Loan Fraud: 100 ಕೋಟಿ ಸಾಲದಾಸೆ ತೋರಿಸಿ 1.8 ಕೋಟಿ ಧೋಖಾ: ಕಂಗಾಲಾದ ಉದ್ಯಮಿ..!

By Kannadaprabha News  |  First Published Dec 10, 2021, 9:41 AM IST

*   ಸಾಲ ನೀಡುವ ಮೊದಲೇ 3 ತಿಂಗಳ ಬಡ್ಡಿ ವಸೂಲಿ
*   ಹೈದರಾಬಾದ್‌ ಮೂಲದ ಉದ್ಯಮಿಗೆ ಮೋಸ, ನಾಲ್ವರ ಬಂಧನ
*   ತಲೆಮರೆಸಿಕೊಂಡ ಆರೋಪಿಯ ಬಂಧನಕ್ಕೆ ಜಾಲ ಬೀಸಿದ ಪೊಲೀಸರು


ಬೆಂಗಳೂರು(ಡಿ.10):  ಉದ್ಯಮಿಯೊಬ್ಬರಿಗೆ 100 ಕೋಟಿ ರು. ಸಾಲ ಕೊಡುವುದಾಗಿ ಮುಂಗಡವಾಗಿ ಮೂರು ತಿಂಗಳ ಬಡ್ಡಿ ರೂಪದಲ್ಲಿ 1.8 ಕೋಟಿ ರು. ಪಡೆದು ಬಳಿಕ ಸಾಲ ನೀಡದೇ ವಂಚಿಸಿದ್ದ(Fraud) ಪ್ರಕರಣ ಸಂಬಂಧ ನಾಲ್ಕು ಮಂದಿ ಆರೋಪಿಗಳನ್ನು(Accused) ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಚ್‌ಎಸ್‌ಆರ್‌ ಲೇಔಟ್‌ನ ನರೇಶ್‌(36), ವಿಜಯ್‌ ಆನಂದ್‌(37), ನಿವೇದಿತಾ(37), ಹರ್ಷಿಣಿ(29) ಬಂಧಿತರು(Arrest). ಆರೋಪಿಗಳು ಇತ್ತೀಚೆಗೆ ಹೈದರಾಬಾದ್‌(Hyderabad) ಮೂಲದ ಉದ್ಯಮಿ(Businessman) ಪಿ.ಕೃಷ್ಣಂ ರಾಜು ಅವರಿಗೆ 100 ಕೋಟಿ ರು. ಸಾಲ(Loan) ನೀಡುವುದಾಗಿ ನಂಬಿಸಿ ಮುಂಗಡವಾಗಿ ಮೂರು ತಿಂಗಳ ಬಡ್ಡಿ(Interest) 1.8 ಕೋಟಿ ರು. ಪಡೆದು ಬಳಿಕ ಸಾಲ ನೀಡದೇ ವಂಚಿಸಿದ್ದರು. 

ಈ ಸಂಬಂಧ ಉದ್ಯಮಿಯ ಅಳಿಯ ಮಂಥೆನಾ ತರುಣ್‌ ಗಾಂಧಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ತಮಿಳುನಾಡು(Tamil Nadu) ಮೂಲದ ಕಾತಿರ್‌ ವೇಲನ್‌ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

undefined

Car seized Nelamangala:ತೆರಿಗೆ ವಂಚನೆ ಹಾಗೂ ಅಕ್ರಮ ರಿಜಿಸ್ಟ್ರೇಶನ್, ನೆಲಮಂಗಲದಲ್ಲಿ 8 ಐಷಾರಾಮಿ ಕಾರು ಜಪ್ತಿ!

ಸಾಲ ನೀಡುವ ಮೊದಲೇ ಬಡ್ಡಿ ವಸೂಲಿ:

ವಂಚನೆಗೆ ಒಳಗಾಗಿರುವ ಉದ್ಯಮಿ ಕೃಷ್ಣಂ ರಾಜು ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಡಿ.1ರಂದು ವಿಜಯ್‌ ಭಾಸ್ಕರ್‌ ಮತ್ತು ನರಸಿಂಹರಾವ್‌ ಎಂಬುವರು ಹೈದರಾಬಾದ್‌ನಲ್ಲಿ ಕೃಷ್ಣಂ ರಾಜು ಅವರನ್ನು ಭೇಟಿಯಾಗಿ ಬೆಂಗಳೂರಿನಲ್ಲಿರುವ ಫ್ಯೂಚರ್‌ ಕ್ರೆಸ್ಟ್‌ ವೆಂಚರ್‌ ಹೆಸರಿನ ಕಂಪನಿಯಿಂದ ವ್ಯವಹಾರಕ್ಕಾಗಿ ನಿಮಗೆ 100 ಕೋಟಿ ರು. ಸಾಲ ಕೊಡಿಸುವುದಾಗಿ ಹೇಳಿದ್ದರು. ಅದರಂತೆ ಕೃಷ್ಣಂ ರಾಜು ಅವರನ್ನು ಡಿ.2ರಂದು ನಗರಕ್ಕೆ ಕರೆತಂದು ಕಾತಿರ್‌ ವೇಲನ್‌ನನ್ನು ಕಂಪನಿಯ ಮುಖ್ಯಸ್ಥನೆಂದು ಪರಿಚಯಿಸಿದ್ದರು.

ಈ ವೇಳೆ ಆರೋಪಿ ಕಾತಿರ್‌ ವೇಲನ್‌ 100 ಕೋಟಿ ರು. ಸಾಲ ಬೇಕಾದರೆ, ಮೂರು ತಿಂಗಳ ಬಡ್ಡಿ 1.81 ಕೋಟಿ ರು. ಹಣವನ್ನು ಮುಂಗಡವಾಗಿ ಪಾವತಿಸಬೇಕು ಎಂದು ಹೇಳಿದ್ದಾನೆ. ಈತನ ಮಾತು ನಂಬಿದ ಕೃಷ್ಣಂ ರಾಜು ಆರೋಪಿ ನೀಡಿದ್ದ ಖಾತೆಗಳಿಗೆ ವಿವಿಧ ಹಂತಗಳಲ್ಲಿ 1.80 ಕೋಟಿ ರು. ಹಣ ಪಾವತಿಸಿದ್ದರು. ಡಿ.8ರಂದು ಕಾತಿರ್‌ ವೇಲನ್‌ಗೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದೆ. ಬಳಿಕ ಕಂಪನಿ ಕಚೇರಿ ಬಳಿ ತೆರಳಿ ವಿಚಾರಿಸಿದಾಗ ಉದ್ಯೋಗಿಗಳು ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ವಂಚನೆ ದೂರು ದಾಖಲಿಸಿದರು. ಇದೊಂದು ವ್ಯವಸ್ಥಿತ ವಂಚನೆ ಜಾಲವಾಗಿದ್ದು, ಹೆಚ್ಚಿನ ತನಿಖೆಯಿಂದ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Aadhaar Card : ಆಧಾರ್ ಕಾರ್ಡ್ ಹೊಂದಿರೋರು ಈ ತಪ್ಪು ಮಾಡಿ ಆಮೇಲೆ ಗೋಳಾಡಬೇಡಿ

1.5 ಕೋಟಿಗೆ ಚಿನ್ನ ಖರೀದಿ !

ಆರೋಪಿಗಳು ಉದ್ಯಮಿ ಪಿ.ಕೃಷ್ಣ ರಾಜು ಅವರಿಂದ ಪಡೆದಿದ್ದ 1.8 ಕೋಟಿ ರು. ಪೈಕಿ 30 ಲಕ್ಷ ರು. ಅನ್ನು ಬ್ಯಾಂಕ್‌ನಲ್ಲಿ(Bank) ಠೇವಣಿ ಇರಿಸಿದ್ದರು. ಉಳಿದ 1.50 ಕೋಟಿ ರು. ಹಣಕ್ಕೆ ಚಿನ್ನಾಭರಣ(Gold) ಖರೀದಿಸಿದ್ದರು. ಆ ಚಿನ್ನಾಭರಣ ಸದ್ಯ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಾತಿರ್‌ ವೇಲನ್‌ ಬಳಿ ಇದೆ. ಆರೋಪಿಗಳು ಈ ಹಿಂದೆ ಹಲವರಿಗೆ ಸಾಲ ನೀಡುವುದಾಗಿ ನಂಬಿಸಿ ಬಡ್ಡಿ ರೂಪದಲ್ಲಿ ಮುಂಗಡ ಕೋಟ್ಯಂತರ ರು. ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರೆಕಾಲಿಕ ಉದ್ಯೋಗ ಆಮಿಷ: 5.31 ಲಕ್ಷ ರು. ವಂಚನೆ

ಮಂಗಳೂರು(Mangaluru): ಅರೆಕಾಲಿಕ ಉದ್ಯೋಗಕ್ಕೆ(Parttime Job) ಆಯ್ಕೆಯಾಗಿರುವುದಾಗಿ ಅಪರಿಚಿತನಿಂದ ಬಂದ ಸಂದೇಶಕ್ಕೆ ಸ್ಪಂದಿಸಿದ ಪರಿಣಾಮ ಬ್ಯಾಂಕ್‌ ಖಾತೆಗಳಿಂದ ಹಂತ ಹಂತವಾಗಿ 5,31,200 ರು. ಕಳೆದುಕೊಂಡು ವಂಚನೆಗೊಳಗಾದ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!