ಆಂಧ್ರಪ್ರದೇಶದಲ್ಲಿ ಅತ್ಯಾಚಾರಿಗಳನ್ನು ಸೂಟ್ ಔಟ್ ಮಾಡಲಾಯ್ತು. ಇನ್ನು ನಿರ್ಭಯ ಅಪರಾಧಿಗಳಿಗೆ ಗಲ್ಲು ಫಿಕ್ಸ್ ಆಯ್ತು. ಈ ರೀತಿಯ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಸಹ ಅಂಜದ ಕಾಮುಕರು ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ. ಇದೀಗ ಮಹಾರಾಷ್ಟ್ರದಲ್ಲಿ ಶಿಕ್ಷಕರೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಮುಂಬೈ, [ಜ.21]: ಶಿಕ್ಷಕನಿಗೂ ವಿದ್ಯಾರ್ಥಿಗೂ ಅವಿನಾಭಾವ ಸಂಬಂಧವಿದೆ. ಮಗು ಮೊದಲು ಶಾಲೆಗೆ ಹೋದಾಗ ಶಿಕ್ಷಕ ಹೇಳಿದ್ದನೆಲ್ಲ ನಂಬುತ್ತದೆ. ಮಗುವಿನ ಜಗತ್ತಿನಲ್ಲಿ ಶಿಕ್ಷಕನೇ "ರೋಲ್ ಮಾಡೆಲ್", ಅವರೇ ಸೂಪರ್ ಮ್ಯಾನ್.
ಆದ್ರೆ, ಮಹಾರಾಷ್ಟ್ರದಲ್ಲಿ ಶಿಕ್ಷಕರೇ ವಿದ್ಯಾರ್ಥಿನಿಯನ್ನು ಗ್ಯಾಂಗ್ ರೇಪ್ ಮಾಡಿರುವ ಪ್ರಕರಣ ನಡೆದಿದೆ. ಸಾಂಸ್ಕೃತಿಕ ಕಾರ್ಯಕ್ರಮದ ವಿಡಿಯೋ ತೋರಿಸುತ್ತೇವೆ ಎಂದು ಬಾಲಕಿಯನ್ನು ನಂಬಿಸಿ ಕೊಠಡಿಯೊಂದರಲ್ಲಿ ಕರೆದುಕೊಂಡು ಹೋಗಿದ್ದಾರೆ. ಇದನ್ನು ನಂಬಿ ಹೋದ ವಿದ್ಯಾರ್ಥಿನಿಗೆ ಶಿಕ್ಷಕರು ಸೆಕ್ಸ್ ವಿಡಿಯೋ ತೋರಿಸಿ ಅತ್ಯಾಚಾರ ಎಸಗಿದ್ದಾರೆ.
ಕಾಂಗ್ರೆಸ್ ಮುಖಂಡನಿಂದ ಅತ್ಯಾಚಾರ: ಶಿಕ್ಷಕಿ ಆರೋಪ
ಹೌದು..ಇದು ಅಚ್ಚರಿ ಎನಿಸಿದರೂ ನಿಜವೇ. ಈ ಆಘಾತಕಾರಿ ಪ್ರಕರಣ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬಿಲೋಲಿ ತಾಲೂಕಿನ ಮಾರಥ್‍ವಾಡ ಎಂಬಲ್ಲಿ 2 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಬಗ್ಗೆ ಜನವರಿ 18ರಂದು ದೂರು ದಾಖಲಾಗಿದೆ ಎಂದು ನಾಂದೇಡ್ ಜಿಲ್ಲೆಯ ಬಿಲೋಲಿ ತಾಲೂಕಿನ ಉಪ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧೇಶ್ವರ ಧುಮಾಲ್ ಮಾಹಿತಿ ನೀಡಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ವಿಡಿಯೋ ತೋರಿಸುತ್ತೇವೆ ಎಂದು ಬಾಲಕಿಯನ್ನು ನಂಬಿಸಿ ಶಾಲೆಯ ಕೊಠಡಿಯೊಂದರಲ್ಲಿ ಆಕೆಗೆ ಸೆಕ್ಸ್ ವಿಡಿಯೋ ತೋರಿಸಿ 6ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಇಬ್ಬರು ಶಿಕ್ಷಕರು ಸೇರಿ ಅತ್ಯಾಚಾರವೆಸಗಿದ್ದಾರೆ.
ಲೈಂಗಿಕ ದೌರ್ಜನ್ಯ ಕೇಸ್ ಹಿಂಪಡೆಯದ್ದಕ್ಕೆ ಹಲ್ಲೆ; ಸಂತ್ರಸ್ತೆ ತಾಯಿ ಸಾವು!
ಬಳಿಕ ಆಕೆಯನ್ನು ಅತ್ಯಾಚಾರಗೈದಿದ್ದರು. ಈ ಬಗ್ಗೆ ಬಾಲಕಿ ತನ್ನ ಪೋಷಕರ ಬಳಿ ತಿಳಿಸಿದಾಗ, ಹೆತ್ತವರು ಶಾಲೆಗೆ ಬಂದು ಮುಖ್ಯೋಪಾಧ್ಯಾಯರ ಬಳಿ ದೂರು ನೀಡಲು ಹೋದಾಗ ಅವರಿಗೇ ಬೆದರಿಕೆ ಹಾಕಿ ಕಳುಹಿಸಿದ್ದಾರೆ.
ಆದರೂ ಬಾಲಕಿಯ ಪೋಷಕರು ಮಾತ್ರ ತಮ್ಮ ಪ್ರಯತ್ನ ಬಿಡದೆ ಶಿಕ್ಷಕರ ವಿರುದ್ಧ ಹೋರಾಟಕ್ಕೆ ನಿಂತರು. ಅಷ್ಟೇ ಅಲ್ಲದೇ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಬಿಲೋಲಿ ತಾಲೂಕಿ ಮಾರಥ್‍ವಾಡ ಹಳ್ಳಿ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರು.
ಕೊನೆಗೂ ಜ. 18ರಂದು ಒರ್ವ ಮಹಿಳಾ ಶಿಕ್ಷಕಿ ಸೇರಿಂದತೆ ಒಟ್ಟು ಐವರ ವಿರುದ್ಧ ಪೊಲೀಸರು ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಇಬ್ಬರು ಶಿಕ್ಷಕರು ಕೂಡ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಚರಣೆ ನಡೆಸಿದ್ದಾರೆ.