ಶೇ.10 ಕಮಿಷನ್‌: ಲೋಕಾಯುಕ್ತ ಬಲೆಗೆ ಬಿದ್ದ ಆಹಾರ ಸುರಕ್ಷತೆ ಪ್ರಾಧಿಕಾರ ಕ್ಲರ್ಕ್

By Kannadaprabha News  |  First Published Nov 8, 2022, 7:08 AM IST

ತಮ್ಮ ಇಲಾಖೆಯ ಕಚೇರಿಗಳಿಗೆ ಹವಾ ನಿಯಂತ್ರಕಗಳನ್ನು ಪೂರೈಸಿದ್ದ ಗುತ್ತಿಗೆದಾರರಿಗೆ ಹಣ ಬಿಡುಗಡೆಗೆ ಶೇಕಡ 10 ರಷ್ಟುಕಮಿಷನ್‌ ರೂಪದಲ್ಲಿ ಲಂಚ ಪಡೆಯುತ್ತಿದ್ದ ಆಹಾರ ಸುರಕ್ಷತೆ ಮತ್ತು ಪ್ರಾಧಿಕಾರದ ದ್ವಿತೀಯ ದರ್ಜೆ ಸಹಾಯಕನೊಬ್ಬ (ಎಸ್‌ಡಿಸಿ) ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.


ಬೆಂಗಳೂರು (ನ.8) : ತಮ್ಮ ಇಲಾಖೆಯ ಕಚೇರಿಗಳಿಗೆ ಹವಾ ನಿಯಂತ್ರಕಗಳನ್ನು ಪೂರೈಸಿದ್ದ ಗುತ್ತಿಗೆದಾರರಿಗೆ ಹಣ ಬಿಡುಗಡೆಗೆ ಶೇಕಡ 10 ರಷ್ಟುಕಮಿಷನ್‌ ರೂಪದಲ್ಲಿ ಲಂಚ ಪಡೆಯುತ್ತಿದ್ದ ಆಹಾರ ಸುರಕ್ಷತೆ ಮತ್ತು ಪ್ರಾಧಿಕಾರದ ದ್ವಿತೀಯ ದರ್ಜೆ ಸಹಾಯಕನೊಬ್ಬ (ಎಸ್‌ಡಿಸಿ) ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟಪ್ರಾಧಿಕಾರದ ಉಪ ಆಯುಕ್ತ (ಆಡಳಿತ) ವಿಭಾಗದ ಎಸ್‌ಡಿಸಿ ಶಶಿಕುಮಾರ್‌ ಬಂಧಿತನಾಗಿದ್ದು, ತನ್ನ ಕಚೇರಿಯಲ್ಲೇ ಗುತ್ತಿಗೆದಾರರಿಂದ .50 ಸಾವಿರ ಲಂಚ ಪಡೆಯುವಾಗ ಆತ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

Tap to resize

Latest Videos

ನಗರದ ಕೆ.ಆರ್‌.ಸರ್ಕಲ್‌ ಸಮೀಪ ಎಸ್‌ಜೆಬಿ ಪಾಲಿಟೆಕ್ನಿಕ್‌ ಕಾಲೇಜಿನ ಮುಂಭಾಗದ ರಾಜ್ಯ ಕೃಷಿ ಇಲಾಖೆಯ ಆಯುಕ್ತರ ಕಾರ್ಯಾಲಯದ ಕಟ್ಟಡದಲ್ಲಿ ಪ್ರಾಧಿಕಾರ ಕಚೇರಿಗೆ ಹವಾ ನಿಯಂತ್ರಕಗಳ ಪೂರೈಕೆಗೆ ದೂರುದಾರರು ಗುತ್ತಿಗೆ ಪಡೆದಿದ್ದರು. ಅಂತೆಯೇ ಕಚೇರಿಗೆ ಹವಾ ನಿಯಂತ್ರಕಗಳ ಅಳವಡಿಕೆ ಬಳಿಕ ಹಣ ಬಿಡುಗಡೆಗೆ ಪ್ರಾಧಿಕಾರದ ಆಡಳಿತ ವಿಭಾಗದ ಉಪ ಆಯುಕ್ತರ ಕಚೇರಿಗೆ ಗುತ್ತಿಗೆದಾರರು ಮನವಿ ಮಾಡಿದ್ದರು. ಆಗ ಹಣ ಬಿಡುಗಡೆಗೆ ಒಟ್ಟು ವೆಚ್ಚದ ಶೇ.10 ರಷ್ಟುಕಮಿಷನ್‌ ರೂಪದಲ್ಲಿ .50 ಸಾವಿರ ಲಂಚ ನೀಡುವಂತೆ ಎಸ್‌ಡಿಸಿ ಶಶಿಕುಮಾರ್‌ ಬೇಡಿಕೆ ಇಟ್ಟಿದ್ದ.

ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಗುತ್ತಿಗೆದಾರರು ದೂರು ಸಲ್ಲಿಸಿದ್ದರು. ಅಂತೆಯೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಗುತ್ತಿಗೆದಾರರಿಂದ ಹಣ ಸ್ವೀಕರಿಸುವಾಗ ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಕಳೆದಿದ್ದ ಮೊಬೈಲ್ ಹುಡುಕಿಕೊಡೋಕೆ 5000 ರೂ. ಲಂಚ ; ಲೋಕಾಯುಕ್ತ ಬಲೆಗೆ ಬಿದ್ದ ಕಾನ್‌ಸ್ಟೇಬಲ್

click me!