ಹೈದರಾಬಾದ್‌ನಿಂದ ಕರ್ನಾಟಕ ಬೀದರ್ ಜಿಲ್ಲೆಗೆ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಟನ್‌ಗಟ್ಟಲೇ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಹೈದರಾಬಾದ್ (ಜ.22): ಕರ್ನಾಟಕದ ಬೀದರ್‌ಗೆ ಸಾಗಿಸಲಾಗುತ್ತಿದ್ದ 1300 ಕೇಜಿ ಗಾಂಜಾವನ್ನು ಹೈದರಾಬಾದ್ ಸಮೀಪ ವಶ ಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಈ ಗಾಂಜಾ ಮೌಲ್ಯ ಸುಮಾರು 2 ಕೋಟಿ ರುಪಾಯಿ.
‘ಗಾಂಜಾ ಸಾಗಿಸಲಾಗುತ್ತಿದೆ’ ಎಂಬ ಗುಪ್ತಚರ ಮಾಹಿತಿ ಹೈದರಾಬಾದ್ ವಲಯದ ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ ಬಂದಿತ್ತು. ಇದರ ಜಾಡು ಹಿಡಿದು ಹೊರಟ ನಿರ್ದೇಶನಾಲಯದ ಸಿಬ್ಬಂದಿಯು, ಪೆಡ್ಡ ಅಂಬರ್‌ಪೇಟ್ ಟೋಲ್ ಪ್ಲಾಜಾದಲ್ಲಿ ಲಾರಿಯಲ್ಲಿದ್ದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
undefined
ಅತ್ತ ಅರಶಿನ, ಇತ್ತ ಮೆಣಸು, ಮಧ್ಯದಲ್ಲಿ ಗಾಂಜಾ.....
ಕಳ್ಳಸಾಗಣೆದಾರರು ಎಷ್ಟುಚಾಲಾಕಿಯಾಗಿದ್ದರು ಎಂದರೆ ಭತ್ತದ ಹೊಟ್ಟನ್ನು ಲೋಡ್ ಮಾಡಿ ಅದರೊಳಗೆ ಗಾಂಜಾವನ್ನು ಹೂತಿಟ್ಟಿದ್ದರು. ಇದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ನಿರ್ದೇಶನಾಲಯ ಹೇಳಿದೆ.
ಬೆಂಗಳೂರು: ಐಟಿ ಉದ್ಯೋಗಿಗಳಿಗೆ ಓರಿಸ್ಸಾದಿಂದ ಗಾಂಜಾ ಸಪ್ಲೈ, ಚಮತ್ಕಾರಿ ಸ್ಮಗ್ಲರ್ ಅರೆಸ್ಟ್
ಬಂಧಿತರಲ್ಲಿ ಒಬ್ಬನಾದ ಲಾರಿ ಚಾಲಕನನ್ನು ವಿಚಾರಣೆ ನಡೆಸಿದಾಗ, ‘ತೆಲಂಗಾಣದ ಭದ್ರಾಚಲಂನಲ್ಲಿ ಗಾಂಜಾ ಲೋಡ್ ಮಾಡಲಾಗಿತ್ತು. ಬೀದರ್‌ಗೆ ಇದನ್ನು ಸಾಗಿಸುತ್ತಿದ್ದೆವು’ ಎಂದು ಹೇಳಿದ್ದಾನೆ. ಈ ಗಾಂಜಾ ಬೆಳೆದವರು ಯಾರು, ಇದರ ರೂವಾರಿ ಯಾರು ಎಂಬ ಬಗ್ಗೆ ತನಿಖೆ ಮುಂದುವರಿಸಲಾಗಿದೆ.