ್ನೆಲೆ ಶ್ರದ್ಧಾಳನ್ನು ಕೊಲ್ಲಲು ಮೊದಲೇ ಪ್ಲ್ಯಾನ್ ಮಾಡಿದ್ದನಾ ಎಂದು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ: Delhi Shraddha Murder Case: ಮಹಿಳಾ ಹಕ್ಕು ಹೋರಾಟದ ಸೋಗು, ಗರ್ಲ್‌ಫ್ರೆಂಡನ್ನು 35 ಪೀಸ್ ಮಾಡಿದ ಪಾತಕಿ ಅಫ್ತಾಬ್
ಇನ್ನು, ಆಕೆಯ ದೇಹವನ್ನು 35 ಪೀಸ್ ಮಾಡಿದ್ದ ಅಫ್ತಾಬ್, ಪ್ರತಿದಿನ ನಸುಕಿನ ಜಾವ 2 ಗಂಟೆ ವೇಳೆಗೆ ಪೀಸ್‌ಗಳನ್ನು ಎಸೆಯಲು ಹೋಗುತ್ತಿದ್ದ. ಆತನ ಕುಟುಂಬ ಮುಂಬೈನಲ್ಲಿದ್ದು, ಡಿಗ್ರಿಯನ್ನು ಅಲ್ಲೇ ಮಾಡಿದ್ದ ಎಂದೂ ಪೊಲೀಸರು ಹೇಳಿದ್ದಾರೆ. ಅಲ್ಲದೆ, ಕೆಲ ಸಮಯ ಶ್ರದ್ಧಾ ಸಹ ಅಫ್ತಾಬ್ ಜತೆಯಲ್ಲಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಅವರು ದೆಹಲಿಗೆ ಶಿಫ್ಟ್ ಆದ ಬಳಿಕ ತಾವಿಬ್ಬರೂ ಮದುವೆಯಾಗಬೇಕೆಂದು ಶ್ರದ್ಧಾ ಒತ್ತಾಯ ಮಾಡುತ್ತಿದ್ದಳು. ಈ ಕಾರಣಕ್ಕೆ ಅವರು ಆಗಾಗ್ಗೆ ಜಗಳವಾಡುತ್ತಿದ್ದರು. ಇದೇ ರೀತಿ, ಮೇ 18 ರಂದು ಸಹ ಜಗಳವಾಡಿದ್ದಾರೆ. ಸಿಟ್ಟಿನಲ್ಲಿ ಆರೋಪಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ದೆಹಲಿ ಪೊಲೀಸ್ ಹೆಚ್ಚುವರಿ ಡಿಸಿಪಿ ಹೇಳಿದ್ದಾರೆ.
ಇದನ್ನೂ ಓದಿ: ದೇಶವನ್ನು ಬೆಚ್ಚಿ ಬೀಳಿಸಿದ ಭೀಕರ ಹತ್ಯೆ ಪ್ರಕರಣಗಳು..!
ಶ್ರದ್ಧಾ ಮೃತದೇಹವನ್ನು ಪೀಸ್ ಮಾಡಿಟ್ಟಿದ್ದ ರೂಮ್‌ನಲ್ಲೇ ಅಫ್ತಾಬ್ ಮಲಗುತ್ತಿದ್ದ. ಅಲ್ಲದೆ, ಫ್ರಿಡ್ಜ್‌ನಲ್ಲಿಟ್ಟಿದ್ದ ಆಕೆಯ ಮುಖವನ್ನು ನೋಡಿ, ದೇಹದ ಉಳಿದ ಭಾಗಗಳನ್ನು ಒಂದೊಂದಾಗಿ ಕಾಡಿಗೆ ಎಸೆಯುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಆತ ಶ್ರದ್ಧಾಗೂ ಮುನ್ನ ಹಲವು ಹುಡುಗಿಯರೊಂದಿಗೆ ಸಂಬಂಧದಲ್ಲಿದ್ದ. ಕೊಲೆ ಮಾಡುವ ಮುನ್ನ ಆತ ಹಲವು ಕ್ರೈಂ ಚಿತ್ರಗಳು ಹಾಗೂ ವೆಬ್ ಸೀರಿಸ್‌ಗಳನ್ನು ನೋಡುತ್ತಿದ್ದ. ಅಮೆರಿಕದ ಡೆಕ್ಸ್ಟರ್ ಸರಣಿಯೂ ಈ ಪೈಕಿ ಒಂದು ಎಂದು ಸಹ ಮೂಲಗಳು ಹೇಳಿವೆ.
ಇದನ್ನೂ ಓದಿ: ಮದ್ವೆ ಆಗು ಎಂದಿದ್ದೇ ತಪ್ಪಾಯ್ತು: ಗೆಳತಿಯ ಕೊಂದು 35 ಪೀಸ್ ಮಾಡಿದ ಪಾಪಿ