ಯಾದಗಿರಿ: ರಿಯಲ್ ಎಸ್ಟೇಟ್ ದಂಧೆಕೋರರಿಂದ ವಂಚನೆ, ಲೇಔಟ್ ರಚಿಸಿ ಗ್ರಾಹಕರಿಗೆ ಮೋಸ..!

By Girish GoudarFirst Published Feb 1, 2023, 12:30 AM IST
Highlights

ಸರ್ಕಾರದ ನಿಯಮ ಉಲ್ಲಂಘಿಸಿ ಲೇಔಟ್ ರಚನೆ ಮಾಡೋದು ನಂತರ ನಿವೇಶನ ಮಾಡಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಮಾರಾಟ ಮಾಡಿ ಗ್ರಾಹಕರು ಮತ್ತು ಸರ್ಕಾರಕ್ಕೆ ಮೋಸ ಮಾಡೋದು ಯಾದಗಿರಿಯಲ್ಲಿ ದಂಧೆಯಾಗಿ ಬಿಟ್ಟಿದೆ.

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ(ಫೆ.01):  ಸೈಟ್‌ಗಳನ್ನು ಖರಿದೀಸುವ ಎಚ್ಚರ ವಹಿಸಬೇಕಾದ ಸಂಗತಿಯೊಂದು ಬೆಳಕಿಗೆ ಬಂದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸೈಟ್ ಗಳನ್ನು ಖರಿದಿಸಲಾಗುತ್ತದೆ, ಆದ್ರೆ ಗ್ರಾಹಕರಿಗೆ ಮೋಸ ಆಗದಂತೆ ಫಂಗನಾಮ ಹಾಕುವುದು ಮಾತ್ರ ಗಮನಕ್ಕೆ ಬಾರದ ರೀತಿಯಲ್ಲಿ ಮಾಡುತ್ತಾರೆ. ಅಂತಹ ಪ್ರಕರಣ ಯಾದಗಿರಿ ನಗರದ ವಿವಿದೆಡೆ ಕಂಡು ಬಂದಿದೆ. ಸರ್ಕಾರದ ನಿಯಮ ಉಲ್ಲಂಘಿಸಿ ಲೇಔಟ್ ರಚನೆ ಮಾಡೋದು ನಂತರ ನಿವೇಶನ ಮಾಡಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಮಾರಾಟ ಮಾಡಿ ಗ್ರಾಹಕರು ಮತ್ತು ಸರ್ಕಾರಕ್ಕೆ ಮೋಸ ಮಾಡೋದು ಈಗ ಯಾದಗಿರಿಯಲ್ಲಿ ದಂಧೆಯಾಗಿ ಬಿಟ್ಟಿದೆ.

ತಾತ್ಕಾಲಿಕ ವಿನ್ಯಾಸದ ಅನುಮೋದನೆ ಪಡೆದು ಮೋಸ..!

ರಿಯಲ್ ಎಸ್ಟೇಟ್ ಮಾಡುವ ದಂಧೇಕೋರರ ಕರಾಳ ಮೋಸ ಬಟಾ ಬಯಲಾಗಿದೆ. ಬಹಳಷ್ಟು ಗ್ರಾಹಕರಿಗೆ ವಂಚನೆ ಮಾಡುವ ಪ್ರಕರಣಗಳು ಯಾದಗಿರಿಯಲ್ಲಿ ಹೆಚ್ಚಾಗ್ತಾ ಇದಾವೆ. ಇಂತಹ ಪ್ರಕರಣ ಈಗ ಮತ್ತೆ ಬೆಳಕಿಗೆ ಬಂದಿದ್ದು, ಯಾದಗಿರಿ ನಗರದ ಹಲವು ಕಡೆ ಸರ್ಕಾರದ ಲೇಔಟ್ ನಿಯಮವನ್ನು ಗಾಳಿಗೆ ತೂತಿ ಗ್ರಾಹಕರು ಮತ್ತು ಸರ್ಕಾರದ ಕಣ್ಣಿಗೆ ಮಣ್ಣು ಎರಚಿದ್ದಾರೆ. ಯಾದಗಿರಿ ನಗರದ ಹೊರವಲಯದ ಯಾದಗಿರಿ ಬಿ ಗ್ರಾಮದ ಸರ್ವೇ ನಂಬರ್ 681 ಸೇರಿದಂತೆ ಬಹುತೇಜ ಕಡೆ ಸರ್ಕಾರದ ನಿಯಮವನ್ನು ನಿರ್ಲಕ್ಷಿಸಿ ರಾಜಾರೋಷವಾಗಿ ಮಾರಾಟ ಮಾಡುವ ದಂಧೇಕೋರರ ಬಣ್ಣ ಬಯಲಾಗಿದೆ. ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ತಾತ್ಕಾಲಿಕ ವಿನ್ಯಾಸದ ಅನುಮೋದನೆ ಪಡೆಯುತ್ತಾರೆ. ನಂತರ ಅದನ್ನೆ 100% ಅಭಿವೃದ್ಧಿ ಹೊಂದಿದ ಸೈಟ್ ಅಂತ ಗ್ರಾಹಕರಿಂದ ದುಡ್ಡು ತೆಗೆದುಕೊಳ್ಳುವುದು ಜೊತೆಗೆ ಸರ್ಕಾರಕ್ಕೂ ಕೂಡ ಅವರಿಂದ ಪಡೆದ ಹಣವನ್ನು ತಾವೇ ಕಬಳಿಸಿ ತೇರಿಗೆ ಕಟ್ಟದೇ ಮೋಸ ಮಾಡಿ ಯಾವುದೇ ಮೂಲಭೂತ ಸೌಕರ್ಯ ಒದಗಿಸದೇ ಮೋಸ ಮಾಡುತ್ತಾರೆ. ಇದರಿಂದ ರಿಯಲ್ ಎಸ್ಟೇಟ್ ದಂಧೇಕೋರರ ಕರಾಳ ಮುಖ ಬಯಲಾಗಿದೆ.

ಬಿಜೆಪಿ ‘ಪಾಪದ ಪುರಾಣ’ ಪ್ರಚಾರಕ್ಕಾಗಿ ಯಾತ್ರೆ: ಸಿದ್ದರಾಮಯ್ಯ

ಲೇಔಟ್‌ನಲ್ಲಿ ಇವು ಇರಲೆಬೇಕಾದ ಮೂಲಭೂತ ಸೌಕರ್ಯಗಳು..!

ಒಂದು ಲೇಔಟ್ ಅಂದ್ರೆ ಅದಕ್ಕೆ ತನ್ನದೆಯಾದ ಕಂಡಿಷನ್ಸ್ ಇವೆ. ಮೂಲಭೂತ ಸೌಕರ್ಯಗಳಾದ ನೀರು ಸರಬರಾಜು, ಚರಂಡಿ ವ್ಯವಸ್ಥೆ, ರಸ್ತೆ, ವಿದ್ಯುತ್ ಸೌಲಭ್ಯಗಳು, ಉದ್ಯಾನವನ ಅಭಿವೃದ್ಧಿ ಸೇರಿದಂತೆ 10 ಕ್ಕೂ ಹೆಚ್ಚು ಕಂಡಿಷನ್ಸ್ ಇವೆ. ಆದ್ರೆ ಯಾದಗಿರಿಯಲ್ಲಿ ಅಗುವ ಲೇಔಟ್ ನಲ್ಲಿ ಇಲ್ಲಿನ ಯಾವುದೇ ಸೌಲಭ್ಯಗಳು ಒದಗಿಸಲ್ಲ. ಆದ್ರೆ ಗ್ರಾಹಕರಿಂದ ಮಾತ್ರ ಹಣವನ್ನು ಪಡೆದು ವಂಚಿಸಲಾಗುತ್ತದೆ. ಯಾದಗಿರಿ ನಗರದಲ್ಲಿ ಸೈಟ್ ಗಳು ಭಾರಿ ಡಿಮ್ಯಾಂಡ್ ಆಗಿದ್ದು, ಕೆಲವು ರಿಯಲ್ ಎಸ್ಟೇಟ್ ದಂಧೇಕೋರರು ಇಂತಹ ಅಡ್ಡದಾರಿ ಹಿಡಿದು ಹಣ ಪಡೆದು ಹಗಲು ದರೋಡೆಗೆ ಇಳಿದಿದ್ದಾರೆ. ಇದೊಂದು ಅನಧಿಕೃತ ಲೇಔಟ್ ಮಾಡಿ ನಿವೇಶನ ಮಾರಾಟ ಮಾಡಿ ಹಣ ಸಂಪಾದನೆ ಮಾಡಲು ಕೆಲ ಲೇಔಟ್ ಮಾಲೀಕರು ಯಾದಗಿರಿಯಲ್ಲಿ ದಂಧೆಗೆ ಇಳಿದಿದ್ದಾರೆ. ಒಇ ರೀತಿಯಾಗಿ ನಗರಸಭೆ ಅಧಿಕಾರಿಗಳು ಕೂಡ ಈ ನಿವೇಶನಗಳಿಗೆ ಖಾತಾ ನಕಲು ನೀಡಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆಯ ಆದೇಶ ಉಲ್ಳಂಘಿಸಿ ಆಮಿಷಕ್ಕೆ ಒಳಾಗಾಗಿ ನಿವೇಶನಗಳನ್ನು ನೋಂದಣಿ ಮಾಡಿದ್ದು ಕಂಡುಬರುತ್ತಿದೆ. ಇದೊಂದು ಅನಧಿಕೃತ ದಂಧೆಗೆ ಸರ್ಕಾರಿ ಅಧಿಕಾರಿಗಳು ಸಾಥ್ ಕೊಡುತ್ತಿದ್ದು ವಿಪರ್ಯಾಸವೇ ಸರಿ.

ನಗರಾಭಿವೃದ್ಧಿ ಕೋಶದ ಅಧಿಕಾರಿ ಪೌರಾಯುಕ್ತರಿಗರ ಪತ್ರ

ಯಾದಗಿರಿ ಬಿ ಗ್ರಾಮದ ಸರ್ವೇ ನಂಬರ್ 681 ರ 4 ಎಕರೆತ ನಿವೇಶನಗಳಿಗೆ ಖಾತಾ ನಕಲು ನೀಡಿದ್ದ ನಗರಸಭೆ ಪೌರಾಯುಕ್ತ, ಲೇಔಟ್ ಮಾಲೀಕರು ಹಾಗೂ ಉಪ ನೋಂದಣಾಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅನತುಗೊಳಸುವಂತೆ ನಗರಾಭಿವೃದ್ಧಿ ಕೋಶ ಅಧಿಕಾರಿ ಪತ್ರ ಬರೆದಿದ್ದಾರೆ. ಈ ಪತ್ರ ಬರೆದಿರುವುದು ಅಧಿಕಾರಿಗಳು ಹಾಗೂ ಕೆಲ ಲೇಔಟ್ ಮಾಲೀಕರ ಢವ ಢವ ಶುರುವಾಗಿದೆ. ಇದರಿಂದ ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರು ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿರುವ ಮೇಲೆ ಸೂಕ್ತ ಕ್ರಮ ಆದ್ರೆ ಮಾತ್ರ ಇಂತಹ ಕಾನೂನುಬಾಹಿರ ಹಾಗೂ ಅನಧಿಕೃತ ವ್ಯವಹಾರಗಳು ನಿಲ್ಲುತ್ತವೆ.

click me!